
ಯಶ್, ರಣಬೀರ್ ಕಪೂರ್ ಮೊದಲಾದವರು ನಟಿಸಿರುವ ‘ರಾಮಾಯಣ’ ಸಿನಿಮಾ (ರಾಮಾಯಣ ಚಿತ್ರ) ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಟೀಸರ್ ಏಪ್ರಿಲ್ 2 ರಂದು ರಿಲೀಸ್ ಆಗಿದ್ದು ಕೆಲವರಿಂದ ಚಿತ್ರದ ಟೀಕೆ ಎದುರಿಸುತ್ತಿದೆ. ಸಿನಿಮಾದ ಟೀಸರ್ ಉತ್ತಮವಾಗಿಲ್ಲ ಎಂದು ಕೆಲವರು ಹೇಳಿದ್ದಾರೆ, ಇನ್ನೂ ಕೆಲವರಲ್ಲಿ ಇದು ಎಐ ಸೀನ್ಡ್ ಆಗಿದೆ. ಅದಕ್ಕೆ ಪೂರಕವಾದ ಕೆಲವು ಸಾಕ್ಷಿಗಳನ್ನು ಕೂಡ ಒದಗಿಸಲಾಗಿದೆ. ಹೀಗಿರುವಾಗಲೇ ‘ರಾಮಾಯಣ’ ಬಿಹೈಂಡ್ ದಿ ಸೀನ್ (ಬಿಟಿಎಸ್) ವಿಡಿಯೋ ವೈರಲ್ ಆಗಿದೆ. ಇದರ ಅಸಲಿಯತ್ತು ಎಂಬ ಬಗ್ಗೆ ಇಲ್ಲಿದೆ ವಿವರ.
‘ರಾಮಾಯಣ’ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್ ಕಾಣಿಸಿಕೊಂಡಿದ್ದಾರೆ. ‘ಚಿಲ್ಲರ್ ಪಾರ್ಟಿ’, ‘ದಂಗಲ್’ ರೀತಿಯ ಸಿನಿಮಾ ನೀಡಿದ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಹನುಮ ಜಯಂತಿ ಪ್ರಯುಕ್ತ ರಿಲೀಸ್ ಆದ ಟೀಸರ್‌ಗೆ ಸಾಕಷ್ಟು ಟೀಕೆಯಾಗಿದೆ.
ಈ ಟೀಕೆಯ ಬೆನ್ನಲ್ಲೇ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ರಾಮಾಯಣ’ ಸಿನಿಮಾದ ಶೂಟ್ ಯಾವ ರೀತಿ ಇದೆ ಎಂದು ತೋರಿಸಲಾಗಿದೆ. ಸೆಟ್‌ಗಳಲ್ಲಿ ಅದ್ದೂರಿತನ ಕಾಣಿಸುತ್ತದೆ. ಇದು ನಿಜವಾದ ವಿಡಿಯೋ ಎಂದು ನಂಬಿದ್ದಾರೆ! ಅಸಲಿಗೆ ಇದು ನಿಜವಾದ ವಿಡಿಯೋ ಅಲ್ಲ. ಇದು ಎಐನಿಂದ ಮಾಡಲ್ಪಟ್ಟಿದೆ.
ಇದನ್ನೂ ಓದಿ: ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ನಟಿ ‘ರಾಮಾಯಣ’ದಲ್ಲಿ ಶೂರ್ಪನಖಿ
ಈ ವಿಡಿಯೋಗೆ ಕೆಲವರು ಕಮೆಂಟ್ ಮಾಡಿದ್ದಾರೆ. ವಿಡಿಯೋದ ಅಸಲಿಯತ್ತೇನು ಹೇಳಿದ್ದಾರೆ. ‘ಟೀಸರ್ ಐನಲ್ಲಿ ಮಾಡಲಾಗಿದೆ. ಅದನ್ನು ಸಮರ್ಥಿಸಿಕೊಳ್ಳಲು ಮಾಡಿದ ವಿಡಿಯೋ ಕೂಡ ಐನದ್ದು’ ಎಂದು ಕೆಲವರು ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದನ್ನು ನಿಜ ಎಂದು ನಂಬಿದ್ದಾರೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
‘ರಾಮಾಯಣ’ ಸಿನಿಮಾದ ಬಜೆಟ್ 4 ಸಾವಿರ ಕೋಟಿ ರೂಪಾಯಿ ಎಂದೆಲ್ಲ ವರದಿಯಾಗಿದೆ. ಈ ವರ್ಷದ ದೀಪಾವಳಿಗೆ ಮೊದಲ ಭಾಗ ಹಾಗೂ ಮುಂದಿನ ವರ್ಷದ ದೀಪಾವಳಿಗೆ ಎರಡನೇ ಭಾಗ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.