‘ಕಾಂತಾರ: ಅಧ್ಯಾಯ 1’ (ಕಾಂತಾರ ಅಧ್ಯಾಯ 1) ಸಿನಿಮಾದ ಬಗ್ಗೆ ಮಾತನಾಡುವಾಗ ನಟ ರಣವೀರ್ ಸಿಂಗ್ ಅವರು ದೈವಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮಾರ್ಚ್ 9 ರವರೆಗೂ ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದೆ. ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದಿದೆ. ಯುದ್ಧದಿಂದಾಗಿ ರಣವೀರ್ ಸಿಂಗ್ (ರಣವೀರ್ ಸಿಂಗ್) ಪರ ವಕೀಲರು ಇಂಗ್ಲೆಂಡ್ನಲ್ಲೇ ಉಳಿದಿದ್ದಾರೆ.
ವಿಮಾನವಿಲ್ಲದೇ ಭಾರತಕ್ಕೆ ವಾಪಸಾಗುತ್ತಿಲ್ಲ ಎಂದು ಸಜನ್ ಪೂವಯ್ಯ ಹೇಳಿದ್ದಾರೆ. ‘ರಣವೀರ್ ಸಿಂಗ್ಗೆ ನೋಟಿಸ್ ನೀಡಿದ್ದೇವೆ, ಸಮಯ ಕೇಳಿದ್ದಾರೆ’ ಎಂದು ಸರ್ಕಾರದ ಹೆಚ್ಚುವರಿ ಎಸ್ಪಿಪಿ ಬಿ.ಎನ್. ಜಗದೀಶ್ ಹೇಳಿಕೆ. ನ್ಯಾಯಾಲಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9 ರವರೆಗೆ ನ್ಯಾಯಾಲಯವು ಮುಚ್ಚಿದೆ.
ಏನಿದು ವಿವಾದ? ಕಳೆದ ವರ್ಷ ನಡೆದ ಗೋವಾ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್, ರಿಷಬ್ ಶೆಟ್ಟಿಯವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ರಣವೀರ್ ಸಿಂಗ್ ಅವರು ‘ಕಾಂತಾರ: ಅಧ್ಯಾಯ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳಿದರು. ಮಾತಿನ ಭರದಲ್ಲಿ ಅವರು ದೈವದ ಅನುಕರಣೆಯನ್ನು ಮಾಡಿದರು.
ರಣವೀರ್ ಸಿಂಗ್ ಅವರು ದೈವದ ಅನುಕರಣೆಯನ್ನು ಮಾಡಿದ್ದು ಆಕ್ಷೇಪಾರ್ಹವಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಖಂಡಿಸಿದರು. ದೈವವನ್ನು ನಂಬುವ ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಕೇಸ್ ಕೈ ಬಿಡುವಂತೆ ರಣವೀರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ
2025ರ ಡಿಸೆಂಬರ್ ತಿಂಗಳಿನಲ್ಲಿ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಯಿತು. ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲು ಮಾಡಿದರು. ಆ ಪ್ರಕರಣವನ್ನು ಕೈ ಬಿಡುವಂತೆ ಮನವಿ ಮಾಡಿರುವ ರಣವೀರ್ ಸಿಂಗ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಮಾರ್ಚ್ 9ರವರೆಗೂ ಅವರಿಗೆ ರಿಲೀಫ್ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.