
‘ಧುರಂಧರ’ (ಧುರಂಧರ) ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಸತ್ಯ’ ಚಿತ್ರದ ದೃಶ್ಯಗಳು ಎಂಬ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿದೆ. ‘ಧುರಂಧರ’ ನಿರ್ದೇಶಕ ಆದಿತ್ಯ ಧಾರ್ (ಆದಿತ್ಯ ಧಾರ್) ಅವರು ಆರ್ಜಿವಿ ಶೈಲಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ (ರಾಮ್ ಗೋಪಾಲ್ ವರ್ಮಾ) ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರ ಕೆಲಸದಿಂದ ಯಾರಾದರೂ ಪ್ರಭಾವಿತರಾಗುವುದು ಸಾಮಾನ್ಯ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.
‘ಆದಿತ್ಯ ಧಾರ್ ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಪ್ರತಿಯೊಬ್ಬ ಸಿನಿಮಾ ಮೇಕರ್ ಕೂಡ ಈ ಹಿಂದೆ ನೋಡಿದ ಅಥವಾ ಇಷ್ಟಪಟ್ಟ ಸಿನಿಮಾಗಳಿಂದ ಪ್ರಭಾವಿತರಾಗಿಯೇ ಇರುತ್ತಾರೆ. ನನ್ನದೇ ಸಿನಿಮಾಗಳ ಉದಾಹರಣೆ ಇದೆ. ಬ್ರೂಸ್ ಲೀ ಅವರ ‘ರಿಟರ್ನ್ ಆಫ್ ದಿ ಡ್ರ್ಯಾಗನ್’ ಮತ್ತು ಸನ್ನಿ ಡಿಯೋಲ್ ಅವರ ‘ಅರ್ಜುನ್’ ಚಿತ್ರದಿಂದ ‘ಶಿವ’ ಸಿನಿಮಾ ಪ್ರೇರಿತವಾಗಿತ್ತು. ಹಾಗೆಯೇ ‘ಸತ್ಯ’ ಚಿತ್ರದಲ್ಲಿ ‘ದಿ ಗಾಡ್ ಫಾದರ್’ ಮತ್ತು ‘ಗುಡ್ ಫೆಲ್ಲಾಸ್’ ಚಿತ್ರಗಳ ಪ್ರಭಾವವಿತ್ತು’ ಎಂದು ರಾಮ್ ಗೋಪಾಲ್ ವರ್ಮಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ರಾಮ್ ಗೋಪಾಲ್ ವರ್ಮಾ ಅವರು ಆದಿತ್ಯ ಧಾರ್ ಜೊತೆಗೆ ಮಾತನಾಡಿದ ವಿಷಯವನ್ನು ಹಂಚಿಕೊಂಡಿದ್ದಾರೆ. ‘ತಾನು ಮುಖ್ಯವಾಗಿ ‘ಸತ್ಯ’ ಮತ್ತು ‘ಕಂಪನಿ’ ಸಿನಿಮಾಗಳಿಂದ ಪ್ರೇರಿತನಾಗಿದ್ದರೆ, ಅದಕ್ಕೆ ಸ್ವಲ್ಪ ದೇಶಭಕ್ತಿಯನ್ನು ಬೆರೆಸಿ ಧುರಂಧರ ಸಿನಿಮಾ ಸಿದ್ಧಪಡಿಸಿದೆ ಎಂದು ಆದಿತ್ಯ ಅವರೇ ನನಗೆ ಹೇಳಿದ್ದರು’ ಎಂದು ಆರ್ಜಿವಿ ಹೇಳಿದ್ದಾರೆ. ಆ ಬಗ್ಗೆ ಆದಿತ್ಯ ಧಾರ್ ಏನು ಹೇಳುತ್ತಾರೆ ಎಂಬ ಕೌತುಕ ಮೂಡಿದೆ.
ಮಾರ್ಚ್ 19ಕ್ಕೆ ‘ಧುರಂಧರ 2: ದಿರಿವೆಂಜ್’ ಸಿನಿಮಾ ಬಿಡುಗಡೆ ಆಗಲಿದೆ. ಎಲ್ಲರ ಕಣ್ಣು ಸಿನಿಮಾದ ಮೇಲಿದೆ. ರಾಮ್ ಗೋಪಾಲ್ ವರ್ಮಾ ಅವರು ಮೊದಲಿನಿಂದಲೂ ‘ಧುರಂಧರ’ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಅವರು ‘ಧುರಂಧರ 2’ ಸಿನಿಮಾದ ಟ್ರೈಲರ್ ನೋಡಿ ಹೊಗಳಿದ್ದರು. ಸಿನಿಮಾಗೆ ಅವರ ಪ್ರತಿಕ್ರಿಯೆ ಹೇಗಿರಲಿದೆ ಎಂದು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.
ಇದನ್ನೂ ಓದಿ: ಸಾವಿರ ಪರದೆಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತಿದೆ ‘ಧುರಂಧರ’ ಸಿನಿಮಾ
ಒಂದು ದಿನ ಮೊದಲೇ ‘ಧುರಂಧರ 2’ ಸಿನಿಮಾದ ಪೇಯ್ಡ್ ಪ್ರೀಮಿಮರ್ ಶೋಗಳು ನಡೆಯಲಿವೆ. ಮಾರ್ಚ್ 18ರ ಸಂಜೆ 5 ಗಂಟೆಯಿಂದ ದೇಶಾದ್ಯಂತ ಪ್ರೀಮಿಯರ್ ಶೋ ಆರಂಭ ಆಗಲಿದೆ. ಈ ಶೋಗಳ ಮುಂಗಡ ಟಿಕೆಟ್ ಬುಕಿಂಗ್‌ನಿಂದಲೇ ಈ ಚಿತ್ರಕ್ಕೆ 34 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಇನ್ನೂ ಹೆಚ್ಚಾಗುವುದು ಗ್ಯಾರಂಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.