ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿರುವ ವಿಚಾರ ಗುಟ್ಟೇನೂ ಅಲ್ಲ. ಈ ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ, ತಮ್ಮ ಪ್ರೀತಿಯನ್ನು ಸಾಕಷ್ಟು ಗೌಪ್ಯವಾಗಿಯೇ ಇಟ್ಟಿದ್ದರು. ಇದೀಗ ಈ ಜೋಡಿ ವಿವಾಹವಾಗಿದ್ದಾರೆ, ವಿವಾಹವನ್ನೂ ಸಹ ಗುಟ್ಟಾಗಿಯೇ ಇರಿಸಿದ್ದಾರೆ. ಆದರೆ ಸುದ್ದಿ ಲೀಕ್ ಆಗಿದೆ. ವಿಜಯ್ ಮತ್ತು ರಶ್ಮಿಕಾ ಅವರು ನಾಳೆ (ಫೆಬ್ರವರಿ 2) ಮದುವೆ ಆಗಿದ್ದು, ಮದುವೆ ತಯಾರಾಗಿದ್ದು ಎನ್ನಲಾದ ವಿಡಿಯೋ ಸಹ ವೈರಲ್ ಆಗಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಕೆಲ ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಖತ್ ಸುದ್ದಿಯಾಗಿದೆ. ಅದಾದ ಬಳಿಕ ರಶ್ಮಿಕಾ ಮಂದಣ್ಣ ಬ್ಯಾಚುಲರ್ ಪಾರ್ಟಿ ಸಹ ಮುಗಿಸಿಕೊಂಡು ಬಂದರು. ವಿಜಯ್ ಮತ್ತು ರಶ್ಮಿಕಾ ಜಂಟಿಯಾಗಿ ವಿದೇಶಕ್ಕೆ ಹೋಗಿ ಶಾಪಿಂಗ್ ಸಹ ಮಾಡಿಕೊಂಡು ಬಂದರು. ಎರಡು ಫೆಬ್ರವರಿಯಲ್ಲಿ ಆಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿದೆ, ಆದರೆ ಇವರ ಮದುವೆ ನಾಳೆ (ಫೆಬ್ರವರಿ 2) ರಂದು ನಡೆಯುತ್ತಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಇಬ್ಬರು ಯುವತಿಯರು ತಾವು ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ನಡೆಯಲಿರುವ ಸ್ಥಳದಲ್ಲಿದ್ದು, ಅದ್ಧೂರಿಯಾಗಿ ವಿವಾಹದ ಸಿದ್ಧತೆಗಳು ನಡೆಯುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ರಾಜಸ್ಥಾನದ ಅರಮನೆಗಳ ನಗರ ಉದಯಪುರದ ಸಿಟಿ ಪ್ಯಾಲೆಸ್ ನಲ್ಲಿ ವಿವಾಹ ಸಮಾರಂಭ ಎಂದು ವೈರಲ್ ವಿಡಿಯೋದಲ್ಲಿ ಯುವತಿಯರು ಹೇಳಿದ್ದಾರೆ. ಅವರು ಮಾಡಿರುವ ವಿಡಿಯೋದಲ್ಲಿ ವೇದಿಕೆಯಲ್ಲಿ ಬಲು ಅದ್ಧೂರಿಯಾಗಿ ಸಿಂಗರಿಸಲಾಗುತ್ತಿದೆ.
ಎರಡು ದಿನದ ಹಿಂದಷ್ಟೆ ನಟಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆಗ ಪಾಪರಾಟ್ಜಿಗಳು ‘ಮದುವೆಗೆ ಕರೆಯುವುದಿಲ್ಲವೇ?’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಾಣತನದ ಉತ್ತರ ನೀಡಿ ಜಾರಿಕೊಂಡ ರಶ್ಮಿಕಾ, ‘ಯಾರ ಮದುವೆ?’ ಎಂದು ಕೇಳಿದ್ದಾರೆ. ಮತ್ತೆ ಮದುವೆಯ ಬಗ್ಗೆಯೇ ಪ್ರಶ್ನೆ ಕೇಳಿದಾಗ ತಕ್ಷಣ ಜಾಣತನದಿಂದ ಮಾತನ್ನು ಸಿನಿಮಾದ ಕಡೆಗೆ ತಿರುಗಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ