ಬೆಂಗಳೂರು, ನವೆಂಬರ್ 21: ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ವಿಚಾರ ಭಾರಿ ಚರ್ಚೆಯ ನಡುವೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಬಣದ ನಡುವೆ ರಾಜಕೀಯ ಯುದ್ಧ ತಾರಕಕ್ಕೇರಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳಿಗೆ ತೇಪೆ ಹಚ್ಚುವ ಮಾತುಗಳನ್ನಾಡಿದ್ದಾರೆ. ಜೊತೆಗೆ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ವ್ಯರ್ಥ ಪ್ರಯತ್ನ ಮಾಡಲಾಗಿದೆ.
ಸುರ್ಜೇವಾಲ ಹೇಳಿದ್ದೇನು?
ಕರ್ನಾಟಕದ ಸಿಎಂ ಮತ್ತು ಉಪಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿದ್ದು, ನಿರ್ಣಾಯಕವಾಗಿ ಸೋತಿರುವ ಮತ್ತು ಬಣದಿಂದ ಕೂಡಿರುವ ಕರ್ನಾಟಕ ಬಿಜೆಪಿಯು ಮಾಧ್ಯಮದ ಒಂದು ವಿಭಾಗದೊಂದಿಗೆ ಕರ್ನಾಟಕ ಮತ್ತು ಅದರ ಕಾಂಗ್ರೆಸ್ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಒಪ್ಪಿಕೊಂಡರು.
ಏಕೈಕ ಉಪಾಯವೆಂದರೆ…
– ರಣದೀಪ್ ಸಿಂಗ್ ಸುರ್ಜೆವಾಲಾ (@rssurjewala) ನವೆಂಬರ್ 21, 2025
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಣದೀಪ್ ಸುರ್ಜೇವಾಲ, ಸೋಲು ಮತ್ತು ಬಣ ರಾಜಕಾರಣದಿಂದ ಕರ್ನಾಟಕ ಬಿಜೆಪಿ ಬಳಲುತ್ತಿದೆ. ಒಂದು ಭಾಗವು ರಾಜ್ಯ ಸರ್ಕಾರದ ವಿರುದ್ಧ ಮಾಧ್ಯಮ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ, ಡಿಸಿಎಂ ಡಿಕೆ ಜೊತೆ ಚರ್ಚೆ ನಡೆಸಿದರು, ಅಪಪ್ರಚಾರದ ಬಗ್ಗೆ ಅವರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ, ಸರ್ಕಾರದ ಭರವಸೆ ದುರ್ಬಲಗೊಳಿಸುವುದು ಇದರ ಉದ್ದೇಶವಾಗಿದೆ. ಕೆಲವು ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಅನಗತ್ಯ ಹೇಳಿಕೆಗಳು ಸಹ ಊಹಾಪೋಹಗಳಿಗೆ ಕಾರಣವಾಗಿವೆ. ಪಕ್ಷದ ವಿವಿಧ ಪದಾಧಿಕಾರಿಗಳ ಅಭಿಪ್ರಾಯಗಳನ್ನು ನಾಯಕರು ಪಡೆದಿರೋದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ದಿಲ್ಲಿಗೆ ಹೋಗಿರುವ ಡಿಕೆಶಿ ಬಣಕ್ಕೆ ಖಡಕ್ ಸಂದೇಶ ರವಾನಿಸಿದ ಸಿದ್ದರಾಮಯ್ಯ
ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಬಿಜೆಪಿ ಕಿಡಿ
‘@INCKarnataka ಅಧಿಕಾರಕ್ಕೆ ಬಂತೆಂದರೆ, ಕರ್ನಾಟಕದ ರೈತರಿಗೆ ಇನ್ನಿಲ್ಲದ ತೊಂದರೆ!!
ಕರ್ನಾಟಕದ ರೈತರ ಪ್ರತಿನಿತ್ಯದ ಕಣ್ಣೀರು “ಕೈ” ತೊಳೆಯುತ್ತಿದ್ದರೂ, ಕಂಬನಿ ಒರೆಸುವ ಬದಲು ರೈತರ ಕುರ್ಚಿಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ ಕಾಂಗ್ರೆಸ್ ನಾಯಕರು!!!
#ಕಾಂಗ್ರೆಸ್ ಫೇಲ್ಸ್ ಕರ್ನಾಟಕ pic.twitter.com/9bj2Kxsha9– ಬಿಜೆಪಿ ಕರ್ನಾಟಕ (@BJP4Karnataka) ನವೆಂಬರ್ 21, 2025
ಈ ನಡುವೆ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ರೈತರಿಗೆ ಇನ್ನಿಲ್ಲದ ತೊಂದರೆಗಳು ಎದುರಾಗುತ್ತವೆ. ಕಬ್ಬು ಬೆಳೆಗಾರರು, ಮೆಕ್ಕೆ ಜೋಳ ಬೆಳೆದ ರೈತರು ಮತ್ತು ತುಂಡಭದ್ರಾ ಡ್ಯಾಂ ಪಾತ್ರದ ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ರೈತರು ಅನ್ನ ನೀರಿಲ್ಲದೆ, ಹಗಲಿರುಳೆನ್ನದೆ ಕಳೆದೊಂದು ತಿಂಗಳಿನಿಂದ ಹೋರಾಡಿ ತಿರುಗಿ ನೋಡಲು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಸಮಯವಿಲ್ಲ. ಆದರೆ, ಕುರ್ಚಿಗಾಗಿ ದೆಹಲಿಯಲ್ಲಿ ಗುಲಾಮಗಿರಿ ಮಾಡಲು ಸಮಯವಿದೆ ಎಂದು ಆರೋಪಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 4:45 pm, ಶುಕ್ರ, 21 ನವೆಂಬರ್ 25