ರಣವೀರ್ ಸಿಂಗ್ (ರಣವೀರ್ ಸಿಂಗ್) ಉತ್ತಮ ಕಲಾವಿದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ವಿವಿಧ ಪಾತ್ರಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಅವರೇ ಶ್ರೇಷ್ಠ ಎಂದು ಅವರ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ದಕ್ಷಿಣದ ಅಭಿಮಾನಿಗಳು ಕಮಲ್ ಹಾಸನ್, ಸೂರ್ಯ, ಕಮಲ್ ಹಾಸನ್, ರಜನಿಕಾಂತ್ ಅವರನ್ನು ನೆನಪಿಸಿದ್ದಾರೆ.
ರಣವೀರ್ ಸಿಂಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಬ್ಯಾಂಡ್ ಬಜಾ ಭಾರತ್’ ಚಿತ್ರದ ಮೂಲಕ. ಆ ಬಳಿಕ ಅವರು ಐತಿಹಾಸಿಕ ಸಿನಿಮಾಗಳನ್ನು ಮಾಡಿದರು. ‘ಪದ್ಮಾವತ್’ ಸಿನಿಮಾದಲ್ಲಿನ ಖಿಲ್ಜಿ ಪಾತ್ರಕ್ಕೆ ಅಭಿಮಾನಿಗಳು ಹಾಗೂ ವಿಮರ್ಶಕರು ಫುಲ್ ಮಾರ್ಕ್ಸ್ ಕೊಟ್ಟರು. ‘ಧುರಂಧರ’ ಸಿನಿಮಾದಲ್ಲಿ ಅವರ ನಟನೆ ಬೇರೊಂದು ಹಂತಕ್ಕೆ ಹೋಗಿದೆ. ಅವರ ವಿವಿಧ ಸಿನಿಮಾಗಳ ಪಾತ್ರಗಳನ್ನು ಸೇರಿಸಿ ಒಂದು ಪೋಸ್ಟರ್ ಮಾಡಲಾಗಿದೆ.
ಇದನ್ನೂ ಓದಿ: ‘ಧುರಂಧರ 2’ ಪೋಸ್ಟರ್‌ಗೆ ಯಶ್ ಸಿನಿಮಾ ಸ್ಫೂರ್ತಿ? ಟ್ರೆಂಡ್ ಸೆಟ್ಟರ್ ಆದ ರಾಕಿಭಾಯ್
‘ದಕ್ಷಿಣ ಸಿನಿಮಾ ರಂಗದಲ್ಲಿ ಇಂತಹ ಬಹುಮುಖ ನಟನನ್ನು ನನಗೆ ತೋರಿಸಿ, ನಾನು ನನ್ನ ಖಾತೆಯನ್ನು ಡಿಲೀಟ್ ಮಾಡುತ್ತೇನೆ’ ಎಂದು ಅದಿತಿ ಎಂಬವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ರಾಜ್ಕುಮಾರ್ ನಟಿಸಿದ ಪಾತ್ರಗಳ ಫೋಟೋಗಳು ಕೊಲ್ಯಾಜ್ನ ಕಮೆಂಟ್ ಬಾಕ್ಸ್ ಅಲ್ಲಿ ಹಾಕಲಾಗಿದೆ, ‘ನಿಮ್ಮ ಖಾತೆಯನ್ನು ಡಿಲೀಟ್ ಮಾಡಲು ಸಮಯ ಬಂದಿದೆ’ ಎಂದು ಬರೆಯಲಾಗಿದೆ.
ದಕ್ಷಿಣ ಚಿತ್ರರಂಗದಲ್ಲಿ ಅವರಂತಹ ಬಹುಮುಖ ನಟನನ್ನು ನನಗೆ ತೋರಿಸಿ, ನಾನು ನನ್ನ ಖಾತೆಯನ್ನು ಅಳಿಸುತ್ತೇನೆ. pic.twitter.com/EJUW3CG182
— ಅದಿತಿ (@aditiraaaj) ಫೆಬ್ರವರಿ 3, 2026
X ನಿಂದ ನಿಮ್ಮ ಪ್ರೊಫೈಲ್ ಅನ್ನು ಅಳಿಸಿ pic.twitter.com/Sx3V9nTfA8
— ಕೇಶವ ಮೂರ್ತಿ (@Keshava91681250) ಫೆಬ್ರವರಿ 3, 2026
ಕಮಲ್ ಹಾಸನ್, ಸೂರ್ಯ ಮೊದಲಾದ ಕಲಾವಿದರ ಅಭಿಮಾನಿಗಳು ಕೂಡ ತಮ್ಮಿಷ್ಟದ ನಟರ ಸಿನಿಮಾಗಳ ವಿವಿಧ ಪೋಸ್ಟರ್‌ಗಳನ್ನು ಸೇರಿಸಿ ಕಮೆಂಟ್ ಬಾಕ್ಸ್ ಅಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಮೂಲಕ ಉತ್ತರ ನೀಡುವ ಕೆಲಸ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.