Headlines

ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ

ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ


ಬಿಗ್ ಬಾಸ್ (ಬಿಗ್ ಬಾಸ್) ಮನೆಯಲ್ಲಿ ಬಾಗಿಲು ತೆರೆದಾಗ ಅದನ್ನು ಸ್ವೀಕರಿಸಬೇಕು. ಅದನ್ನು ಮುಚ್ಚಿಬಿಟ್ಟರೆ ಅದರಷ್ಟು ಮೂರ್ಖತನ ಮತ್ತೊಂದು ಇರೋದಿಲ್ಲ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ದಡ್ಡತನದಿಂದ ದೊಡ್ಡ ಅವಕಾಶವನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ರಾಶಿಕಾ ಶೆಟ್ಟಿ ಅವರು ಈ ವಾರ ಆಡಿದರು. ಅವರ ತಂಡ ಗೆದ್ದಿತು. ಈ ವೇಳೆ ಅವರು ತಾವು ನಾಮನಿರ್ದೇಶನದಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ, ಇದಕ್ಕೆ ರಕ್ಷಿತಾ ಶೆಟ್ಟಿ ಅವಕಾಶ ಕೊಡಲಿಲ್ಲ. ಅವರು ಹಠ ಬಿದ್ದು, ಸುಧಿಯನ್ನು ಸೇವ್ ಮಾಡಬೇಕು ಎಂದರು. ಅವಕಾಶ ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಪ್ಪುತ್ತಾರೆ.

ಆ ಬಳಿಕ ಮತ್ತೊಂದು ಟಾಸ್ಕ್ ಗೆದ್ದಾಗ ರಾಶಿಕಾ ಅವರನ್ನು ನಾಮನಿರ್ದೇಶನದಿಂದ ಬಚಾವ್ ಮಾಡಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದರು. ಈ ರೀತಿ ಸೇವ್ ಮಾಡಿದಾಗ ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಮುಂದೆ ಬರುವ ಆಟದ ದೃಷ್ಟಿಯಿಂದ ಅಭಿಯನ್ನು ನಾಮಿನೇಟ್ ಮಾಡಬೇಕು ಎಂಬುದು ತಂಡದ ನಿರ್ಧಾರ. ಆದರೆ, ಇದಕ್ಕೆ ರಾಶಿಕಾ ಒಪ್ಪಿಗೆ ಸೂಚಿಸಲೇ ಇಲ್ಲ.

ರಾಶಿಕಾ ಥಿಯರಿಯೇ ಬೇರೆ ಇತ್ತು. ಸ್ಪಂದನಾ ನಾಮಿನೇಟ್ ಆಗಬೇಕು ಎಂದು ಅವರು ಹಠ ಹಿಡಿದರು. ಅವರನ್ನು ನಾಮಿನೇಟ್ ಮಾಡಿ ತಂಡಕ್ಕೆ ಸೇರಿಸಿದರೆ ಟೀಂ ಬಲ ಕಡಿಮೆ ಆಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಆದರೆ, ರಾಶಿಕಾ ಮಾತ್ರ ಹಠ ಬಿಡಲೇ ಇಲ್ಲ. ಕೊನೆಗೆ ಒಮ್ಮತದ ನಿರ್ಧಾರಕ್ಕೆ ಬರಲಾಗದೆ ಸಿಕ್ಕ ದೊಡ್ಡ ಅವಕಾಶವನ್ನು ಕೈಚೆಲ್ಲಿದರು.

ಇದನ್ನೂ ಓದಿ: ಗಿಲ್ಲಿ ಕೈಗೊಂಬೆಯಾದ್ರಾ ರಕ್ಷಿತಾ ಶೆಟ್ಟಿ? ವೀಕೆಂಡ್‌ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?

ಈ ಬಗ್ಗೆ ಬಿಗ್ ಬಾಸ್ ಅನೌನ್ಸ್ ಬೇಸರ ಹೊರಹಾಕಿದರು. ‘ನೀವೆಷ್ಟು ದೊಡ್ಡ ಅವಕಾಶ ಕಳೆದುಕೊಂಡಿದ್ದೇನೆ ಎಂಬ ಪರಿಜ್ಞಾನ ನಿಮಗೆ ಇಲ್ಲ’ ಎಂದು ಬಿಗ್ ಬಾಸ್ ಹೇಳಿದರು. ಇಷ್ಟು ದಿನ ‘ನಾನು ಸೇವ್ ಆಗೋದಿಲ್ಲ, ನನಗೆ ಯಾಕೆ ಹೀಗಾಗುತ್ತದೆ’ ಎನ್ನುತ್ತಿದ್ದ ರಾಶಿಕಾ ಅವರು ಇಂದು ಈ ಮತ್ತು ದೊಡ್ಡತನದ ಕಾರಣಕ್ಕೆ ಸಿಕ್ಕ ದೊಡ್ಡ ಅವಕಾಶ ಕೈಚೆಲ್ಲಿದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *