ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್‌ದತ್ ನಟಿಸಿದ್ದಾರೆ. ಯಶ್ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ‘ಧುರಂಧರ್ 2’ಗೆ ಸ್ಪರ್ಧೆಯೇ ಇಲ್ಲ.

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ರಿಲೀಸ್ (ಮಾ.19)ಗೆ 5 ದಿನ ಬಾಕಿ ಇದೆ. ಇನ್ನೂ ಸಿನಿಮಾದ ಪ್ರೀ ಬುಕಿಂಗ್ ಆರಂಭವಾಗಿಲ್ಲ. ಮಾ.18ರ ಪ್ರೀಮಿಯರ್ ಶೋಗಳಿಗಷ್ಟೇ ಪ್ರೀ ಬುಕಿಂಗ್ ತೆರೆಯಲಾಗಿದೆ. ಪ್ರೀಮಿಯರ್ ಶೋ ಬುಕಿಂಗ್‌ನಿಂದಲೇ ಸಿನಿಮಾದ ಕಲೆಕ್ಷನ್ 60 ಕೋಟಿ ರು. ದಾಟಿದೆ.

ಭಾರತದಲ್ಲಿ ಪ್ರೀಮಿಯರ್ ಶೋದ 4.6 ಲಕ್ಷಕ್ಕೂ ಅಧಿಕ ಟಿಕೆಟ್‌ಗಳ ಮಾರಾಟವಾಗಿದೆ. ಬಹುತೇಕ ಕಡೆಗಳಲ್ಲಿ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಇನ್ನೊಂದೆಡೆ ಧುರಂಧರ್ ಮೊದಲ ಭಾಗವೂ ಮತ್ತೆ ಥೇಟರಿನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಈ ನಡುವೆ ಚಿತ್ರ ನಿರ್ದೇಶಕ ಆದಿತ್ಯ ಧರ್ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ‘ಧನ್ಯತಾ ಭಾವದಿಂದ ಮನಸ್ಸು ತುಂಬಿದೆ. ಧುರಂಧರ್ ಸಿನಿಮಾಗೆ ಮತ್ತು ಆ ಸಿನಿಮಾ ನಿರ್ದೇಶಕನಾದ ನನಗೆ ನೀವು ಕೊಟ್ಟ ಪ್ರೀತಿ ದೊಡ್ಡದು. ಸಿನಿಮಾದಲ್ಲಿ ಸಿಗೋಣ’ ಎಂದು ಹೇಳಿದ್ದಾರೆ.

ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್‌ದತ್ ನಟಿಸಿದ್ದಾರೆ. ಯಶ್ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ‘ಧುರಂಧರ್ 2’ಗೆ ಸ್ಪರ್ಧೆಯೇ ಇಲ್ಲದಂತಾಗಿದ್ದು, ಸಿನಿಮಾ ದಾಖಲೆಯ ಗಳಿಕೆ ಮಾಡುವ ನಿರೀಕ್ಷೆ ಇದೆ.

3 ಗಂಟೆ 55 ನಿಮಿಷಗಳ ಸುದೀರ್ಘ ಚಿತ್ರ ಇದಾಗಿದ್ದು, ಸೆನ್ಸಾರ್‌ನಿಂದ ‘ಎ’ ಸರ್ಟಿಫಿಕೇಟ್ ಪಡೆದಿದೆ. ಚಿತ್ರದ ಟ್ರೇಲರ್‌ಗೆ ಭಾರಿ ಮೆಚ್ಚುಗೆ ದೊರೆತಿದೆ. ರಣವೀರ್ ಸಿಂಗ್ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಉತ್ಸುಕರಾಗಿ ಕಾಯುತ್ತಿದ್ದಾರೆ.

Source link
ರಿಲೀಸ್‌ಗೆ ಮುನ್ನವೇ ಧುರಂಧರ್ 2 ಭರ್ಜರಿ ಓಪನಿಂಗ್: ರಣವೀರ್ ಸಿನಿಮಾದ ಕಲೆಕ್ಷನ್ ಎಷ್ಟು ಕೋಟಿ?