Headlines

ತಿರುಪತಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಕಾಮಗಾರಿ ಪರಿಶೀಲನೆ

ತಿರುಪತಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಕಾಮಗಾರಿ ಪರಿಶೀಲನೆ


ತಿರುಪತಿ, ಡಿ.26: ತಿರುಪತಿ ತಿರುಮಲಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (ರಾಮಲಿಂಗ ರೆಡ್ಡಿ )ಭೇಟಿ ಮಾಡಲಾಗಿದೆ. ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಲಾಗಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಹಾಗೂ ಪರಿಷತ್ ಸದಸ್ಯ ಶರವಣ ತಿರುಪತಿ ತಿರುಪತಿ ತಿರುಮಲದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಾವೇ ಖುದ್ದು ಭೇಟಿ ನೀಡಿ ಪರಿವೀಕ್ಷಣೆ ನಡೆಸಿ ಉತ್ತರಿಸಿದರು.

ಮಂಗಳವಾರದಂದು ಮಂಗಳವಾರದಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಮಲಕ್ಕೆ ಭೇಟಿ ನೀಡಿ, ಟಿಟಿಡಿ ಅಧಿಕಾರಿಗಳು ತಿರುಮಲದಲ್ಲಿರುವ ಕರ್ನಾಟಕ ಸರ್ಕಾರದ 3 ಅತಿಥಿ ಗೃಹಗಳು ಹಾಗೂ ಛತ್ರದ ಪರಿಶೀಲನೆ ನಡೆಸಿದ್ದಾರೆ.ಬಾಕಿ ಉಳಿದಿರುವ ಎಲ್ಲಾ ಸಮಸ್ಯೆ ಹಾಗೂ ಕಾಮಗಾರಿಗಳಿಗೆ ಮಾರ್ಚ್ 2026ರೊಳಗೆ ಪೂರ್ಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಬೀಳಲಿದೆ

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕೆಳಕಂಡ ವಿಷಯಗಳ ಕುರಿತು ಚರ್ಚಿಸಲಾಗಿದೆ.

1. ತಿರುಮಲದಲ್ಲಿನ ಭೂಮಿಯ ಲೀಸ್ ವಿಷಯ

2. ಟಿಟಿಡಿ ವಾಪಸ್ ಪಡೆದ ಭೂಮಿಗೆ ಬದಲಾಗಿ ತಿರುಪತಿಯಲ್ಲಿ 30 ಸೆಂಟ್ಸ್ ಪರ್ಯಾಯ ಭೂಮಿ ಒದಗಿಸಲಾಗಿದೆ.

3. ತಿರುಮಲದಲ್ಲಿ ನಮ್ಮ ಪರವಾಗಿ ಟಿಟಿಡಿ ಕೈಗೊಂಡ ನಾಗರಿಕ ಕಾಮಗಾರಿಗಳ ಮೇಲೆ ವಿಧಿಸಲಾಗುವ ಸೆಂಟೇಜ್ ಶುಲ್ಕಕ್ಕೆ ವಿನಾಯಿತಿ ನೀಡಲಾಗುತ್ತದೆ.

4. ತಿರುಮಲದಲ್ಲಿರುವ ಎಲ್ಲಾ ಅತಿಥಿ ಗೃಹಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಹಸ್ತಾಂತರಿಸುವುದು.

5. ಪ್ರೀಫ್ಯಾಬ್ರಿಕಡ್ ಸಿಲಿಕಲ್ ರಚನೆಗಳಿಂದ ಉಂಟಾಗುವ ನೀರು ಸೋರಿಕೆ ಸಮಸ್ಯೆ ತಡೆಯುವುದು.

6. ಎಕ್ಸ್‌ಹಾಸ್ಟ್ ಡಾಕ್ಟ್‌ಗಳಿಗೆ ಸೂಕ್ತ ವಾತಾಯನ ವ್ಯವಸ್ಥೆ ಒದಗಿಸುವುದು.

7. ಎಲ್ಲಾ ಸ್ನಾನಗೃಹಗಳಲ್ಲಿ ಇರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಾಯಿಸುವುದು.

8. ಛತ್ರಕ್ಕೆ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯುವುದು.

9. HT ಲೈನ್ ಅನುಮತಿ ಪಡೆಯಲು ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು.

10. ಹೊರಾಂಗಣ ಪೋರ್ಟಿಕೋದಲ್ಲಿರುವ PoP ಮೇಲ್ಚಾವಣಿಯನ್ನು PVC ಮೇಲ್ಚಾವಣಿಯಿಂದ ಬದಲಾಯಿಸುವುದು.

11. ಕರ್ನಾಟಕದ ಭಕ್ತರಿಗೆ ದರ್ಶನ ಸೌಲಭ್ಯ ಒದಗಿಸುವುದು.

ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ಶರತ್, ಟಿಟಿಡಿ ಟ್ರಸ್ಟ್ ಸದಸ್ಯ ದರ್ಶನ್ ಸೇರಿದಂತೆ ಇತರರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ಮಾಡಿ



Source link

Leave a Reply

Your email address will not be published. Required fields are marked *