ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ


ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ತಂಡದ ಕರ್ನಾಟಕ ತಂಡದ ಪರ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಸಂಕಷ್ಟದಿಂದ ತಂಡಕ್ಕೆ ನೆರವಾದರು. ಎರಡನೇ ಇನ್ನಿಂಗ್ಸ್‌ನಲ್ಲಿ 130 ರನ್ ಬಾರಿಸಿದ ರಾಹುಲ್, ಈ ಶತಕದೊಂದಿಗೆ ಕರ್ನಾಟಕ ತಂಡದ ಗೆಲುವನ್ನು ಖಚಿತಪಡಿಸಿದರು. ಮುಂಬೈ ನೀಡಿದ 325 ರನ್‌ಗಳ ಗುರಿಯನ್ನು ಬೆನ್ನಟ್ಟಿ ಕರ್ನಾಟಕ 4 ಪಂದ್ಯಗಳಿಂದ ಪಂದ್ಯವನ್ನು ಗೆದ್ದಿತು. ಇದು ಕೆಎಲ್ ರಾಹುಲ್ ಪ್ರಥಮ ದರ್ಜೆ ವೃತ್ತಿಜೀವನದ 25ನೇ ಶತಕ ಎಂಬುದು ಮತ್ತಷ್ಟು ವಿಶೇಷವಾಗಿತ್ತು.

ಈ ಗೆಲುವಿನೊಂದಿಗೆ ಕರ್ನಾಟಕ ಸೆಮಿಫೈನಲ್‌ಗೆ ತಲುಪಿದೆ. ಕೆಎಲ್ ರಾಹುಲ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಈ ಶತಕ ಬಾರಿಸಿದ್ದು ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಏಕೆಂದರೆ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ರಾಹುಲ್ ಈ ಕೆಲಸ ಮಾಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಕೆಎಲ್ ರಾಹುಲ್ ತಮ್ಮ ಇನ್ನಿಂಗ್ಸ್‌ನಲ್ಲಿ 14 ಬೌಂಡರಿಗಳು ಮತ್ತು ಒಂದು ಸಿಕ್ಸ್ ಬಾರಿಸಿದರು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *