ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಅವರು ವಿಜಯ್ ದೇವರಕೊಂಡ ಜೊತೆ ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಈ ವಿಷಯದಲ್ಲಿ ಈ ಜೋಡಿ ಗುಟ್ಟು ಕಾಯ್ದುಕೊಳ್ಳುತ್ತಾ ಬರುತ್ತಿದೆ. ಈಗ ರಶ್ಮಿಕಾ ಮಂದಣ್ಣ ಅವರು ವಿವಾಹ ಆಗೋ ಹೋಟೆಲ್ ನ ಸಿದ್ಧತೆಯ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನೆರವೇರಲಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತುಂಬಾನೇ ಖಾಸಗಿಯಾಗಿ ಈ ವಿವಾಹ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರ ಪರಿಚಯ ಆಗಿ ಹಲವು ವರ್ಷಗಳು ಕಳೆದಿವೆ. ‘ಗೀತ ಗೋವಿಂದಂ’ ಸಿನಿಮಾ ಟೈಮ್ ಅಲ್ಲಿ ಸೆಟ್ ಅಲ್ಲಿ ಇವರ ಪರಿಚಯ ಆಯಿತು. ಆ ಬಳಿಕ ಇಬ್ಬರ ಮಧ್ಯೆ ಸಾಕಷ್ಟು ಒಳ್ಳೆಯ ಬಾಮ್ ಬೆಳೆಯಿತು. ಪರಿಚಯ ಪ್ರೀತಿಗೆ ತಿರುಗಿದೆ. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ವಿಜಯ್ ನಿವಾಸದಲ್ಲಿ ಗುಟ್ಟಾಗಿಯೇ ನಿಶ್ಚಿತಾರ್ಥ ನಡೆದಿತ್ತು. ವಿವಾಹ ಕೂಡ ಸಾಕಷ್ಟು ರಹಸ್ಯವಾಗಿ ನಡೆಯುತ್ತಿದೆ.
ಉದಯಪುರದ ಸಿಟಿ ಪ್ಯಾಲೇಸ್ ಹೋಟೆಲ್ ಅಲ್ಲಿ ಮದುವೆ ನಡೆಯುತ್ತಿದೆ ಎಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವವರು ಹೇಳುವ ಮಾಹಿತಿ ಪ್ರಕಾರ ಫೆಬ್ರವರಿ 2 ರಂದೇ ಈ ಮದುವೆಯ ಪ್ರಕಾರ. ಫೆಬ್ರವರಿ 26 ರಂದು ಅವರ ಮದುವೆ ಎಂದು ಹೇಳಲಾಗಿದೆ. ಆದರೆ, ಈಗ ದಿನಾಂಕ ಬದಲಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ಮದುವೆ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿರಲಿ ಎಂದು ಕೆಲವೊಮ್ಮೆ ಸೆಲಬ್ರಿಟಿಗಳು ತಪ್ಪು ದಿನಾಂಕದಂದು ಸುದ್ದಿಯಾಗುವಂತೆ ನೋಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದೆ ತಂತ್ರ ಉಪಯೋಗಿಸಬಹುದೆಂಬುದು ಅನೇಕರ ವಾದ.
ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
ರಶ್ಮಿಕಾ ಮಂದಣ್ಣ ಅವರು ಇಂದು ಮದುವೆ ಆದರೆ, ಸಂಜೆ ವೇಳೆ ಅವರ ವಿವಾಹದ ಫೋಟೋಗಳನ್ನು ಅಪ್ಲೋಡ್ ಮಾಡಬಹುದು. ಮದುವೆ ವಿಷಯದಲ್ಲಿ ರಶ್ಮಿಕಾ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆ ಕನಸು ಈಗ ನಡೆಯುತ್ತಿದೆ. ವಿವಾಹ ಸಾಕಷ್ಟು ಖಾಸಗಿಯಾಗಿ ನಡೆಯುತ್ತಿದೆ, ಫೋಟೋಗಳು ವೈರಲ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.