Headlines

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಯ ಮೊದಲ ಫೋಟೋ ವೈರಲ್

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಯ ಮೊದಲ ಫೋಟೋ ವೈರಲ್


ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (ವಿಜಯ್ ದೇವರಕೊಂಡ) ಅವರು ಮದುವೆ ಆಗಿದ್ದಾರೆ. ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹ ನಡೆದಿದೆ. ಮದುವೆ ಫೋಟೋ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗಾಗಿ ರಶ್ಮಿಕಾ (ರಶ್ಮಿಕಾ ಮಂದಣ್ಣ) ಮತ್ತು ವಿಜಯ್ ಮೊದಲ ಪೋಸ್ಟ್ ಮಾಡಿದ್ದಾರೆ. ತಮ್ಮ ಮದುವೆಯ ಸುಂದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿರೋಶ್ ವಿವಾಹದ ಫೋಟೋಗಳು (ವಿರೋಶ್ ಮದುವೆ ಫೋಟೋ) ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ಸತಿಪತಿ ಆಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ತೆಲುಗು ಸಂಪ್ರದಾಯದಂತೆ ವಿರೋಶ್ ಮದುವೆ ನಡೆಯಿತು. ಈ ಮದುವೆಗೆ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಯಿತು. ಅಂದಾಜು 100 ಮಂದಿ ಮಾತ್ರ ಈ ಮದುವೆಗೆ ಹಾಜರಿ ಹಾಕಿದ್ದಾರೆ. ತೀರಾ ಇತ್ತೀಚಿನ ದಿನಗಳ ತನಕ ಮದುವೆ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಈಗ ಫೋಟೋ ಶೇರ್ ಮಾಡಿದ್ದಾರೆ.

ಹಲವು ವರ್ಷಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಡೇಟಿಂಗ್ ಮಾಡುತ್ತಿದ್ದರು. ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಅವರ ನಡುವೆ ಪ್ರೀತಿ ಚಿಗುರಿತ್ತು. ಆ ಬಗ್ಗೆ ಇಡೀ ಜಗತ್ತಿಗೆ ಅನುಮಾನ ಇದ್ದರೂ ಕೂಡ ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *