ರಾಶಿಕಾ ಶೆಟ್ಟಿ ಅವರು ಈ ವಾರದ ಕ್ಯಾಪ್ಟನ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅವರು ಕ್ಯಾಪ್ಟನ್ ಆಗಿದ್ದನ್ನು ಒಪ್ಪಿಕೊಂಡಿದ್ದಾರೆ ಎಂಬುದು ಬೇರೆ ವಿಷಯ. ಟಾಸ್ಕ್ನಲ್ಲಿ ಮೋಸ ಆಗಿದೆ ಎಂದು ಅನೇಕರು ಹೇಳಿದ್ದಾರೆ. ಆದರೆ, ಇದನ್ನು ಅವರು ಒಪ್ಪುವುದಿಲ್ಲ. ಈಗ ಅವರು ಆಡಿದ ಒಂದು ಮಾತು ಚರ್ಚೆಗೆ ಕಾರಣ ಆಗಿದೆ. ಅವರು ಈ ಮಾತಿನಿಂದ ಜೋಕರ್ ರೀತಿಯಲ್ಲಿ ಕಾಣಿಸಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ ಆಗಿದ್ದು ಏನು? ಇಲ್ಲಿದೆ ವಿವರ.
ಡಿಸೆಂಬರ್ 15 ರ ಎಪಿಸೋಡ್ ನಲ್ಲಿ ಈ ಘಟನೆಗಳು ನಡೆದವು. ರಾಶಿಕಾ ಶೆಟ್ಟಿ ಅವರು ಸೂರಜ್ನ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಹೆಸರು ತೆಗೆದುಕೊಂಡರು. ಈ ವೇಳೆ ಅವರು ಕೊಟ್ಟ ಕಾರಣವೇ ಈಗ ಚರ್ಚೆಗೆ ಗ್ರಾಸವಾಗಿದೆ. ರಾಶಿಕಾ ಅವರು ಆಡಿದ ಮಾತಿನಿಂದ ಅವರು ಜೋಕರ್ ರೀತಿಯಲ್ಲಿ ಕಾಣಿಸಿದ್ದಾರೆ.
ಈ ವಾರ ಸೂರಜ್ ಕ್ಯಾಪ್ಟನ್ ಆಗಬೇಕಿತ್ತು, ಆದರೆ ಚೈತ್ರ ಮಾಡಿದ ತಪ್ಪುಗಳಿಂದ ನಾನು ಕ್ಯಾಪ್ಟನ್ ಆಗಿದ್ದೇನೆ ಮತ್ತು ಸೂರಜ್ ಅವರನ್ನು ನಾಮನಿರ್ದೇಶನದಿಂದ ರಕ್ಷಿಸಿದೆ ಎಂದು ಅವಳು ಅಕ್ಷರಶಃ ಹೇಳಿದಳು.
ಅದೇ ಕಾರಣಕ್ಕಾಗಿ, ರಶಿಕಾ ಮತ್ತು ಸೂರಜ್ ಜಗಳವಾಡಿದರು, ಅವಳು ತನ್ನನ್ನು ತಾನು ಸಮರ್ಥಿಸಿಕೊಂಡಳು, ನಾಯಕತ್ವಕ್ಕೆ ಅರ್ಹಳು ಎಂದು … pic.twitter.com/w2McEcsV0I
– ಮನು (@yoitzmanu) ಡಿಸೆಂಬರ್ 15, 2025
ರಾಶಿಕಾ ಅವರು ಸೂರಜ್ನ ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಮಾಡೋದಾಗಿ ಹೇಳಿದ್ದಾರೆ. ‘ಕಳೆದ ವಾರ ಅವರು ಕ್ಯಾಪ್ಟನ್ ಆಗಬೇಕಿತ್ತು. ಆದರೆ, ಚೈತ್ರಾ ಅವರು ಮಾಡಿದ ತಪ್ಪಿನಿಂದ ಅವರಿಗೆ ಅವಕಾಶ ತಪ್ಪಿತು. ಹೀಗಾಗಿ, ಈ ಬಾರಿ ಅವರನ್ನು ನಾನು ಆಯ್ಕೆ ಮಾಡುತ್ತಿದ್ದೇನೆ’ ಎಂದು ಹೇಳಿದರು. ಇದನ್ನು ನೋಡಿ ಅನೇಕರಿಗೆ ನಗು ಬಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಇದನ್ನೂ ಓದಿ: ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ಚು
ಏಕೆಂದರೆ ಕಳೆದ ವಾರ ಸೂರಜ್ ಅವರು ಇದೇ ವಿಷಯವನ್ನು ಇಟ್ಟುಕೊಂಡು ರಾಶಿಕಾ ಬಳಿ ವಾದಿಸಿದ್ದರು. ಆಗ ರಾಶಿಕಾ ಅವರು ಇದನ್ನು ಒಪ್ಪಿಲ್ಲ. ‘ನಾನು ಆಡಿ ಕ್ಯಾಪ್ಟನ್ ಆಗಿರೋದು. ಎಲ್ಲಿಯೂ ತಪ್ಪು ನಡೆದಿಲ್ಲ’ ಎಂದು ತಾವು ಸಮರ್ಥಿಸಿಕೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಆ ನಿರ್ಧಾರ ಬದಲಾಗಿದೆ ಎಂಬುದು ಅನೇಕರಿಗೆ ಅಚ್ಚರಿ ತಂದಿದೆ. ಅನೇಕರು ರಾಶಿಕಾನ ಜೋಕರ್ ಸಸ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.