
‘ಧುರಂಧರ 2’ (ಧುರಂಧರ 2) ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ, ಸಿನಿಮಾಕ್ಕೆ ಸಖತ್ ಹೈಪ್ ಸಿಕ್ಕಿದೆ. ಮಾರ್ಚ್ 18 ರಂದು ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋ ದೇಶದ ಹಲವು ಪ್ರಮುಖ ನಗರಗಳಲ್ಲಿ ಪ್ರಾರಂಭವಾಯಿತು, ಪ್ರೀಮಿಯರ್ ಶೋ ಟಿಕೆಟ್ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ ಕೆಲವು ದಿನ ಪ್ರಾರಂಭವಾಯಿತು. ಭಾರಿ ಮೊತ್ತಕ್ಕೆ ಈ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್‌ಗಳು ಮಾರಾಟ ಆಗುತ್ತಿವೆ. ಟಿಕೆಟ್ ಬೆಲೆ ಹೆಚ್ಚಿದ್ದರೂ ಸಹ ಅಡ್ವಾನ್ಸ್ ಬುಕಿಂಗ್ ಜೋರಾಗಿ ಆಗುತ್ತಿದೆ, ಈವರೆಗೆ ಸುಮಾರು 3.50 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ.
‘ಧುರಂಧರ 2’ ಸಿನಿಮಾದ ಪೇಯ್ಡ್ ಪ್ರೀಮಿಯರ್‌ಗೆ 3.50 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರ್ಚ್ 10 ರ ವೇಳೆಗೆ ಮಾರಾಟವಾಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರಣವೀರ್ ಸಿಂಗ್ ಅವರ ವೃತ್ತಿಜೀವನದಲ್ಲೇ ಇದು ಅತ್ಯಂತ ವೇಗವಾಗಿ ಟಿಕೆಟ್ ಮಾರಾಟವಾಗುತ್ತಿರುವ ಸಿನಿಮಾ ಎಂದು ಹೇಳಲಾಗುತ್ತಿದೆ. ಪ್ರೀಮಿಯರ್ ಶೋಗೆ ಇನ್ನೂ ಒಂದು ವಾರ ಬಾಕಿ ಇತ್ತು, ಈ ಸಂಖ್ಯೆ ದುಪ್ಪಟ್ಟಾಗುವ ದಟ್ಟ ಸಾಧ್ಯತೆ ಇದೆ. ಕೇವಲ ಪೇಯ್ಡ್ ಪ್ರೀಮಿಯರ್ ನಿಂದಲೇ ‘ಧುರಂಧರ 2’ ಸಿನಿಮಾಕ್ಕೆ 40 ರಿಂದ 50 ಕೋಟಿ ಕಲೆಕ್ಷನ್ ಆಗುವ ಸಾಧ್ಯತೆ ಇದೆ.
ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್ ಅಂತಹ ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಮುಂಬೈ, ಬೆಂಗಳೂರು ಮತ್ತು ದೆಹಲಿಯಲ್ಲಂತೂ ಟಿಕೆಟ್ ಬೆಲೆ ಗಗನಕ್ಕೇರಿವೆ. ಮುಂಬೈನಲ್ಲಿ ಗರಿಷ್ಟ ಟಿಕೆಟ್ ಬೆಲೆ 3100 ರೂಪಾಯಿಗಳಿವೆ. ಬೆಂಗಳೂರಿನಲ್ಲಿ 2200 ರೂಪಾಯಿಗಳಿವೆ. ದೆಹಲಿಯಲ್ಲಿಯೂ ಸಹ ಸರಿ ಸುಮಾರಿ ಇಷ್ಟೇ ಮೊತ್ತಕ್ಕೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಏನು ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗುತ್ತಿದೆ.
ಇದನ್ನೂ ಓದಿ:ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ 2’ ಸುನಾಮಿ: 1 ಟಿಕೆಟ್ ಬೆಲೆ 3100 ರೂಪಾಯಿ
ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ’ ಸಿನಿಮಾದ ಮೊದಲ ಭಾಗದ ಯಶಸ್ಸಿನ ನಂತರ, ಅದರ ಮುಂದುವರಿದ ಭಾಗವಾದ ‘ಧುರಂಧರ 2’ ಮೇಲೆ ಅಭಿಮಾನಿಗಳಲ್ಲಿ ಭಾರಿ ಕುತೂಹಲವಿದೆ. ಇದೇ ಕಾರಣಕ್ಕೆ ಸಿನಿಮಾದ ಪೇಯ್ಡ್ ಪ್ರೇಮಿಗಳ ಹೌಸ್ ಫುಲ್ ಆಗುತ್ತಿದೆ. ಸಿನಿಮಾದ ರಿಲೀಸ್ ದಿನವೂ ಸಹ ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗುವ ಸಾಧ್ಯತೆ ಇದೆ, ಮೊದಲ ದಿನವೇ 100 ಕೋಟಿಗೂ ಹೆಚ್ಚು ಗಳಿಕೆ ಆಗುವ ನಿರೀಕ್ಷೆ ಇದೆ.
ರಣವೀರ್ ಸಿಂಗ್ ನಟನೆಯ ‘ಧುರಂಧರ 2’ ಸಿನಿಮಾದಲ್ಲಿ ಅಕ್ಷಯ್ ಖನ್ನ, ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್ ಪಾಲ್ ಸೇರಿದಂತೆ ಹಲವು ಪ್ರಮುಖ ನಟರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ