
‘ಧುರಂಧರ 2’ (ಧುರಂಧರ) ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದೆ. ಬಿಡುಗಡೆ ಆದ ವಾರಕ್ಕೂ ಮುಂಚೆಯೇ 500 ಕೋಟಿಗೂ ಹೆಚ್ಚು ಗಳಿಕೆಯನ್ನು ಭಾರತದಲ್ಲಿ ಮಾಡಿದೆ. ಎಲ್ಲ ಸಿನಿಮಾದ ಶೋಗಳು ಹೌಸ್ ಫುಲ್ ಆಗುತ್ತಿವೆ. ಅಲ್ಲು ಅರ್ಜುನ್, ರಾಜಮೌಳಿ, ರಜನೀಕಾಂತ್, ರಾಮ್ ಚರಣ್ ಇನ್ನೂ ಹಲವು ಸೆಲೆಬ್ರಿಟಿಗಳು ‘ಧುರಂಧರ 2’ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಸಿನಿಮಾವನ್ನು ಕೊಂಡಾಡಿದ್ದಾರೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂತೂ ಸಿನಿಮಾ ಬಗ್ಗೆ ಪ್ರಶಂಸೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ‘ಧುರಂಧರ 2’ ಸಿನಿಮಾದಿಂದಾಗಿ ಅಮಿತಾಬ್ ಬಚ್ಚನ್ ಅವರ ಸಿನಿಮಾ ನಿಂತು ಹೋಗಿದೆ.
ಅಮಿತಾಬ್ ಬಚ್ಚನ್ ಅವರು ‘ಸರ್ಕಾರ್’ ಹೆಸರಿನ ಸಿನಿಮಾದಲ್ಲಿ ವರ್ಷಗಳ ಹಿಂದೆ ನಟಿಸಿದ್ದರು. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಗಗಳನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ್ದರು. ಇತ್ತೀಚೆಗಷ್ಟೇ ರಾಮ್ ಗೋಪಾಲ್ ವರ್ಮಾ ‘ಸರ್ಕಾರ್ 3’ ಸಿನಿಮಾ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ ‘ಧುರಂಧರ 2’ ಸಿನಿಮಾ ನೋಡಿದ ಮೇಲೆ ‘ಸರ್ಕಾರ್ 3’ ಸಿನಿಮಾ ಮಾಡುವ ಯೋಚನೆಯನ್ನೇ ಕೈಬಿಟ್ಟಿದ್ದಾರಂತೆ ವರ್ಮಾ.
ಸಂದರ್ಶನದಲ್ಲಿ ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದು, ‘ಧುಂಧರ್ 2’ ಶ್ರೇಷ್ಠ ಸಿನಿಮಾವಾದ ಸಿನಿಮಾ ಆಗಿದ್ದು, ಆ ಶ್ರೇಷ್ಠತೆಯನ್ನು ನನ್ನಿಂದ ಮುಟ್ಟಲು ಸಾಧ್ಯವಿಲ್ಲ. ಸಿನಿಮಾ ನಿರ್ಮಾಣದ ಒಂದು ಮಾದರಿಯನ್ನು ‘ಧುರಂಧರ 2’ ಸಿನಿಮಾ ಸೆಟ್ಟೇರಿದೆ, ಆ ಸ್ಟಾಂಡರ್ ಅನ್ನು ಈಗ ನನ್ನಿಂದ ತಲುಪಲು ಸಾಧ್ಯವಿಲ್ಲ, ಇಲ್ಲದಿದ್ದರೆ ‘ಸರ್ಕಾರ್ 3′ ಸಿನಿಮಾ ನಿರ್ದೇಶಿಸುತ್ತಿಲ್ಲ’ ಎಂದು ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಬರಲಿದೆಯಾ ‘ಧುರಂಧರ 3’? ಚಿತ್ರತಂಡದ ಪ್ರಮುಖ ಸದಸ್ಯ ಹೇಳಿದ್ದೇನು?
ಅದೇ ಸಂದರ್ಶನದಲ್ಲಿ ‘ಧುರಂಧರ 2’ ಸಿನಿಮಾದ ಬಗ್ಗೆ ಮಾತನಾಡಿರುವ ವರ್ಮಾ, ‘ಸಾಕಷ್ಟು ಸಿನಿಮಾಗಳು ಹಿಟ್, ಸೂಪರ್ ಹಿಟ್ ಆಗುತ್ತವೆ, ಆದರೆ ಈ ಸಿನಿಮಾ ‘ಪ್ರಭಾವ’, ‘ಪರಿಣಾಮ’ಗಳನ್ನು ಸೃಷ್ಟಿಸಿದೆ. ಇದು ಎಲ್ಲರಿಂದ ಸಾಧ್ಯವಿಲ್ಲ. ಬಾಲಿವುಡ್ ಗೆ ಹೇಗೆ ಸಿನಿಮಾ ಮಾಡಬೇಕು ಎಂದು ಆದಿತ್ಯ ತೋರಿಸಿಕೊಟ್ಟಿದ್ದಾರೆ’ ಎಂದು ವರ್ಮಾ, ‘ಧುರಂಧರ 2’ ಸಿನಿಮಾವನ್ನು ಕೊಂಡಾಡಿದ್ದಾರೆ.
‘ಧುರಂಧರ 2’ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರು ರಾಮ್ ಗೋಪಾಲ್ ವರ್ಮಾ ಅವರ ಅಭಿಮಾನಿಯಂತೆ. ವರ್ಮಾ ಅವರ ‘ಸತ್ಯ’ ಮತ್ತು ‘ಕಂಪೆನಿ’ಗಳು ತಮ್ಮ ಮೇಲೆ ಪ್ರಭಾವ ಬೀರಿ ಆದಿತ್ಯ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ