Headlines

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ

Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ, ಸಾಮಾನ್ಯವಾಗಿ 180 ಡಿಗ್ರಿ ವಿರುದ್ದ ದಿಕ್ಕಿನಲ್ಲಿರುವ ಸೂರ್ಯ ಹಾಗೂ ಚಂದ್ರ ಇಂದು ಏಕಕಾಲಕ್ಕೆ ಗೋಚರವಾಗುತ್ತಾರೆ.

ಇಂದು ಖಗ್ರಾಸ ಚಂದ್ರಗ್ರಹಣ. ಬ್ಲಡ್ ಮೂನ್ ಎಂದೇ ಕರೆಯಲ್ಪಡುವ ಪೂರ್ಣಚಂದ್ರಗ್ರಹಣದಲ್ಲಿ ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇಂದು (ಮಾ.03) 3.30ಕ್ಕೆ ಚಂದ್ರಗ್ರಹಣ ಶುರುವಾಗಿದೆ. ಪೂರ್ಣಗ್ರಹಣ ಸಂಜೆ 4.34 ರಿಂದ 5.32ರ ಒಳಗೆ ನಡೆಯಲಿದೆ. ಸಂಜೆ 6.47ರ ವೇಳೆಗೆ ಗ್ರಹಣ ಅಂತ್ಯಗೊಳ್ಳಲಿದೆ. ಭಾರತದಲ್ಲಿ ಗ್ರಹಣಕ್ಕೆ ವಿಶೇಷ ಮಹತ್ವವಿದೆ. ಜೊತೆಗೆ ವೈಜ್ಞಾನಿಕವಾಗಿಯೂ ಅಪರೂಪದ ವಿದ್ಯಮಾನವಾಗಿದೆ.

ಸಾಮಾನ್ಯವಾಗಿ ಸೂರ್ಯ ಮುಳುಗಿದ ಬಳಿಕ ಚಂದ್ರ ಮೂಡುತ್ತಾನೆ. ಈ ಬ್ಲಡ್‌ಮೂನ್ ದಿನ ಸೂರ್ಯ ಹಾಗೂ ಚಂದ್ರ ಏಕಕಾಲಕ್ಕೆ ಗೋಚರವಾಗಲಿದೆ. ಇದು ಅತ್ಯಂತ ಅಪರೂಪದ ವಿದ್ಯಮಾನವಾಗಿದೆ. ಚಂದ್ರಗ್ರಹಣ ಸಮಯದಲ್ಲಿ ಸೂರ್ಯ ಹಾಗೂ ಚಂದ್ರ ಪರಸ್ಪರ 180 ಡಿಗ್ರಿ ವಿರುದ್ಧ ದಿಕ್ಕಿನಲ್ಲಿ ಇರುತ್ತಾರೆ. ಆದರೆ ಖಗ್ರಾಸ ಚಂದ್ರಗ್ರಹಣದ ದಿನ ಒಂದು ಕಡೆ ಸೂರ್ಯಾಸ್ತಮಾನವಾಗುತ್ತಿದ್ದರೆ, ಮತ್ತೊಂದೆಡೆ ಕೆಂಪು ಚಂದ್ರನ ಉದಯ ಎರಡೂ ಏಕಕಾಲಕ್ಕೆ ಗೋಚರವಾಗಲಿದೆ.

ಚಂದ್ರಗ್ರಹಣ ಸಮಯದಲ್ಲಿ ಸೂರ್ಯ ಹಾಗೂ ಚಂದ್ರ ಭೂಮಿಯ ನೇರ ವಿರುದ್ಧ ದಿಕ್ಕಿನಲ್ಲಿ ಇರುವ ಕಾರಣ ಏಕಕಾಲಕ್ಕೆ ನೋಡಲು ಸಾಧ್ಯವಾಗುದಿಲ್ಲ. ಆದರೆ ಇಂದು ಸೂರ್ಯ ಹಾಗೂ ಚಂದ್ರ ನೈಜ ಸ್ಥಾನಕ್ಕಿಂತ ಕೊಂಚ ಮೇಲೆ ಇದ್ದಂತೆ ಕಾಣಲಿದೆ. ಇದರಿಂದ ಸೂರ್ಯಾಸ್ತವಾಗುವ ಮೊದಲೇ ಚಂದ್ರನ ಉದಯವಾಗಲಿದೆ.

ಸಮುದ್ರ ತೀರ, ಸೂರ್ಯಾಸ್ತ ಕಾಣುವ ಎತ್ತರದ ಪರ್ವತ ಪ್ರದೇಶಗಳಲ್ಲಿದ್ದರೆ ಇಂದು ಸೂರ್ಯಾಸ್ತಮಾನ ಹಾಗೂ ಉದಯಿಸುವ ಚಂದ್ರ ಎರಡನ್ನು ನೋಡಲು ಸಾಧ್ಯವಿದೆ. ಈ ಅಪರೂಪದ ವಿದ್ಯಮಾನ ದಿಗಂತದಲ್ಲಿ ಕೇವಲ 2 ರಿದ 9 ನಿಮಿಷಗಳ ವರೆಗೆ ಮಾತ್ರ ಇರಲಿದೆ. ಭಾರತದಲ್ಲಿ ಅಂತಿಮ ಹಂತದ ಚಂದ್ರಗ್ರಹಣ ಗೋಚರವಾಗಲಿದೆ.

ಅಸ್ಸಾಂ, ಅರುಣಾಚಲ ಪ್ರದೇಶ , ಮೇಘಾಲ ರಾಜ್ಯಗಳಲ್ಲಿ ಖಗ್ರಾಸ ಚಂದ್ರಗ್ರಹಣ ಸ್ಪಷ್ಯವಾಗಿ ಗೋಚರಿಸಲಿದೆ. ಇತ್ತ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಸ್ಪಷ್ಟೆ ಇರುವುದಿಲ್ಲ. ದಕ್ಷಿಣ ಭಾರತದಲ್ಲಿ ಗರಿಷ್ಠ 10 ರಿಂದ 30 ನಿಮಿಷ ಕಾಲ ಚಂದ್ರಗ್ರಹಣ ಗೋಚರವಾಗಲಿದೆ.

ಭಾರತದಲ್ಲಿ ಎಲ್ಲೆಲ್ಲಿ ಚಂದ್ರಗ್ರಹಣ ಸ್ಪಷ್ಟವಾಗಿ ಗೋಚರ

Source link

Leave a Reply

Your email address will not be published. Required fields are marked *