Headlines

ರಾಮನಗರ: ಹಲವು ಜಿಲ್ಲೆಯ ಪೊಲೀಸರ‌ ನಿದ್ದೆಗೆಡಿಸಿದ್ದ ಅಂತಾರಾಜ್ಯ ಬೈಕ್​​​​ ಕಳ್ಳರ ಬಂಧನ

ರಾಮನಗರ: ಹಲವು ಜಿಲ್ಲೆಯ ಪೊಲೀಸರ‌ ನಿದ್ದೆಗೆಡಿಸಿದ್ದ ಅಂತಾರಾಜ್ಯ ಬೈಕ್​​​​ ಕಳ್ಳರ ಬಂಧನ


ಬಂಧಿತರಿಂದ ವಶಕ್ಕೆ ಪಡೆದಿರುವ ವಾಹನಗಳುಚಿತ್ರ ಕ್ರೆಡಿಟ್ ಮೂಲ: tv9 ಕನ್ನಡ

ರಾಮನಗರ, ಮಾರ್ಚ್ 02: ಅವರಿಬ್ಬರು ಖತರ್ನಾಕ್ ಕಳ್ಳರು. ಹಲವು ಜಿಲ್ಲೆಯ ಪೊಲೀಸರು ನಿದ್ದೆಗೆಡಿಸಿದ್ದರು. ಸಿಕ್ಕಸಿಕ್ಕ ಕಡೆಗಳಲ್ಲಿ ವಾಹನಗಳ ಕಳ್ಳತನ (ವಾಹನ ಕಳ್ಳತನ) ಮಾಡುವುದೇ ಇವರ ಕಾಯಕ. ಹೀಗೆ ಕದ್ದ ವಾಹನಗಳ ನಂಬರ್ ಪ್ಲೇಟ್ ಬದಲಾಯಿಸಿ, ಇಂಜನ್ ಹಾಗೂ ಚಾರ್ಸಿ ನಂಬರ್ ನಕಲು ಮಾಡಿ ಕಡಿಮೆ ಬೆಲೆಗೆ ವಾಹನಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ ಕೊನೆಗೂ ಆರೋಪಿಗಳನ್ನು ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.

ಬೈಕ್, ವಾಹನ ಸೇರಿದಂತೆ ರೂ ಹಣ ವಶಕ್ಕೆ

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನ ಬಂಧಿಸಿದ್ದಾರೆ. ಅಂದಹಾಗೆ ಶಿವಮೊಗ್ಗ ಮೂಲದ ಶಾಹಿದ್ ಅಹಮದ್ (27) ಹಾಗೂ ತುಮಕೂರು ಮೂಲದ ಅಪ್ಸರ್ ಅಹಮದ್ (40) ಬಂಧಿತ ಆರೋಪಿಗಳು. ಇವರಿಬ್ಬರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಹನ ಕಳ್ಳತನ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 50 ಲಕ್ಷ ರೂ ಮೌಲ್ಯದ 2 ಅಶೋಕ್ ಲೈಲ್ಯಾಂಡ್ ಗೂಡ್ಸ್, 3 ಕಾರುಗಳು, 10 ದ್ವಿಚಕ್ರ ವಾಹನಗಳು ಹಾಗೂ 4 ಲಕ್ಷ ರೂ ಹಣವನ್ನು ವಶಕ್ಕೆ ಪಡೆದಿದ್ದು, 13 ಪ್ರಕರಣಗಳನ್ನು ಭೇದಿಸಿದ್ದಾರೆ. ಈ ಖಮರು ರಾಮನಗರ, ಮಂಡ್ಯ, ಬೆಂಗಳೂರು, ತುಮಕೂರು, ಕೋಲಾರ, ಬಳ್ಳಾರಿ ಹಾಗೂ ಹುಬ್ಬಳ್ಳಿ ನಗರದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.

ಇದನ್ನೂ ಓದಿ: ಬೀಗ ಹಾಕಿದ್ದ ಮನೆಯಿಂದ ಬರ್ತಿತ್ತು ದುರ್ನಾಥ: ಬಾಗಿಲು ತೆರೆದು ನೋಡಿದ್ರೆ ಕಂಡಿದ್ದು ಯುವಕನ ಬೆತ್ತಲೆ ಶವ!

ಆರೋಪಿ ಶಾಹಿದ್ ವಾಹನ ಕಳ್ಳತನ ಮಾಡಿ ಅಪ್ಸರ್‌ಗೆ ಮಾರಾಟ ಮಾಡುತ್ತಿದ್ದಾರೆ. ಕೆಲವು ವಾಹನಗಳನ್ನು ಗುಜರಿಗೆ ಹಾಕಿ ಮಾರಾಟ ಮಾಡಲಾಗುತ್ತಿದೆ, ಇನ್ನೂ ಕೆಲವು ವಾಹನಗಳ ಇಂಜಿನ್ ಮತ್ತು ಚಾರ್ಸಿ ನಂಬರ್ ಬದಲಾಯಿಸಿ, ನಕಲಿ ನಂಬರ್ ಪ್ಲೇಟ್ ಅಳವಡಿಸಿ ಮಾರಾಟ ಮಾಡಲಾಗುತ್ತಿದೆ.

ಒಂದೇ ಕಡೆ ಕಳ್ಳತನ ಮಾಡಿದರೆ ಗೊತ್ತಾಗುತ್ತದೆ ಎಂದು ಹಲವು ಜಿಲ್ಲೆಗಳಿಗೆ ಹೋಗಿ ಲಾಡ್ಜ್‌ಗಳಲ್ಲಿ ತಂಗಿ ವಾಹನಗಳನ್ನು ಕಳ್ಳತನ ಮಾಡಿದ್ದಾನೆ. ಇನ್ನು ಹೈಟೆಕ್ ಅನ್ನು ಬಳಸಿ ಕಾರುಗಳ ಲಾಕ್ ಓಪನ್ ಮಾಡಿ ಕಳ್ಳತನ ಮಾಡುವಂತೆ. ಹೀಗಾಗಿ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಮದುವೆಗೆ ನಿರಾಕರಣೆ: ಮಾತನಾಡಲು ಕರೆದು ಜಿಮ್ ಟ್ರೈನರ್ ಗೆ ಚಾಕು ಹಾಕಿದ ಪ್ರೇಯಸಿ

ಮತ್ತೊಂಡೆದೆ ರಾಮನಗರ ಐಜೂರು ಪೊಲೀಸರ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಒಂದು ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಇದೀಗ ಪ್ರಕರಣಕ್ಕೆ ಬಳಸಿಕೊಂಡಿರುವ ಒಂದು ಕಾರು ಹಾಗೂ ಬೈಕ್ ಅನ್ನ ವಶಕ್ಕೆ ಪಡೆದಿದ್ದಾರೆ. ಒಟ್ಟಾರೆ ಹಲವು ಜಿಲ್ಲೆಗಳಲ್ಲಿ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿ ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *