Headlines

ನಿಶ್ಚಿತಾರ್ಥ ಮಾಡಿಕೊಂಡ ಜೆಡಿ-ಭಾರ್ಗವಿ; ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ

ನಿಶ್ಚಿತಾರ್ಥ ಮಾಡಿಕೊಂಡ ಜೆಡಿ-ಭಾರ್ಗವಿ; ಸರ್​​ಪ್ರೈಸ್ ಕೊಟ್ಟ ರಾಣವ್-ರಾಧಾ


ತೆರೆಮೇಲೆ ನಟಿಸುವಾಗ ಕಲಾವಿದರ ಮಧ್ಯೆ ಪ್ರೀತಿ ಮೂಡಿ ಮದುವೆ ಆಗೋದು ಸಾಮಾನ್ಯ.ಈಗ ಇದಕ್ಕೆ ಹೊಸ ಸೇರ್ಪಡೆ. ಜೀ ಕನ್ನಡದ ‘ಅಮೃತಧಾರೆ’ ಧಾರಾವಾಹಿಯಲ್ಲಿ (ಕನ್ನಡ ಧಾರಾವಾಹಿ) ಜೆಡಿ ಪಾತ್ರ ಮಾಡುತ್ತಿರುವ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದಲ್ಲಿ ‘ಭಾರ್ಗವಿ ಎಲ್ ಎಲ್ ಬಿ’ ಧಾರಾವಾಹಿಯಲ್ಲಿ ಭಾಗರ್ವಿ ಪಾತ್ರ ಮಾಡುತ್ತಿರುವ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ಹೊಸ ಬಾಳಿಗೆ ಕಾಲಿಡಲು ರೆಡಿ ಆಗಿದ್ದಾರೆ.

ಇಬ್ಬರೂ ಬೇರೆ ಬೇರೆ ಚಾನೆಲ್ ಅಲ್ಲಿ ಕೆಲಸ ಮಾಡುವವರು. ಆದರೂ ಇಬ್ಬರ ಮಧ್ಯೆ ಪ್ರೀತಿ ಮೂಡಿತು ಎಂದು ನಿಮಗೆ ಅಚ್ಚರಿ ಆಗಬಹುದು. ಅದಕ್ಕೂ ಉತ್ತರ ಇದೆ. ಈ ಮೊದಲು ರಾಧಾ ಭಗವತಿ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಹೆಸರಿನ ಪಾತ್ರ ಮಾಡುತ್ತಿದ್ದರು. ಮಲ್ಲಿಯದ್ದು, ಜೆಡಿಯ ಪತ್ನಿಯ ಪಾತ್ರ. ‘ಭಾರ್ಗವಿ ಎಲ್ ಎಲ್ ಬಿ’ ಪಾತ್ರ ಸಿಕ್ಕ ಬಳಿಕ ಅವರು ಧಾರಾವಾಹಿಯಿಂದ ಹೊರ ನಡೆದರು.

‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುವಾಗಲೇ ಇವರ ಮಧ್ಯೆ ಪ್ರೀತಿ ಮೂಡಿತ್ತು ಎಂದು ಹೇಳಲಾಗ್ತಿದೆ. ಸದ್ಯ ಇವರು ಹೊಸ ಬಾಳಿಗೆ ಕಾಲಿಡಲು ರೆಡಿ ಆದ ವಿಷಯ ಅಭಿಮಾನಿಗಳಿಗೆ ಖುಷಿ ಹಾಗೂ ಅಚ್ಚರಿ ಎರಡನ್ನೂ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ಬರುತ್ತಿದೆ.

ಸದ್ಯ ರಾಣವ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಹಾರ ಹಾಕಿ ನಿಂತ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ‘ಫೈನಲಿ’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಇವರು ಸದ್ದಿಲ್ಲದೆ ಮದುವೆ ಆದರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ, ಸದ್ಯ ಇವರು ನಿಶ್ಚಿತಾರ್ಥ ಮಾತ್ರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಮುದ್ದು ಸೊಸೆ’ ಧಾರಾವಾಹಿ: ವಿದ್ಯಾಳ ಬಾಳಲ್ಲಿ ಬಂತು ದೊಡ್ಡ ಬಿರುಗಾಳಿ

ರಾಣವ್ ಗೌಡ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಜೆಡಿ ಪಾತ್ರ ಮಾಡುತ್ತಿದ್ದಾರೆ. ಇದರ ಜೊತೆಗೆ ಜೀ ಪವರ್ನ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಇನ್ನು, ರಾಧಾ ಅವರು ಭಾರ್ಗವಿ ಆಗಿ ಮಿಂಚುತ್ತಿದ್ದಾರೆ. ಈಗ ತೆರೆ ಮೇಲಿನ ಜೋಡಿ ಒಂದಾಗಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *