
ನಟಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅವರೊಟ್ಟಿಗೆ ಪ್ರೀತಿಯಲ್ಲಿರುವುದು ಗುಟ್ಟೇನೂ ಅಲ್ಲ. ಈ ಇಬ್ಬರೂ ಸಹ ಕೆಲ ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ ತಿಂಗಳಿನಲ್ಲಿ ವಿವಾಹ ಸಹ ಆಗಲಿದ್ದಾರೆ, ಇಬ್ಬರ ವಿವಾಹ ಜೈಪುರದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ.

ಮದುವೆಗೆ ಮುನ್ನ ಬ್ಯಾಚುಲರ್ ಪಾರ್ಟಿ ಮಾಡಿದ್ದು ಇತ್ತೀಚೆಗೆ ಮಾಮೂಲು. ಅದರಂತೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಗೆಳತಿಯರನ್ನು ಕರೆದುಕೊಂಡು ಶ್ರೀಲಂಕಾಗೆ ಪಾರ್ಟಿ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಆತ್ಮೀಯರಾದ ಕೆಲವು ಗೆಳತಿಯರೊಟ್ಟಿಗೆ ಶ್ರೀಲಂಕಾದಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಭಾರಿ ಅದ್ಧೂರಿಯಾಗಿಯೇ ಈ ಪಾರ್ಟಿ ಮಾಡಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ಗೆಳತಿಯರು.

ಶ್ರೀಲಂಕಾದ ಬೀಚುಗಳಲ್ಲಿ ಸುತ್ತಾಡಿದ್ದಾರೆ. ಐಶಾರಾಮಿ ರೆಸಾರ್ಟ್‌ಗಳಲ್ಲಿ ಉಳಿದುಕೊಂಡು ಪಾರ್ಟಿ ಮಾಡಿದ್ದಾರೆ. ಸಾಕಷ್ಟು ಟ್ರಾವೆಲ್ ಮಾಡಿದ್ದಾರೆ. ಒಟ್ಟಾರೆ ಗೆಳತಿಯರೊಟ್ಟಿಗೆ ಮಜಾ ಮಾಡಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗಿದ್ದಾರೆ, ಈ ಬಗ್ಗೆ ರಶ್ಮಿಕಾ ಸಹ ಪರೋಕ್ಷವಾಗಿ ಮಾತನಾಡುತ್ತಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಶೂಟಿಂಗ್ ಮುಗಿದ ಕೂಡಲೇ ಮದುವೆ ಕಾರ್ಯಕ್ರಮದ ಕಡೆಗೆ ಗಮನ ಹರಿಸಲಿದ್ದಾರೆ.
ರಂದು ಪ್ರಕಟಿಸಲಾಗಿದೆ – 10:56 am, ಬುಧವಾರ, 17 ಡಿಸೆಂಬರ್ 25