Headlines

700 ಕೋಟಿ ಆಫರ್ ರಿಜೆಕ್ಟ್ ಮಾಡಿದ ‘ರಾಮಾಯಣ’ ನಿರ್ಮಾಪಕ, 1000 ಕೋಟಿ ಗುರಿ

700 ಕೋಟಿ ಆಫರ್ ರಿಜೆಕ್ಟ್ ಮಾಡಿದ ‘ರಾಮಾಯಣ’ ನಿರ್ಮಾಪಕ, 1000 ಕೋಟಿ ಗುರಿ


700 ಕೋಟಿ ಆಫರ್ ರಿಜೆಕ್ಟ್ ಮಾಡಿದ 'ರಾಮಾಯಣ' ನಿರ್ಮಾಪಕ, 1000 ಕೋಟಿ ಗುರಿ

ರಣಬೀರ್ ಕಪೂರ್ (ರಣಬೀರ್ ಕಪೂರ್), ಯಶ್ (ಯಶ್) ಮತ್ತು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಭಾರತದ ಈ ಅತಿ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ, ಎರಡೂ ಭಾಗಗಳ ಒಟ್ಟು ವೆಚ್ಚ ಸುಮಾರು 4000 ಕೋಟಿ ರೂಪಾಯಿಗಳಾಗಿರಲಿವೆ. ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಇದೀಗ ಸಿನಿಮಾದ ಪ್ರೀ ರಿಲೀಸ್ ಬ್ಯೂಸಿನೆಸ್ ಸಿನಿಮಾದ ಮುಖ್ಯ ನಿರ್ಮಾಪಕ ನಮಿತ್ ಮಲ್ಹೋತ್ರಾ ಶುರು ಮಾಡಿದ್ದಾರೆ. ಆದರೆ ಆರಂಭದಲ್ಲೇ ಅವರು 700 ಕೋಟಿಯಷ್ಟು ಬಹುದೊಡ್ಡ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ.

‘ರಾಮಾಯಣ’ ಸಿನಿಮಾದ ಡಿಜಿಟಲ್ ಇತರೆ ಹಕ್ಕುಗಳ ಮಾರಾಟ ನಡೆಯುತ್ತಿದೆ. ಇದೀಗ ‘ರಾಮಾಯಣ’ ಸಿನಿಮಾದ ಎರಡೂ ಭಾಗಗಳ ಡಿಜಿಟಲ್ ಹಕ್ಕುಗಳಿಗಾಗಿ ದೊಡ್ಡ ಒಟಿಟಿ ಸಂಸ್ಥೆಯೊಂದು ಬರೋಬ್ಬರಿ 700 ಕೋಟಿ ರೂಪಾಯಿ ಡೀಲ್ ನೀಡಿತ್ತು. ಇದು ಭಾರತೀಯ ಸಿನಿಮಾ ಒಂದಕ್ಕೆ ಈವರೆಗೆ ನೀಡಿಲ್ಲ ಅತಿ ದೊಡ್ಡ ಆಫರ್ ಆಗಿದೆ. ಆದರೆ ಇದನ್ನು ಸಹ ನಮಿತ್ ಮಲ್ಹೋತ್ರಾ ನಿರಾಕರಿಸಿದ್ದಾರೆ.

ನಮಿತ್ ಮಲ್ಹೋತ್ರಾ ಅವರು ಎರಡೂ ಸಿನಿಮಾಗಳಿಗೆ ಕನಿಷ್ಠ 1000 ಕೋಟಿ ರೂಪಾಯಿ ನಿರೀಕ್ಷೆ ಮಾಡುತ್ತಿದ್ದಾರೆ. ಇದೆ, ಸಿನಿಮಾದ ಮೊದಲ ಭಾಗದ ಮಾರಾಟ ಮಾಡಿ ಅದು ಯಶಸ್ವಿ ಆದ ನಂತರ ಎರಡನೇ ಭಾಗದ ಮಾರಾಟ ಮಾಡುವ ಯೋಜನೆಯೂ ನಮಿತ್ ಮಲ್ಹೋತ್ರಾ ಅವರಿಗಿದೆ. ‘ಧುರಂಧರ’ ಸಿನಿಮಾ ಯಶಸ್ವಿಯಾದ ಬಳಿಕ ‘ಧುರಂಧರ 2’ ಸಿನಿಮಾದ ಒಟಿಟಿ ಹಕ್ಕನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಯ್ತು. ಇದೇ ಮಾದರಿಯಲ್ಲಿ ‘ರಾಮಾಯಣ’ ನಿರ್ಮಾಪಕರೂ ಸಹ ಅನುಸರಿಸಲಿದ್ದಾರೆ.

ಇದನ್ನೂ ಓದಿ:ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

‘ರಾಮಾಯಣ’ ಸಿನಿಮಾವನ್ನು ಭಾರತದ ಜೊತೆಗೆ ವಿದೇಶಗಳಲ್ಲಿಯೂ ಭಾರಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಭಾರತದಲ್ಲಿ ಗಳಿಕೆ ಆಗುವ ಮೊತ್ತ ಹೆಚ್ಚಿನ ಸಂಗ್ರಹವನ್ನು ವಿದೇಶಗಳಿಂದ ನಿರೀಕ್ಷಿಸಲಾಗುತ್ತಿದೆ. ಸಿನಿಮಾದ ಮಾರುಕಟ್ಟೆಯನ್ನು ವಿದೇಶಿ ತಂಡವೊಂದು ನೋಡಿಕೊಳ್ಳುತ್ತಿದೆ, ಭರ್ಜರಿ ಯೋಜನೆಯನ್ನೇ ಸಿನಿಮಾದ ಬಿಡುಗಡೆಗೆ ಹಾಕಿದೆ.

‘ರಾಮಾಯಣ’ ಸಿನಿಮಾವನ್ನು ನಮಿತ್ ಮಲ್ಹೋತ್ರಾ ನಟ ಯಶ್ ಅವರು ಒಟ್ಟಿಗೆ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಆಂಜನೇಯ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಸಿನಿಮಾ ಇದೆ ವರ್ಷ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *