ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?

ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?

ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?

ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?, ಪ್ರಮುಖ ಪಾತ್ರ ನಿಭಾಯಿಸುತ್ತಿರುವ ನಟ ನಟಿಯರ ಸಂಭಾವನೆ ಪಟ್ಟಿ ಬಹಿರಂಗವಾಗಿದೆ. ಸಿನಿಮಾದ ಒಟ್ಟು ಬಜೆಟ್ ಎಷ್ಟು?

ನಿತೀಶ್ ತಿವಾರಿಯ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿದೆ. ಶ್ರೀರಾಮನನ್ನು ಮತ್ತೆ ತೆರೆ ಮೇಲೆ ನೋಡಲು ಭಾರತೀಯ ಸಿನಿ ಪ್ರೇಕ್ಷಕರು ಕಾತರಗೊಂಡಿದ್ದಾರೆ. ಭಾರತದ ಸಿನಿಮಾ ಇತಿಹಾಸದಲ್ಲೇ ಇದು ಅತೀ ದೊಡ್ಡ ಬಜೆಟ್ ಸಿನಿಮಾ. ಪ್ರಮುಖ ದಿಗ್ಗಜ ನಟರು ಈ ಸಿನಿಮಾದಲ್ಲಿ ಪಾತ್ರಮಾಡಿದ್ದಾರೆ. ಇದೀಗ ಟೀಸರ್ ಬಿಡುಗಡೆ ಬೆನ್ನಲ್ಲೇ ಪ್ರಮುಖ ನಟರ ಸಂಭಾವನೆ ಪಟ್ಟಿ ಬಹರಂಗವಾಗಿದೆ.

ರಾಮಾಯಣ ಪಾರ್ಟ್ 1 ಹಾಗೂ ಪಾರ್ಟ್ 2 ಹೀಗೆ ಎರಡು ಭಾಗವಾಗಿ ತೆರೆಗೆ ಅಪ್ಪಳಿಸಲಿದೆ. ಎರಡು ಪಾರ್ಟ್‌ಗೆ ಒಟ್ಟಿಗೆ ಸಂಭಾವನೆ ನೀಡಲಾಗಿದೆ. ಶ್ರೀರಾಮನ ಪಾತ್ರ ಮಾಡುತ್ತಿರುವ ರಣಬೀರ್ ಕಪೂರ್ ಪ್ರತಿ ಪಾರ್ಟ್‌ಗೆ 75 ಕೋಟಿ ರೂಪಾಯಿಂತೆ ಒಟ್ಟು 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ರಾಮಾಯಣ ಟೀಸರ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ಟೀಸರ್‌ನಲ್ಲಿ ಯಶ್ ಮುಖ ಕಾಣದಿದ್ದರೂ ನಡೆದು ಹೋಗುತ್ತಿರುವ ದೃಶ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಾಮಾಯಣ ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಯಶ್ ಪಡೆದ ಸಂಭಾವನೆ 100 ಕೋಟಿ ರೂಪಾಯಿ ಎಂದು ವರದಿಯಾಗಿದೆ.

ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿಗೆ ಒಟ್ಟು 12 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಸಾಯಿ ಪಲ್ಲವಿ ದಕ್ಷಿಣ ಭಾರತದ ಸಿನಿಮಾಗಳಿಗೆ 2.5 ರಿಂದ 3 ಕೋಟಿ ರೂಪಾಯಿ ರಡೆಯುತ್ತಾರೆ. ತಂಡೇಲ್ ಸಿನಿಮಾಗಾಗಿ 5 ಕೋಟಿ ರೂಪಾಯಿ ಪಡೆದಿದ್ದರು.

ರಾಮಾಯಾಣ ಸಿನಿಮಾದಲ್ಲಿ ಸನ್ನಿ ಡಿಯೋಲ್ ಭಗವಾನ ಹನುಮಾನ ಪಾತ್ರ ಮಾಡುತ್ತಿದ್ದಾರೆ. ಪ್ರತಿ ಪಾರ್ಟ್‌ಗೆ 20 ಕೋಟಿ ರೂಪಾಯಿಯಂತೆ ಒಟ್ಟು 40 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನು ಲಕ್ಷ್ಮಣನ ಪಾತ್ರ ನಿಭಾಯಿಸುತ್ತಿರುವ ಟಿವಿ ಸ್ಟಾರ್ ರವಿ ದುಬೆ 2 ರಿಂದ 4 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಸಿನಿಮಾದಲ್ಲಿ ಅತೀ ದೊಡ್ಡ ಬಜೆಟ್ ಸಿನಿಮಾ ಇದು. ಇಷ್ಟೇ ಅಲ್ಲ ಭಾರತೀಯ ಸಿನಿಮಾದ ಉದ್ಯಮ ಹಾಗೂ ವ್ಯವಹಾರವನ್ನೇ ಬದಲಿಸಬಲ್ಲ ಸಿನಿಮಾ ಇದಾಗಿದೆ. ಇದರ ಒಟ್ಟು ಬಜೆಟ್ ಬರೋಬ್ಬರಿ 4,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ರಾಮಾಯಾಣ ಸಿನಿಮಾ ಬಜೆಟ್

Source link

Leave a Reply

Your email address will not be published. Required fields are marked *