ನಟ ರಣವೀರ್ ಸಿಂಗ್ (ರಣವೀರ್ ಸಿಂಗ್) ವೃತ್ತಿ ಜೀವನದ ಅತಿ ದೊಡ್ಡ ಚಿತ್ರವಾಗಿ ‘ಧುರಂಧರ’ (ಧುರಂಧರ) ಸಿನಿಮಾ ಇದೆ. ನೈಜ ಘಟನೆಗಳನ್ನು ಆಧರಿಸಿ ಸಿದ್ಧವಾದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆ ಆಗಿ 15 ದಿನ ಕಳೆದರೂ ಕೂಡ ‘ಧುರಂದರ್’ ಸಿನಿಮಾದ ಹವಾ ತಗ್ಗುತ್ತಲೇ ಇಲ್ಲ. ಅನೇಕ ಹಳೇ ದಾಖಲೆಗಳನ್ನು ಈ ಸಿನಿಮಾ ಮುರಿಯುತ್ತಿದೆ. ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ 470 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ (ಧುರಂಧರ ಸಂಗ್ರಹ) ಆಗಿದೆ. ಮುಂಬರುವ ದಿನಗಳಲ್ಲಿ ಕೂಡ ಉತ್ತಮ ಕಮಾಯಿ ಆಗಲಿದೆ.
ಡಿಸೆಂಬರ್ 5ರಂದು ‘ಧುರಂಧರ’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನದಿಂದಲೇ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿತು. ಬಳಿಕ ಜನರಿಂದ ಬಾಯಿ ಮಾತಿನ ಪ್ರಚಾರ ಸಿಕ್ಕಿದ ಕಲೆಕ್ಷನ್ ಜಾಸ್ತಿ ಆಯಿತು. ಮೊದಲ ವೀಕೆಂಡ್ ಮತ್ತು ಎರಡನೇ ವೀಕೆಂಡ್‌ನಲ್ಲಿ ಅಬ್ಬರಿಸಿದ ಈ ಸಿನಿಮಾ ಈಗ ಮೂರನೇ ವೀಕೆಂಡ್‌ನಲ್ಲಿ ಕೂಡ ಅಭೂತಪೂರ್ವ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.
‘ಧುರಂಧರ’ ಬಿಡುಗಡೆ ಆದ ಬಳಿಕ ಕೆಲವು ಸ್ಟಾರ್ ಸಿನಿಮಾಗಳು ರಿಲೀಸ್ ಆದವು. ದರ್ಶನ್ ನಟನೆಯ ‘ದಿ ಡೆವಿಲ್’, ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾಗಳು ತೆರೆಕಂಡವು. ಹಾಗಿದ್ದರೂ ಕೂಡ ‘ಧುರಂಧರ’ ಕಲೆಕ್ಷನ್ ಕಡಿಮೆಯಾಗಲಿಲ್ಲ. ಅಷ್ಟೇ ಅಲ್ಲ, ಈಗ ಹಾಲಿವುಡ್ ನ ‘ಅವತಾರ್ 3’ ಸಿನಿಮಾ ಬಂದಿದೆ. ಆದರೂ ಸಹ ‘ಧುರಂಧರ’ ಅಬ್ಬರಿಸುತ್ತಲೇ ಇದೆ.
15ನೇ ದಿನವಾದ ಡಿಸೆಂಬರ್ 19ರಂದು ‘ಧುರಂಧರ’ ಸಿನಿಮಾ ಹಲವು ಕಡೆ ಹೌಸ್ ಫುಲ್ ಆಗಿದೆ. ಇನ್ನು, ಮೂರನೇ ವೀಕೆಂಡ್ ಆದ ಡಿಸೆಂಬರ್ 20 ಮತ್ತು 21ರಂದು ಹೆಚ್ಚಿನ ಪ್ರದರ್ಶನ ಸಿನಿಮಾ ವೀಕ್ಷಿಸುವ ನಿರೀಕ್ಷೆ ಇದೆ. ‘ಬಾಹುಬಲಿ 2’, ‘ಪುಷ್ಪ 2’ ಮುಂತಾದ ಸಿನಿಮಾಗಳ ದಾಖಲೆಗಳನ್ನು ಮುರಿಯುವ ‘ಧುರಂಧರ’ ಸಿನಿಮಾ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?
‘ಧುರಂಧರ’ ಸಿನಿಮಾದ ಕಲೆಕ್ಷನ್ ಇಷ್ಟಕ್ಕೇ ನಿಲ್ಲುವುದಿಲ್ಲ. ಡಿಸೆಂಬರ್ 25 ಕ್ರಿಸ್ಮಸ್ ರಂದು ರಜೆ ಬರಲಿದೆ. ಅದರ ಬೆನ್ನಲ್ಲೇ ನಾಲ್ಕನೇ ವೀಕೆಂಡ್ ಬರಲಿದೆ. ನಂತರ ಹೊಸ ವರ್ಷದ ಸೆಲೆಬ್ರೇಷನ್ ಕೂಡ ಇರುತ್ತದೆ. ಈ ಎಲ್ಲ ಸಂಭ್ರಮಗಳ ಕಾರಣದಿಂದ ‘ಧುರಂಧರ’ ಸಿನಿಮಾಗೆ ಖಂಡಿತಾ ಕಲೆಕ್ಷನ್ ಆಗಲಿದೆ. ‘ಧುರಂಧರ’ ಸಿನಿಮಾದ ಟೋಟಲ್ ಕಲೆಕ್ಷನ್ ಎಷ್ಟಾಗಲಿದೆ ಎಂದು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.