
ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ (ಯಶ್) ಮೊದಾದವರು ನಟಿಸಿರೋ ‘ರಾಮಾಯಣ’ ಸಿನಿಮಾದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಗಮನ ಸೆಳೆದಿದೆ. ಹನುಮಂತ ಜಯಂತಿ ಪ್ರಯುಕ್ತ ಟೀಸರ್ ತೆರೆಗೆ ಬಂದಿದೆ. ಈ ಸಿನಿಮಾದ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ. ಆದರೆ, ಮಹೇಶ್ ಬಾಬು ಹಾಗೂ ರಾಜಮೌಳಿ ಅಭಿಮಾನಿಗಳು ಮಾತ್ರ ನೆಗೆಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
‘ರಾಮಾಯಣ’ ಸಿನಿಮಾದ ಮೊದಲ ಭಾಗ ಈ ಬಾರಿ ದೀಪಾವಳಿಗೆ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾ ಎಷ್ಟು ರಿಚ್ ಆಗಿರಲಿದೆ ಎಂದು ತೋರಿಸುವ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಅಲ್ಲಿ ಗ್ರಾಫಿಕ್ಸ್ ಗಮನ ಸೆಳೆದಿದೆ. ರಾಮನಾಗಿ ರಣಬೀರ್ ಕಪೂರ್ ಗಮನ ಸೆಳೆದಿದ್ದಾರೆ. ಅವರ ಪಾತ್ರ ಮಾತ್ರ ಹೈಲೈಟ್ ಆಗಿದೆ. ಸೀತೆಯ ದೂರದಿಂದ ಹಾಗೂ ರಾವಣನ ಪಾತ್ರವನ್ನು ಹಿಂಭಾಗದಿಂದ ತೋರಿಸಲಾಗಿದೆ.
ಇದನ್ನೂ ಓದಿ: ‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್
ಟೀಸರ್ ಇಷ್ಟು ಮೆಚ್ಚುಗೆ ಪಡೆದರೂ ಮಹೇಶ್ ಬಾಬು ಅಭಿಮಾನಿಗಳು ಅಸಮಾಧಾನಗೊಂಡಿದ್ದೇಕೆ? ಪ್ರಶ್ನೆಗೂ ಉತ್ತರ ಇದೆ. ಮಹೇಶ್ ಬಾಬು ಅವರು ರಾಜಮೌಳಿ ಜೊತೆ ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ‘ರಾಮಾಯಣ’ ಕಥೆಯನ್ನು ನಿರ್ಮಿಸಲಿದೆಯಂತೆ. ಅದಕ್ಕೂ ಮೊದಲೇ ‘ರಾಮಾಯಣ’ ಚಿತ್ರ ತೆರೆಗೆ ಬರುತ್ತಿರುವುದು ‘ವಾರಣಾಸಿ’ಗೆ ಹಿನ್ನಡೆ ಆಗಬಹುದು ಎಂಬದು ಮಹೇಶ್ ಬಾಬು ಹಾಗೂ ರಾಜಮೌಳಿ ಫ್ಯಾನ್ಸ್ ಲೆಕ್ಕಾಚಾರ.
ಮಹೇಶ್ ಬಾಬು ಮತ್ತು ಎಸ್ಎಸ್ ರಾಜಮೌಳಿ ಅಭಿಮಾನಿಗಳಿಗೆ ನಿದ್ದೆಯಿಲ್ಲದ ರಾತ್ರಿಗಳು ಮುಂದಿವೆ, ಅವರು ಉತ್ತರಗಳು ಮತ್ತು ಉಲ್ಲೇಖಗಳಲ್ಲಿ ಅಕ್ಷರಶಃ ಅಳುತ್ತಿದ್ದಾರೆ.
ನೀವು ಏನು ಬೇಕಾದರೂ ಹೇಳಬಹುದು, ಆದರೆ ವಾಸ್ತವ #ರಾಮಾಯಣ ಪ್ರಮಾಣ, ಗುಣಮಟ್ಟ ಮತ್ತು ದೃಶ್ಯಗಳ ವಿಷಯದಲ್ಲಿ ನೂರಾರು ವಾರಣಾಸಿ ದೃಶ್ಯಗಳನ್ನು ಮೀರಿಸಬಹುದು. ಇದನ್ನು ಬುಕ್ಮಾರ್ಕ್ ಮಾಡಿ.
ದಿ… https://t.co/RJ8IhWc32S pic.twitter.com/I6t7yXiEJ8
— 𝗥𝘂𝗺𝗶 (@RumiTweetz76) ಏಪ್ರಿಲ್ 2, 2026
ರಾಜಮೌಳಿ ಅಭಿಮಾನಿಗಳಿಂದ ಬಲವಂತದ ನೆಗೆಟಿವ್
Bwood ಎಡಪಂಥೀಯರಿಂದ ಋಣಾತ್ಮಕ
ಆತ್ಮೀಯರೇ, ಇದು ಸಿಹಿ ಎಚ್ಚರಿಕೆ, ನಿಮ್ಮ ಮಿತಿಯಲ್ಲಿ ಉಳಿಯುವುದು ಉತ್ತಮ
ಮೆಸ್ಸಿಂಗ್ ಅರೌಂಡ್ @TheNameIsYashಅವರ ಸಿನಿಮಾ ನಮಗೆ ಎಂದಿಗೂ ಬೇಡ
ನಿಮ್ಮ ಚಲನಚಿತ್ರವನ್ನು ಆನಂದಿಸಿ ನಮ್ಮದನ್ನು ಆನಂದಿಸೋಣ #ರಾಮಾಯಣ pic.twitter.com/fUo4Z5Yvbp
— Shravanᵀᵒˣᶦᶜ (@Shravan_yash_) ಏಪ್ರಿಲ್ 2, 2026
‘ಮಹೇಶ್ ಬಾಬು ಮತ್ತು ರಾಜಮೌಳಿ ಅಭಿಮಾನಿಗಳಿಗೆ ನಿದ್ದೆಯಿಲ್ಲದ ರಾತ್ರಿಗಳು ಬರಲಿವೆ. ಅವರು ನಿಜವಾಗಿಯೂ ಅಳುತ್ತಿದ್ದಾರೆ. ‘ವಾರಣಾಸಿ’ ಸಿನಿಮಾ ಈ ಚಿತ್ರ ಮೀರಿಸುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಮಹೇಶ್ ಬಾಬು ಅಭಿಮಾನಿಗಳು ಉದ್ದೇಶಪೂರ್ವಕವಾಗಿ ಟೀಸರ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಾಜಮೌಳಿ ಅಭಿಮಾನಿಗಳಿಂದ ಬಲವಂತದ ನೆಗೆಟಿವ್