Headlines

ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ ರಶ್ಮಿಕಾ: ಪಾತ್ರ ಎಂತಹದ್ದು ಗೊತ್ತೆ?

ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ ರಶ್ಮಿಕಾ: ಪಾತ್ರ ಎಂತಹದ್ದು ಗೊತ್ತೆ?


ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ತಮ್ಮ ನಟನೆ ಮತ್ತು ಗ್ಲಾಮರ್ ನಿಂದ ದಕ್ಷಿಣ ಭಾರತ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮೊದಲೆಲ್ಲ ಸೀದಾ-ಸಾದಾ ‘ಪಕ್ಕದ ಮನೆ ಹುಡುಗಿ’ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅನುಭವ ಹೆಚ್ಚಾದಂತೆ ತುಸು ಬೋಲ್ಡ್ ಆದ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದರು. ‘ಪುಷ್ಪ’ ಸಿನಿಮಾದ ಅವರ ಪಾತ್ರ ಅಲ್ಲಲ್ಲಿ ತುಸು ಬೋಲ್ಡ್ ಆಗುತ್ತಿದೆ. ಕೆಲ ತಿಂಗಳುಗಳ ಹಿಂದೆ ಬಿಡುಗಡೆ ಆದ ‘ಥಮ’ ಸಿನಿಮಾದಲ್ಲಿ ತುಸು ಹೆಚ್ಚೇ ಬೋಲ್ಡ್ ಆಗಿ ನಟಿಸಿದ್ದರು. ಒಂದು ಐಟಂ ಹಾಡಿನಲ್ಲೂ ಕಾಣಿಸಿಕೊಂಡಿದ್ದರು. ಆದರೆ ಇದೀಗ ರಶ್ಮಿಕಾ ಎಲ್ಲ ಗಡಿಗಳನ್ನು ಮುರಿದು ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ.

ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ‘ಗರ್ಲ್ ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಿದ್ದರು. ಪುರುಷ ಅಹಂ ಅನ್ನು ಎದುರಿಸುವ, ಪ್ರಶ್ನೆ ಮಾಡುವ ಗಟ್ಟಿಯಾದ ಪಾತ್ರದಲ್ಲಿ ನಟಿಸಿದ್ದರು ರಶ್ಮಿಕಾ. ಆದರೆ ಇದೀಗ ರಶ್ಮಿಕಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸಲಿಂಗಕಾಮಿಯ (ಲೆಸ್ಬಿಯನ್) ಪಾತ್ರದಲ್ಲಿ ನಟಿಸಿದ್ದಾರೆ. ತುಂಬಾ ಬೋಲ್ಡ್ ಆದ ಪಾತ್ರ ಇದಾಗಿರುವ ಜೊತೆಗೆ ಸಖತ್ ಗ್ಲಾಮರಸ್ ಆಗಿಯೂ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಿಂದಿಯ ‘ಕಾಕ್ಟೇಲ್ 2’ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದಲ್ಲಿ ರಶ್ಮಿಕಾ ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಸಹ ಇದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ ಹೊಂದಿರುವ ಸಿನಿಮಾ ಆಗಿದೆ ಎನ್ನಲಾಗುತ್ತಿದೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯಂತೆ ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ಕೃತಿ ಸನೋನ್ ಲೆಸ್ಬಿಯನ್ ಕಪಲ್ ಪಾತ್ರ ನಿರ್ವಹಿಸಿದಂತೆ.

ಇದನ್ನೂ ಓದಿ:ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಮೇಲೆ ಯಾರು ಶ್ರೀಮಂತರು? ಇಲ್ಲಿದೆ ವಿವರ

2012 ರಲ್ಲಿ ಬಿಡುಗಡೆ ಆಗಿದ್ದ ‘ಕಾಕ್ಟೇಲ್’ ಸಿನಿಮಾದಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ದಿಯಾನಾ ಪೆಂಟಿ ನಟಿಸಿದ್ದರು. ಅದು ಪಕ್ಕಾ ತ್ರಿಕೋನ ಪ್ರೇಮಕಥೆಯನ್ನು ಹೊಂದಿತ್ತು. ಸಿನಿಮಾ ದೊಡ್ಡ ಹಿಟ್ ಸಹ ಆಗಿದೆ. ಅದೇ ಫಾರ್ಮುಲಾ ಇರಿಸಿಕೊಂಡು ಇದೀಗ ‘ಕಾಕ್ಟೇಲ್ 2’ ಮಾಡಲಾಗಿದೆ. ಆದರೆ ಇಲ್ಲಿ ಕತೆಯಲ್ಲಿ ಟ್ವಿಸ್ಟ್ ಕೊಡ, ರಶ್ಮಿಕಾ ಮತ್ತು ಕೃತಿ ಸನೋನ್ ಅವರನ್ನು ಜೋಡಿ ಮಾಡಲಾಗಿದೆ.

‘ಕಾಕ್ಟೇಲ್ 2’ ನಿರ್ದೇಶಕ ಹೋಮಿ ಅದ್ಜಾಯಿನ್ ಹೇಳಿದ್ದಂತೆ ಜನವರಿ 31 ರಂದು ಸಿನಿಮಾದ ಶೂಟಿಂಗ್ ಮುಗಿದಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ಮುಗಿದಿದೆ. ಆದರೆ ಶಾಹಿದ್ ಕಪೂರ್ ನಟನೆಯ ‘ಓ ರೋಮಿಯೊ’ ಸಿನಿಮಾ ಬಿಡುಗಡೆ ಆಗಬೇಕಿದ್ದ ಕಾರಣ ‘ಕಾಕ್ಟೇಲ್ 2’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *