Headlines

ರಶ್ಮಿಕಾ ಮಂದಣ್ಣ ಈಗ ಶ್ರೀಮತಿ! ಈ ಹೊತ್ತಲ್ಲೇ ಬಯಲಾಯ್ತು ಶೆಟ್ರ ಜೊತೆಗಿನ ಕೊಡಗಿನ ಸೀಕ್ರೆಟ್​

ರಶ್ಮಿಕಾ ಮಂದಣ್ಣ ಈಗ ಶ್ರೀಮತಿ! ಈ ಹೊತ್ತಲ್ಲೇ ಬಯಲಾಯ್ತು ಶೆಟ್ರ ಜೊತೆಗಿನ ಕೊಡಗಿನ ಸೀಕ್ರೆಟ್​

ರಶ್ಮಿಕಾ ಮಂದಣ್ಣ ಈಗ ಶ್ರೀಮತಿ! ಈ ಹೊತ್ತಲ್ಲೇ ಬಯಲಾಯ್ತು ಶೆಟ್ರ ಜೊತೆಗಿನ ಕೊಡಗಿನ ಸೀಕ್ರೆಟ್​

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸುದ್ದಿಯ ನಡುವೆ, ರಕ್ಷಿತ್ ಶೆಟ್ಟಿ ಅವರೊಂದಿಗಿನ ಅವರ ಹಿಂದಿನ ನಿಶ್ಚಿತಾರ್ಥ ಮತ್ತು ಬ್ರೇಕಪ್ ಮತ್ತೆ ಚರ್ಚೆಗೆ ಬಂದಿದೆ. ರಶ್ಮಿಕಾ ತಮ್ಮ ವೃತ್ತಿಜೀವನಕ್ಕಾಗಿ ರಕ್ಷಿತ್ ಅವರನ್ನು ಬಳಸಿಕೊಂಡರು ಎನ್ನುವ ಆರೋಪವಿದೆ.

ನಟಿ ರಶ್ಮಿಕಾ ಮಂದಣ್ಣ ಇದಾಗಲೇ ರಶ್ಮಿಕಾ ವಿಜಯ್​ ದೇವರಕೊಂಡ ಆಗಿದ್ದಾರೆ. ಇವರ ಮದುವೆ ರಾಜಸ್ಥಾನದಲ್ಲಿ ನಡೆದಿದೆ. ಹಲವಾರು ವರ್ಷಗಳ ಪ್ರೀತಿಗೆ ಜೋಡಿ ಮದುವೆಯ ಮುದ್ರೆ ಒತ್ತಿದೆ.

ಇದರ ನಡುವೆಯೇ, ನಟಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್​ ಶೆಟ್ಟಿ (Rashmika Mandanna and Raskhit Shetty) ಅವರ ವಿಷ್ಯ ಮುನ್ನೆಲೆಗೆ ಬರುತ್ತಲೇ ಇದೆ. ರಕ್ಷಿತ್​ ಜೊತೆ ರಶ್ಮಿಕಾ ಎಂಗೇಜ್​ಮೆಂಟ್​ ಕೂಡ ಆಗಿದ್ದರು. ಅದಾದ ಬಳಿಕ ಶೆಟ್ಟರ ಕುಟುಂಬ ಕೊಡಗಿನ ಟೂರ್​ಗೂ ಹೋಗಿತ್ತು. ಅಲ್ಲಿ ರಶ್ಮಿಕಾ ಮತ್ತು ರಕ್ಷಿತ್​ ಅವರು ಕೂಡ ಇದ್ದರು. ಅದರ ಫೋಟೋಗಳು ಈಗ ವೈರಲ್​ ಆಗುತ್ತಿವೆ.

ಅಲ್ಲಿಗೆ ಅರ್ಥ, ಈ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ಶೆಟ್ಟರ ಕುಟುಂಬ ನಿರ್ಧರಿಸಿತ್ತು. ಆದರೆ ಇದರ ನಡುವೆಯೇ ಇಬ್ಬರ ಬ್ರೇಕಪ್​ ಆಯಿತು. ಅದಕ್ಕೆ ಕಾರಣ ಬೇರೆ ಬೇರೆ ಹೇಳಲಾಗುತ್ತಿದ್ದರೂ, ಅವರಿಗೆ ಮಾತ್ರ ನಿಜವಾದ ಕಾರಣ ಗೊತ್ತಿದೆಯಷ್ಟೇ.

ಅಷ್ಟಕ್ಕೂ ಈ ಬಣ್ಣದ ಲೋಕದಲ್ಲಿ ಸಂಬಂಧ, ಬ್ರೇಕಪ್​ ಎಲ್ಲವೂ ಮಾಮೂಲೇ ಆಗಿದ್ದರೂ, ರಶ್ಮಿಕಾ ಅವರು ರಕ್ಷಿತ್​ ಶೆಟ್ಟಿ ಅವರನ್ನು ಇಂಡಸ್ಟ್ರಿಯಲ್ಲಿ ನೆಲೆಯೂರಲು ಏಣಿಯಾಗಿ ಬಳಸಿಕೊಂಡರು ಎನ್ನುವ ದೊಡ್ಡ ಆರೋಪ ಕೇಳಿಬಂದಿದೆ. ಈಕೆ ಕನ್ನಡದಲ್ಲಿ ಸ್ಟಾರ್​ ನಟಿಯಾಗಿ, ರಾತ್ರೋರಾತ್ರಿ ನ್ಯಾಷನಲ್​ ಕ್ರಷ್​ ಆಗಿ ಬೆಳೆಯುವುದಕ್ಕೆ ಕಾರಣ, ರಕ್ಷಿತ್​ ಶೆಟ್ಟಿಯೇ ಆಗಿದ್ದರು.

ಆ ಬಳಿಕ, ರಶ್ಮಿಕಾ ಅವರಿಗೆ ಎಲ್ಲಾಭಾಷೆಗಳಲ್ಲಿಯೂ ಛಾನ್ಸ್ ಮೇಲೆ ಛಾನ್ಸ್​ ಸಿಕ್ಕು, ಏರುತ್ತಾ ಹೋದ ಹಾಗೆ, ಈ ಏರಲು ಕಾರಣವಾಗಿರುವ ರಕ್ಷಿತ್​ ಶೆಟ್ಟಿ ಎನ್ನುವ ಏಣಿಯನ್ನೇ ತುಳಿದರು ಎನ್ನುವ ಆರೋಪಗಳೂ ಕೇಳಿಬರುತ್ತಿವೆ.

ಅಷ್ಟಕ್ಕೂ, ನಿಜವಾಗಿಯೂ ಏನು ನಡೆದಿದೆ ಎನ್ನುವುದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಗಾಳಿ ಸುದ್ದಿ, ಊಹಾಪೋಹಗಳು ಎಂದಿಗೂ ಕಾಲ್ಪನಿಕವೇ. ಆದರೆ ಕನ್ನಡದ ರಕ್ಷಿತ್​ ಶೆಟ್ಟಿ ಅವರಿಗೆ ರಶ್ಮಿಕಾ ಮೋಸ ಮಾಡಿದ್ದಾರೆ ಎನ್ನುವ ವಿಷಯ ಮಾತ್ರ ಸದ್ಯ ಹರಿದಾಡುತ್ತಿದೆ.

Source link

Leave a Reply

Your email address will not be published. Required fields are marked *