ದೀಪಿಕಾ ಪಡುಕೋಣೆ ಅವರು ಸಿನಿಮಾ ರಂಗದಲ್ಲಿ ಕೇವಲ 8 ಗಂಟೆ ಕೆಲಸ ಮಾಡೋದಾಗಿ ಹೇಳಿದ್ದಾರೆ. ಈ ಶರತ್ತಿಗೆ ಒಪ್ಪಿದರೆ ಮಾತ್ರ ಅವರು ಸಿನಿಮಾ ಮಾಡಲು ಒಪ್ಪುತ್ತಾರೆ. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಕೆಲವು ದೀಪಿಕಾ ಅವರನ್ನು ಟೀಕಿಸಿದರು. ಹೀಗಿರುವಾಗಲೇ ರಶ್ಮಿಕಾ ಮಂದಣ್ಣ ಅವರು 8 ಗಂಟೆಗಳ ಕೆಲಸದ ನಿಯಮ ಚಿತ್ರರಂಗಕ್ಕೆ ಬರಬೇಕು ಎಂದು ಪ್ರತಿಪಾದಿಸಿದ್ದಾರೆ.
ವಾರದಲ್ಲಿ ಐದು ದಿನ ಒಂಭತ್ತು ಗಂಟೆ ಕೆಲಸ ಮಾಡೋ ನಿಯಮ ಕಾರ್ಪೋರೇಟ್ ಇದೆ. ಇದರಿಂದ ಸಾಕಷ್ಟು ಸಮಯ ಸಿಗುತ್ತದೆ. ಕುಟುಂಬಕ್ಕೆ ಒಂದಷ್ಟು ಸಮಯ ನೀಡಬಹುದು. ಆದರೆ, ಚಿತ್ರರಂಗದಲ್ಲಿ ಈ ನಿಯಮ ಸಹಾಯಕ್ಕೆ ಬರೋದಿಲ್ಲ. ಕೆಲವೊಮ್ಮೆ ಬೆಳಿಗ್ಗೆ ಆರಂಭವಾದ ಶೂಟ್ ಮಧ್ಯರಾತ್ರಿವರೆಗೂ ಸಾಗುತ್ತದೆ. ಅಲ್ಲಿ ಕೆಲಸದ ಶೈಲಿಯೇ ಹಾಗೆ. ಇದಕ್ಕೆ ಒಗ್ಗಿಕೊಳ್ಳಲೇಬೇಕು. ಈಗ ರಶ್ಮಿಕಾ ಅವರು ದೀಪಿಕಾನ ಬೆಂಬಲಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ
ರಶ್ಮಿಕಾ ಮಾತು
#ರಶ್ಮಿಕಾ 8-ಗಂಟೆಗಳ ಕೆಲಸದ ಶಿಫ್ಟ್ನಲ್ಲಿ:
“ಕಚೇರಿಯಲ್ಲಿ ನಾವು 9 ರಿಂದ 6 ರವರೆಗೆ ಹೇಗೆ ಕೆಲಸ ಮಾಡುತ್ತೇವೆಯೋ ಹಾಗೆಯೇ, ಆ ವೇಳಾಪಟ್ಟಿಯನ್ನು ಹೊಂದೋಣ.
ನಾನು ಕುಟುಂಬದ ಸಮಯದ ಮೇಲೆ ಕೇಂದ್ರೀಕರಿಸಬೇಕು, ಸಾಕಷ್ಟು ನಿದ್ದೆ ಮಾಡಿ ಮತ್ತು ಕೆಲಸ ಮಾಡಲು ಸಮಯ ಮಾಡಿಕೊಳ್ಳಬೇಕು, ನಂತರ ನಾನು ಆರೋಗ್ಯವಾಗಿರಲು ವಿಷಾದಿಸುವುದಿಲ್ಲ.
ಪೂರ್ಣ ಸಂದರ್ಶನ: https://t.co/aLJ3X1zP6e pic.twitter.com/ptNqPm5PRY
— ಗುಲ್ಟೆ (@GulteOfficial) ಅಕ್ಟೋಬರ್ 28, 2025
‘ನಾವು ಅತಿಯಾಗಿ ಕೆಲಸ ಮಾಡುತ್ತಾರೆ ಎಂಬ ಅಂಶವನ್ನು ವೈಭವೀಕರಿಸುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ನಾನು ಅತಿಯಾಗಿ ಕೆಲಸ ಮಾಡುತ್ತೇನೆ. ಅದನ್ನು ಮಾಡಬೇಡಿ. ಅದು ಸೂಕ್ತವಲ್ಲ. ನಿಮಗೆ ಅನುಕೂಲಕರವಾದರೆ ಮಾತ್ರ ಮಾಡಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿ. ದಿನದ 8-9 ಗಂಟೆಯನ್ನು ನಿಮಗಾಗಿ ಪಡೆಯಿರಿ. ಮುಂದಿನ ವರ್ಷಗಳಲ್ಲಿ ಅದು ಸಹಾಯ ಮಾಡಲಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ನಟಿಸಿದ್ದ ಸಿನಿಮಾದ ಸೀಕ್ವೆಲ್ ನಲ್ಲಿ ರಶ್ಮಿಕಾ, ಶೂಟಿಂಗ್ ಶುರು
‘ಕೆಲಸದ ಸಮಯದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಸಾಕಷ್ಟು ಕೆಲಸ ಮಾಡುತ್ತೇನೆ. ನನಗಾಗಿ ನಾನು ಮಾಡುತ್ತೇನೆ. ಕಲಾವಿದರು, ನಿರ್ದೇಶಕರು, ಲೈಟ್ಮೆನ್, ಮ್ಯೂಸಿಕ್ ಹೀಗೆ ಎಲ್ಲರೂ ಸಾಕಷ್ಟು ಕೆಲಸ ಮಾಡುತ್ತಾರೆ. ನಮಗೂ ಕೆಲಸ ಬರಬೇಕು. ಐದು ದಿನ ಒಂಭತ್ತು ಗಂಟೆ ಕೆಲಸ ಮಾಡುವಂತೆ ಆಗಬೇಕು. ನಮಗೂ ಕುಟುಂಬ ಇದೆ. ಅದರ ಮೇಲೆ ಫೋಕಸ್ ಮಾಡಬೇಕು. ವರ್ಕೌಟ್ ಮಾಡಬೇಕು, ನಿದ್ರಿಸಬೇಕು. ನಂತರ ನಾನು ಆಗ ಇದನ್ನೆಲ್ಲ ಮಾಡಿಲ್ಲ ಎಂದು ಮುಂದೆ ಬೇಸರ ಮಾಡಿಕೊಳ್ಳಬಾರದು’ ರಶ್ಮಿಕಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 3:20 pm, ಶುಕ್ರ, 31 ಅಕ್ಟೋಬರ್ 25