
ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಂತೆ ಅನೇಕ ಜಾಹೀರಾತು ಕಂಪನಿಗಳಿಂದ ಆಫರ್ ನೀಡಲಾಗಿದೆ. ಈ ಮೇಲಿನ ಎಥ್ನಿಕ್ ಬಟ್ಟೆ ಬ್ರ್ಯಾಂಡ್ ಮಾನ್ಯವರ್ ಜೊತೆ ದಂಪತಿ ಕೈ ಜೋಡಿಸಿದರು. ಈಗ ಮಾನ್ಯಾವರ್ ಮೋಹೆ ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಹೊಸ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ‘ಮೇಡ್ ಫಾರ್ ಈಚ್ ಓದರ್’ ಹೆಸರಲ್ಲಿ ರಚಿಸಿರೋ ಈ ಅಭಿಯಾನ ಭರ್ಜರಿ ಮೆಚ್ಚುಗೆ ಪಡೆದಿದೆ.
ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮಾನ್ಯವರ್ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಈ ಪೋಸ್ಟ್ ಇನ್ಸ್ಟಾಗ್ರಾಮ್ ಅಲ್ಲಿ 72 ಗಂಟೆಗಳಲ್ಲಿ 100 ಮಿಲಿಯನ್ ವೀವ್ಸ್ ದಾಟಿದೆ. ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ, ಈ ಅಭಿಯಾನವು ಈಗ 300 ಮಿಲಿಯನ್ ವೀವ್ಸ್ ಪಡೆದಿದೆ. ಜೊತೆಗೆ, 250 ಮಿಲಿಯನ್ ಹೆಚ್ಚು ಬಳಕೆದಾರರನ್ನು ತಲುಪಿದೆ.
ಪೋಸ್ಟ್ ಎಂಗೇಜ್ಮೆಂಟ್ ಬಗ್ಗೆ ನೋಡೋದಾದರೆ, ಈ ವಿಡಿಯೋ 4 ಲಕ್ಷಕ್ಕೂ ಹೆಚ್ಚು ಶೇರ್, 65 ಸಾವಿರ ರಿಪೋಸ್ಟ್ ಮತ್ತು 29,500 ಕ್ಕೂ ಹೆಚ್ಚು ಕಾಮೆಂಟ್ಗಳನ್ನು ಹೊಂದಿದೆ. ಪ್ರಚಾರ್ ಕಮ್ಯುನಿಕೇಷನ್ ವ್ಯವಸ್ಥಾಪಕರು ಈ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ‘ಮೇಡ್ ಫಾರ್ ಈಚ್ ಓದರ್’ ಅಭಿಯಾನವು ಪ್ರಸ್ತುತ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ನಡೆಯುತ್ತಿದೆ. ಈ ಅಭಿಯಾನವನ್ನು ಶೀಘ್ರದಲ್ಲೇ ಸಿನಿಮಾ ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ
ಪ್ರಚಾರ್ ಕಮ್ಯುನಿಕೇಷನ್ಸ್ ನಿರ್ದೇಶಕ ರಕ್ಷಿತ್ ಜೈನ್ ಈ ಕುರಿತು ಮಾತನಾಡಿ, ‘ಕೇವಲ ಮೂರು ದಿನಗಳಲ್ಲಿ ಇಂತಹ ಅಭಿಯಾನವನ್ನು ಕಲ್ಪಿಸಿ, ಅದನ್ನು ಜಾರಿಗೊಳಿಸಲಾಗಿದೆ. ಈ ಕಲ್ಪನೆಯ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದಕ್ಕೆ ನಮಗೆ ಸಂತೋಷವಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ದಂಪತಿಗಳು ಒಳ್ಳೆಯ ರೀತಿಯಲ್ಲಿ ಹೇಳಿದರು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ನಿಮ್ಮನ್ನು ಸ್ವತಂತ್ರಗೊಳಿಸುವ ಪ್ರೀತಿಯನ್ನು ಪ್ರೀತಿಸಿ’; ರಶ್ಮಿಕಾ ಭಾವುಕ ಪೋಸ್ಟ್
‘ಮಾನ್ಯವರ್ ಮೋಹೆ ಅವರ ಮದುವೆ ಉಡುಗೆ ಬಗ್ಗೆ ರಶ್ಮಿಕಾ ಹಾಗೂ ವಿಜಯ್ ಸಂತಸ ಹೊರಹಾಕಿದ್ದಾರೆ. ಮಾನ್ಯವರ್ ಮೋಹೆ ಭಾವನೆಗಳು ಮತ್ತು ಕಥೆ ಹೇಳುವ ಮೂಲಕ ಮದುವೆಗಳನ್ನು ಆಚರಿಸುವ ಸುಂದರವಾದ ವಿಧಾನ’ ಅಲ್ಲಿ ರಶ್ಮಿಕಾ ಹಾಗೂ ವಿಜಯ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.