ಗದಗ, ಜನವರಿ 24: ಪ್ರಾಚೀನ ಹಿನ್ನೆಲೆ ಹೊಂದಿರುವ ಲಕ್ಕುಂಡಿ ಗ್ರಾಮದಲ್ಲಿ ಒಂದೆಡೆ ಉತ್ಖನನದ ನಡೆಯತ್ತಿದ್ದು, ಮತ್ತೊಂದೆಡೆ ಅಪರೂಪದ ಘಟಸರ್ಪ ನಾಗರಕಲ್ಲಿನ ಮೂರ್ತಿ ಇರುವುದು ತೀವ್ರ ಕುತೂಹಲ ಮೂಡಿಸಿದೆ. ಲಕ್ಕುಂಡಿ ಗ್ರಾಮದ ಷಣ್ಮುಖ ರವದಿ ಎಂಬುವರ ಜಮೀನಿನಲ್ಲಿ ಈ ಅಪರೂಪದ ಶಿಲಾಮೂರ್ತಿ ಹೊಂದಿದ್ದು, ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಆಸ್ಥೆಯ ಭಾವನೆ ಮೂಡಿದೆ. ಪತ್ತೆಯಾದ ಈ ಶಿಲೆ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದೆ ಎನ್ನಲಾಗಿದ್ದು, ಅಲಂಕಾರಿಕ ವಿನ್ಯಾಸ ಹೊಂದಿರುವ ಘಟಸರ್ಪ ಮೂರ್ತಿ ಐತಿಹಾಸಿಕ ಮಹತ್ವ ಪಡೆದಿದೆ. ಇದ ಮುನ್ನ ಲಕ್ಕುಂಡಿಯ ಐತಿಹಾಸಿಕ ಬಾವಿಯೊಳಗೆ ಚಾಲುಕ್ಯರ ಕಾಲದ ಸುಂದರ ಅಲಂಕಾರಿಕ ಶಿಲೆಗಳು ಇದ್ದವು. ಜೊತೆಗೆ ಉತ್ಖನನ ನಡೆಯುತ್ತಿರುವ ಜಾಗದಲ್ಲಿಯೂ ಎರಡು ನಾಗರ ಚಿತ್ರಗಳಿರುವ ಕಲ್ಲುಗಳು ಇದ್ದವು.
ಈಗ ಹೊಸದಾಗಿ ಘಟಸರ್ಪ ನಾಗರಕಲ್ಲು ವಾಸ್ತವವಾಗಿ, ‘ಲಕ್ಕುಂಡಿಯ ಪುರಾತನ ಸಂಪತ್ತನ್ನು ಸರ್ಪಗಳು ಕಾಯುತ್ತಿವೆ’ ಎಂಬ ಪ್ರಶ್ನೆಗಳು ಸ್ತಳೀಯರಲ್ಲಿ ಉದ್ಭವವಾಗಿದೆ.
ಮತ್ತೊಂದೆಡೆ, ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನದ 9ನೇ ದಿನದಂದು ಹಲವಾರು ವಿಸ್ಮಯಕಾರಿ ಪುರಾತನ ಶಿಲ್ಪಗಳು. ವಿಶೇಷವಾಗಿ, ಉತ್ಖನನಕಾರರಿಗೆ ಹಳೆಯ ಮನೆಗಳು ಮತ್ತು ತೋಟದ ಮನೆಗಳ ಗೋಡೆಗಳಲ್ಲಿ ಚಾಲುಕ್ಯ ಮತ್ತು ರಾಷ್ಟ್ರಕೂಟರ ಕಾಲದ ಶಿಲೆಗಳು ಗೋಚರಿಸುತ್ತವೆ. ಇದು ಲಕ್ಕುಂಡಿಯ ಶ್ರೀಮಂತ ಇತಿಹಾಸವನ್ನು ಮತ್ತಷ್ಟು ಎತ್ತಿ ಹಿಡಿದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ