ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್​​ಗೆ ಟ್ವಿಸ್ಟ್​​: ಆರೋಪಿ ಕೂಡ ನೇಣಿಗೆ ಶರಣು

ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್​​ಗೆ ಟ್ವಿಸ್ಟ್​​: ಆರೋಪಿ ಕೂಡ ನೇಣಿಗೆ ಶರಣು


ಆತ್ಮಹತ್ಯೆಗೆ ಶರಣಾದ ರಂಜಿತಾಳ ಕೊಂದಿದ್ದ ರಫೀಕ್.

ಯಲ್ಲಾಪುರ, ಜನವರಿ 04: ಮದುವೆಗೆ ಒಪ್ಪದಿದ್ದಕ್ಕೆ ವಿಚ್ಛೇದಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸಂಬಂಧ ಕೊಲೆ ಆರೋಪಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆ ರಂಜಿತಾ ಕೊಲೆಗೈದು ಅರಣ್ಯದಲ್ಲಿ ಪರಾರಿಯಾಗಿದ್ದ ರಫೀಕ್(30) ಮೃತದೇಹ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಳಮ್ಮನಗರ ಅರಣ್ಯದಲ್ಲಿ ಇದೆ. ಎಸ್ಕೇಪ್ ಆಗಿದ್ದ ಆರೋಪಿಗಾಗಿ ಇಂದು ಶ್ವಾನದಳದಿಂದ ಹುಡುಕಾಟ ನಡೆಸುವಾಗ ಘಟನೆ ಬೆಳಕಿಗೆ ಬಂದಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಗಂಡಿನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ರಂಜಿತಾಳನ್ನು ರಫೀಕ್ ಪ್ರೀತಿಸುತ್ತಿದ್ದಳು. ಇಬ್ಬರ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯ ಸಹ ಇದ್ದು, ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ. ಒಂದು ಮಗು ಕೂಡ ಹೊಂದಿದ್ದ ರಂಜಿತಾ ತಂದೆ ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದಳು. ಜೀವನೋಪಾಯಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಈತ್ತೀಚೆಗೆ ಮದುವೆಯಾಗುವಂತೆ ರಂಜಿತಾಳನ್ನು ರಫೀಕ್ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಮ್ಮ ಸಂಬಂಧ ಹೀಗೆ ಇರಲಿ, ಆದರೆ ಮದುವೆ ಆಗುವುದಿಲ್ಲ ಎಂದು ಹೇಳಿದ್ದಳು.

ಇದನ್ನೂ ಓದಿ: ವಿವಾಹಿತ ಮಹಿಳೆಯೊಂದಿಗೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ

ಇದರಿಂದ ಕೋಪಗೊಂಡಿದ್ದ ರಫೀಕ್ ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ, ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಆ ವೇಳೆಯೂ ರಂಜಿತಾ ನಿರಾಕರಿಸಿದ ಕಾರಣ ಆಕೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ಆರೋಪಿ ರಫೀಕ್ ಮತ್ತು ಮೃತ ರಂಜಿತಾಳ ಅಣ್ಣ ಸ್ನೇಹಿತರಾಗಿದ್ದರೆ, ಘಟನೆ ನಡೆದ ಮುನ್ನ ರಾತ್ರಿ ಇಬ್ಬರು ಪಾರ್ಟಿ ಕೂಡ ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು.

ಹಿಂದೂ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದನ್ನು ಖಂಡಿಸಿ ಇಂದು ಯಲ್ಲಾಪುರ ಬಂದ್ ಗೆ ವಿಎಚ್ ಪಿ ಕರೆ ಕೂಡ ಕೊಟ್ಟಿತ್ತು.ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಪ್ರತಿಕ್ರಿಯಿಸುವಂತೆ ಮನವಿ ಮಾಡಲಾಗಿತ್ತು. ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಜೊತೆಗ ಆರೋಪಿಯೋವರೆಗೂ ರಂಜಿತಾಳ ಅಂತ್ಯಕ್ರಿಯೆ ಮಾಡಲ್ಲ ಎಂದು ಹಿಂದೂ ಸಂಘಟನೆಗಳ ಪಟ್ಟು ಹಿಡಿದಿದ್ದವು. ಆದರೆ ಈ ನಡುವೆ ರಫೀಕ್ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *