
ಆದಿತ್ಯ ಧರ್ ನಿರ್ದೇಶನದ ‘ಧುರಂಧರ: ದಿರಿವೆಂಜ್’ (ಧುರಂಧರ: ದಿ ರಿವೆಂಜ್) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ದಿನದಿಂದಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಜಾಗತಿಕವಾಗಿ 1,300 ಕೋಟಿ ರೂಪಾಯಿಗಳಿಗೆ ಅಧಿಕ ಗಳಿಕೆ ಮಾಡುವ ಮೂಲಕ ಹಳೇ ದಾಖಲೆಗಳನ್ನೆಲ್ಲ ಮುರಿದಿದೆ. ಆದರೆ, ಈ ಯಶಸ್ಸಿನ ನಡುವೆಯೂ ಬಾಲಿವುಡ್ ಮಂದಿ ತೋರುತ್ತಿರುವ ಮೌನ ಈಗ ಚರ್ಚೆಗೆ ಕಾರಣವಾಗಿದೆ. ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ಬಾಲಿವುಡ್ ಮಂದಿಯ ಈ ಮೌನದ ವಿರುದ್ಧ ಕಿಡಿಕಾರಿದ್ದಾರೆ.
ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವರ್ಮಾ, ‘ಆದಿತ್ಯ ಧರ್ ಚಿತ್ರರಂಗದ ಅಡಿಯಲ್ಲಿ ಪರಮಾಣು ಬಾಂಬ್ ಸಿಡಿಸಿದ್ದಾರೆ. ಆದರೆ ಇಡೀ ಇಂಡಸ್ಟ್ರಿ ಈ ಬಗ್ಗೆ ವಹಿಸಿರುವ ಭಯಾನಕ ಮೌನ ನನಗೆ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ‘ಈ ಸಿನಿಮಾವನ್ನು ನೋಡಿ ಕಲಿಯಿರಿ’ ಎಂದು ಅವರು ಕಿವಿಮಾತು ಹೇಳಿದ್ದಾರೆ.
‘ಧುರಂಧರ 2 ಸಿನಿಮಾದ ಸ್ಫೋಟಕ್ಕೆ ಚಿತ್ರರಂಗದವರೆಲ್ಲರೂ ಬಾಹ್ಯಾಕಾಶಕ್ಕೆ ಹಾರಿ ಹೋಗಿದ್ದಾರಾ? ಅದಕ್ಕಾಗಿಯೇ ಅವರ ಚಪ್ಪಾಳೆ ನಮಗೆ ಕೇಳುತ್ತಿಲ್ಲವೇ? ಅಥವಾ ಇದು ಕೇವಲ ಪ್ರಚಾರ ಎಂದು ಭ್ರಮೆಯಲ್ಲಿದ್ದಾರಾ? ಅಥವಾ ಈ ಚಿತ್ರದ ಅದ್ಭುತ ಮೇಕಿಂಗ್ ನೋಡಿ ತಾವಿನ್ನು ಮುಂದೆ ಇಂತಹ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಪಾರ್ಶ್ವವಾಯು ಪೀಡಿತರಾಗಿದ್ದಾರಾ’ ಎಂದು ಆರ್.ಜಿ.ವಿ. ವ್ಯಂಗ್ಯವಾಡಿದ್ದಾರೆ.
ಈಗ ಅದು @AdityaDharFilms ಚಿತ್ರರಂಗದ ಅಡಿಯಲ್ಲಿಯೇ ಪರಮಾಣು ಬಾಂಬ್ ಸ್ಫೋಟಿಸಿದೆ, ಆಘಾತಕಾರಿ ಸಂಗತಿಯೆಂದರೆ ಉಳಿದ ಚಲನಚಿತ್ರೋದ್ಯಮದಿಂದ ಜೋರಾಗಿ ಮೌನವಾಗಿದೆ.
ಇದು ಕಾರಣವೋ ನನಗೆ ಗೊತ್ತಿಲ್ಲ #ಧುರಂಧರ2 ಅವರ ವಿನಾಶಕಾರಿ ಸ್ಫೋಟವು ಚಿತ್ರದಲ್ಲಿನ ಎಲ್ಲರನ್ನು ಎಸೆದಿದೆ…
– ರಾಮ್ ಗೋಪಾಲ್ ವರ್ಮಾ (@RGVzoomin) ಮಾರ್ಚ್ 29, 2026
ಈ ಯಶಸ್ಸನ್ನು ಕಡೆಗಣಿಸುವುದು ಮೂರ್ಖತನ ಎಂದು ಚಿತ್ರದ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ‘ನಿಮ್ಮ ಕಣ್ಣೆದುರೇ ಬೆಂಕಿ ಉಗುಳುತ್ತಿರುವ ಡೈನೋಸಾರ್‌ನಂತಹ ಈ ಸಿನಿಮಾವನ್ನು ಕಡೆಗಣಿಸಲು ಹೇಗೆ ಸಾಧ್ಯ? ಈ ಸಿನಿಮಾದ ಬಾಕ್ಸ್ ಆಫೀಸ್ ಸದ್ದು ನಿಮ್ಮ ಕಾಲ ಕೆಳಗಿನ ನೆಲವನ್ನೇ ನಡುಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಜಾತಿ, ಧರ್ಮ ಮುಖ್ಯವಲ್ಲ’; ರೆಹಮಾನ್‌ಗೆ ತಿರುಗೇಟು ಕೊಟ್ಟ ರಾಮ್ ಗೋಪಾಲ್ ವರ್ಮ
‘ನನ್ನ ಎಲ್ಲಾ ಸಿನಿಮಾ ಮಿತ್ರರಿಗೆ ಒಂದು ಸಲಹೆ. ಇದು ಸಿನಿಮಾ ಮೇಕಿಂಗ್ ನ ಹೊಸ ಕೋರ್ಸ್ ಇದ್ದಂತೆ. ದಯವಿಟ್ಟು ಧುರಂಧರ 2 ಸಿನಿಮಾವನ್ನು ಗಂಭೀರವಾಗಿ ಅಧ್ಯಯನ ಮಾಡಿ. ಇಲ್ಲವಾದರೆ 2026ರ ಮಾರ್ಚ್ 19ರ ನಂತರ ಸಿನಿಮಾದ ಸ್ಮಶಾನದಲ್ಲಿ ನೀವು ಹೂತುಹೋಗುತ್ತೀರಿ’ ಎಂದು ಖಡಕ್ ಆಗಿ ಹೇಳಿದ್ದಾರೆ. ಎಸ್.ಎಸ್. ರಾಜಮೌಳಿ, ಕರಣ್ ಜೋಹರ್, ಆಲಿಯಾ ಭಟ್ ಮುಂತಾದವರು ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.