ಒಂದೇ ವಾರದಲ್ಲಿ ಎರಡು ದೊಡ್ಡ ಹೊಡೆತ ತಿಂದ ರಾಶಿಕಾ; ಕಣ್ಣೀರು ಹಾಕಿದ ನಟಿ

ಒಂದೇ ವಾರದಲ್ಲಿ ಎರಡು ದೊಡ್ಡ ಹೊಡೆತ ತಿಂದ ರಾಶಿಕಾ; ಕಣ್ಣೀರು ಹಾಕಿದ ನಟಿ


ಬಿಗ್ ಬಾಸ್ (ಬಿಗ್ ಬಾಸ್) ರಾಶಿಕಾ ಶೆಟ್ಟಿ ಅವರು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇತ್ತೀಚೆಗೆ ಅವರು ಅಶ್ವಿನಿ ಗೌಡ ಹಾಗೂ ರಿಷಾ ಗೌಡ ಜೊತೆ ಹೆಚ್ಚು ಬೆರೆಯುತ್ತಿದ್ದಾರೆ. ಮೊದಲು ಸೂರಜ್ ಜೊತೆ ಆಪ್ತರಾಗಿದ್ದರು, ಈಗ ಅವರಿಂದ ಆದಷ್ಟು ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಮಧ್ಯೆ ರಾಶಿ ಅವರು ಏಳು ದಿನಗಳ ಅಂತರದಲ್ಲಿ ಎರಡೆರಡು ಬಾರಿ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.

ಕಳೆದ ವಾರ ರಾಶಿಕಾ ಅವರು ಬ್ಲ್ಯೂ ಟೀನ್ನ ಪ್ರತಿನಿಧಿಸಿದ್ದರು. ಈ ತಂಡ ಗೆದ್ದ ಒಬ್ಬರನ್ನು ಕ್ಯಾಪ್ಟನ್ಸಿ ರೇಸ್ ಗೆ ಆಯ್ಕೆ ಮಾಡಬೇಕಿತ್ತು. ಒಮ್ಮತದ ನಿರ್ಧಾರ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದರು. ಎಲ್ಲರೂ ರಾಶಿಕಾ ಹೆಸರನ್ನು ತೆಗೆದುಕೊಂಡರು. ಆದರೆ, ಗಿಲ್ಲಿ ನಟ ಮಾತ್ರ ಇದಕ್ಕೆ ಒಪ್ಪಲೇ ಇಲ್ಲ. ಹೀಗಾಗಿ ಈ ಆಯ್ಕೆಯನ್ನು ಬಿಗ್ ಬಾಸ್ ಹಿಂದಕ್ಕೆ ಪಡೆದರು. ಈ ರಾಶಿಕಾ ಕ್ಯಾಪ್ಟನ್ ಆಗಬೇಕು ಎಂಬ ಕನಸು ಭಗ್ನವಾಯಿತು.

ಈ ವಾರವೂ ರಾಶಿಗೆ ಇದೇ ರೀತಿಯ ಪರಿಸ್ಥಿತಿ ಬಂದೊದಗಿತು. ರಾಶಿಕಾ ಹಾಗೂ ರಕ್ಷಿತಾ ಶೆಟ್ಟಿಗೆ ಮನೆಯಿಂದ ಪತ್ರ ಕಳುಹಿಸಲಾಗಿದೆ. ಎಲ್ಲರ ಒಮ್ಮತದಿಂದ ಒಬ್ಬರಿಗೆ ಲೆಟರ್ ಕೊಡಿಸೋ ನಿರ್ಧಾರಕ್ಕೆ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಗಿಲ್ಲಿ, ಕಾವ್ಯ, ಸ್ಪಂದನಾ ಮೊದಲಾದವರು ರಕ್ಷಿತಾಗೆ ಲೆಟರ್ ಕೊಡಬೇಕು ಎಂದರು. ಅಶ್ವಿನಿ, ರಿಷಾ ಮೊದಲಾದವರು ರಾಶಿಗಳಿಗೆ ಪತ್ರ ಸಿಗಬೇಕು ಎಂದು ವಾದಿಸಿದರು. ಆದರೆ, ಅಂತಿಮವಾಗಿ ಯಾವುದಾದರೂ ಒಮ್ಮತ ಬಂದಿಲ್ಲ. ಹೀಗಾಗಿ, ಇಬ್ಬರಿಗೂ ಪತ್ರ ಕೈ ತಪ್ಪಿದೆ.

ಇದನ್ನೂ ಓದಿ: ಕಾವ್ಯಗೋಸ್ಕರ ದೊಡ್ಡ ತ್ಯಾಗ ಮಾಡಿದ ಗಿಲ್ಲಿ; ಸಿಕ್ತು ಪ್ರೀತಿಯ ಅಪ್ಪುಗೆ

ಯಾವಾಗ ಒಮ್ಮತದ ನಿರ್ಧಾರ ಬರಬೇಕು ಎಂದು ಬಿಗ್ ಬಾಸ್ ಸೂಚಿಸಿದರೋ ಆಗಲೇ ರಾಶಿಕಾಗೆ ಪತ್ರ ಕೈ ತಪ್ಪುತ್ತದೆ ಎಂಬುದು ಸ್ಪಷ್ಟವಾಗಿದೆ. ಮನೆಯ ಪತ್ರ ಕೈ ತಪ್ಪಿ ಅವರು ಕಣ್ಣೀರು ಹಾಕಿದರು. ನನಗೆ ಏಕೆ ಹೀಗೆ ಆಗುತ್ತದೆ ಎಂದು ಬಿಕ್ಕಿ ಬಿಕ್ಕಿ ಅತ್ತರು. ಪತ್ರ ಕಳೆದುಕೊಂಡಿದ್ದಕ್ಕೆ ರಕ್ಷಿತಾ ಅವರು ಡ್ರಾಮಾ ಕ್ರಿಯೇಟ್ ಮಾಡಲಿಲ್ಲ. ಇದನ್ನು ಪ್ರಬುದ್ಧವಾಗಿ ಹ್ಯಾಂಡಲ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *