ಅಪಾರ್ಟ್ಮೆಂಟ್​ನಲ್ಲಿ ಪತ್ನಿನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಜಂಟಿ ಪೊಲೀಸ್ ಆಯುಕ್ತ

ಅಪಾರ್ಟ್ಮೆಂಟ್​ನಲ್ಲಿ ಪತ್ನಿನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಜಂಟಿ ಪೊಲೀಸ್ ಆಯುಕ್ತ


ಬೆಂಗಳೂರು, (ಫೆಬ್ರವರಿ 18): ನಿವೃತ್ತ ಇಸ್ರೋ (ISRO) ಉದ್ಯೋಗಿಯೊಬ್ಬರು ಪತ್ನಿಯನ್ನೇ(ಪತ್ನಿ) ಮಾಡಿದ ಕೊಲೆ ಘಟನೆ ಬೆಂಗಳೂರು (ಬೆಂಗಳೂರು) ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್ ರಾವ್ (75), ನಾನು ಸತ್ತರೆ ನಿನ್ನನ್ನು ನೋಡಿಕೊಳ್ಳುವವರು ಯಾರು ಎಂದು ಪತ್ನಿ ಸಂಧ್ಯಾಳನ್ನು ಟವಲ್ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್ ರಾವ್ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ತಾನು ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಸೂಚಿಸಿದ್ದಾರೆ.

ಇನ್ನು ಈ ಬಗ್ಗೆ ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಸಂಧ್ಯಾಶ್ರೀ ಅವರ ಮನೆಯ ಅಡುಗೆ ಮನೆಯಲ್ಲಿ ಇದ್ದಾಗ ನಡೆಸಲಾಗಿದೆ. ಇಂದು (ಫೆಬ್ರವರಿ 18) ಬೆಳಗ್ಗೆ ಹತ್ತು ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.ನಾಗೇಶ್ವರ ರಾವ್ ಅವರು ಟವಲ್ ಬಳಸಿ ಹಿಂದೆ ಹೋಗಿ ಕೊಲೆ ಮಾಡಿದ್ದಾರೆ. ಬಳಿಕ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುವವರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಲಾಗಿತ್ತು. ಬಳಿಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಪಾರ್ಟ್ಮೆಂಟ್ ನಲ್ಲಿ ಇರುವ ವೈದ್ಯರ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಮೇರೆಗೆ ಕೇಸ್ ದಾಖಲು ಮಾಡಿ ನಾಗಲೇಶ್ವರ ರಾವ್ ಅವರನ್ನ ಬಂಧಿಸಲಾಗಿದೆ. ಆರೋಪಿ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಪಿತ ಸಹ ಮಾನಸಿಕ ಅಸ್ವಸ್ಥತೆ ಇರುವಂತೆ ಕಂಡು ಬರುತ್ತಿದೆ. ತನಿಖೆ ನಡೆದಿದೆ, ಕೃತ್ಯಕ್ಕೆ ನಿಖರವಾದ ಕಾರಣವಿಲ್ಲ ಎಂದು ಮಾಹಿತಿ ಇದೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನನ್ನು ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ



Source link

Leave a Reply

Your email address will not be published. Required fields are marked *