
ಬಹುನಿರೀಕ್ಷಿತ ‘ರಾಮಾಯಣ’ ಟೀಸರ್ (ರಾಮಾಯಣ ಟೀಸರ್) ಹನುಮ ಜಯಂತಿ ಪ್ರಯುಕ್ತ ಏಪ್ರಿಲ್ 2 ರಂದು ರಿಲೀಸ್ ಆಯಿತು. ಸಿನಿಮಾದ ಬಜೆಟ್ 2 ಸಾವಿರ ಕೋಟಿ ರೂಪಾಯಿ, 4 ಸಾವಿರ ಕೋಟಿ ರೂಪಾಯಿ ಎಂದೆಲ್ಲ ಹೇಳಲಾಗಿದೆ. ಈ ಕಾರಣದಿಂದಲೇ ಸಿನಿಮಾದ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜನರು ಸಿನಿಮಾದಿಂದ ದೊಡ್ಡದನ್ನು ನಿರೀಕ್ಷಿಸುತ್ತಿದ್ದಾರೆ. ಆದರೆ, ಟೀಸರ್ ನೋಡಿದ ಬಳಿಕ ಸಾಕಷ್ಟು ಟೀಕೆ ಎದುರಾಗಿದೆ. ಟೀಸರ್‌ನಲ್ಲಿರುವ ಎರಡು ದೊಡ್ಡ ತಪ್ಪನ್ನು ನೆಟ್ಟಿಗರು ಕಂಡು ಹಿಡಿದಿದ್ದಾರೆ.
ದೊಡ್ಡ ಬಜೆಟ್ ಸಿನಿಮಾ ಮಾಡಬೇಕು ಎಂದಾಗ ಅದಕ್ಕೆ ಅಷ್ಟೇ ಸಿದ್ಧತೆ. ನಿರ್ದೇಶಕರು ಸಾಕಷ್ಟು ಮುಂದಾಲೋಚನೆ ಹೊಂದಿರುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನು ಗಮನಿಸಲಾಯಿತು. ಇಲ್ಲವಾದಲ್ಲಿ ಅಲ್ಲಿಯೂ ಜನರು ತಪ್ಪು ಕಂಡು ಹಿಡಿಯುತ್ತಾರೆ. ಆದಿತ್ಯ ಧಾರ್ ಅವರ ‘ಧುರಂಧರ 2’ ಚಿತ್ರವನ್ನು ಜನರು ಹೊಗಳಿದ್ದರು. ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್ ಎಂದು ಬೆನ್ನು ತಟ್ಟಿದ್ದರು. ಆದರೆ, ಸಿನಿಮಾದಲ್ಲಿರುವ ತಪ್ಪುಗಳನ್ನು ಕೆಲವರು ಎತ್ತಿ ತೋರಿಸಿದ್ದರು. ಈಗ ‘ರಾಮಾಯಣ’ ಟೀಸರ್ ಅಲ್ಲೇ ಕೆಲವು ತಪ್ಪುಗಳನ್ನು ಕಂಡು ಹಿಡಿದಿದ್ದು, ಇದಕ್ಕೆ ನಿರ್ದೇಶಕ ನಿತೇಶ್ ತಿವಾರಿ ಅವರು ಸಾಕಷ್ಟು ಟೀಕೆ ಎದುರಿಸಿದ್ದಾರೆ.
ಇದನ್ನೂ ಓದಿ: ರಾಮಾಯಣ ಟೀಸರ್: ‘ಇದಕ್ಕಿಂತ ಆದಿಪುರುಷ್ ಎಷ್ಟೋ ಚೆನ್ನಾಗಿತ್ತು’ ಎಂದ ನೆಟ್ಟಿಗರು
ರಾಮ ಜನರ ಮಧ್ಯೆ ನಡೆದುಕೊಂಡು ಬರುವ ದೃಶ್ಯವಿದೆ. ಆಗ ಬಾಲಕನೋರ್ವ ನಮಸ್ಕರಿಸುತ್ತಾನೆ. ರಾಮ ಸ್ವಲ್ಪ ಮುಂದೆ ಹೋದರೆ ಇದೇ ಬಾಲಕ ರಾಮನಿಗೆ ಹೂವನ್ನು ಹಾಕುತ್ತಾ ಇರುತ್ತಾನೆ. ಇದು ದೊಡ್ಡ ತಪ್ಪುಗಳಲ್ಲಿ ಒಂದು. ಈ ಐ ಅಲ್ಲಿ ಇರಬಹುದಾ ಅಥವಾ ಆ ಬಾಲಕನ್ನನ್ನೇ ಮತ್ತೆ ಬಳಸಿಕೊಂಡಿರಬಹುದು ಎಂದು ಹೇಳಲಾಗಿದೆ.
ರಾಮಾಯಣವನ್ನು ₹ 4000 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ, ಆದರೆ ಮೊದಲ ನೋಟದಿಂದ ಇದು ಹೆಚ್ಚು AI- ಚಾಲಿತವಾಗಿದೆ ಎಂದು ಭಾಸವಾಗುತ್ತಿದೆ.
DNEG ಒಂದು VFX ಕಂಪನಿಯಾಗಿದೆ, ನಿರ್ದೇಶನ ಸ್ಟುಡಿಯೋ ಅಲ್ಲ. ನಿಜವಾಗಿಯೂ ಒಂದು ಸಿನಿಮಾ ಯಶಸ್ವಿಯಾಗುವುದು ನಿರ್ದೇಶನ. ನಿತೇಶ್ ತಿವಾರಿ ಅವರ ದೊಡ್ಡ ಯಶಸ್ಸು ದಂಗಲ್ ಆಗಿದೆ (ದಂಗಲ್ … https://t.co/9PEQSQ8kXs pic.twitter.com/CLu51szx5t
— ವಿಕ್ಟರ್ ವಾನ್ ಸೋಲಂಕಿ (@ವಿಕ್ಟರ್ ವಾನ್ ಎಸ್_) ಏಪ್ರಿಲ್ 2, 2026
ಮೊದಲ ಫ್ರೇಮ್: ಮಗು ನಮಸ್ಕರಿಸುತ್ತಿದೆ ಮತ್ತು ರಣಬೀರ್ ಅವನನ್ನು ದಾಟಿದನು
ಮುಂದಿನ ಫ್ರೇಮ್: ಅದೇ ಮಗು ಅವನ ಮೇಲೆ ಹೂವುಗಳನ್ನು ಸುರಿಸುತ್ತಿದೆಮತ್ತು ನಾವು ದೊಡ್ಡ 2026 ರಲ್ಲಿ ಈ AI ವೀಡಿಯೊಗಳೊಂದಿಗೆ ಹಾಲಿವುಡ್ನೊಂದಿಗೆ ಸ್ಪರ್ಧಿಸುತ್ತಿದ್ದೇವೆ
#ರಾಮಾಯಣ pic.twitter.com/TgSOAbCmUE
– ರಾಜ್ (@idfcwau) ಏಪ್ರಿಲ್ 2, 2026
ಇನ್ನು, ಮತ್ತೂ ಒಂದು ತಪ್ಪನ್ನು ಎತ್ತಿ ತೋರಿಸಲಾಗಿದೆ. ರಾಮ ಯುದ್ಧಕ್ಕೆ ಸಿದ್ಧನಾಗಿ ನಿಂತಿರುತ್ತಾನೆ. ಎದುರಿನವರ ಮೇಲೆ ಬಾಣ ಹೂಡಲು ರೆಡಿ ಆಗುತ್ತಾನೆ. ಆದರೆ, ಆತನ ಸೈನಿಕರು ಮಾತ್ರ ಇನ್ಯಾವುದೋ ಕಡೆ ನೋಡುತ್ತಾ ನಿಂತಿದ್ದಾರೆ. ಇದು ಎಐನಿಂದ ಫೋಟೋ ಎಂಬುದು ನೆಟ್ಟಿಗರಿಗೆ ಸ್ಪಷ್ಟವಾಗಿ ಕಾಣಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

