ವಿರೋಶ್ ಮದುವೆ: ವಿರಾಟ್‌ ಕೊಹ್ಲಿ ಅಪರೂಪದ ದಾಖಲೆ ಮುರಿದ ರಶ್ಮಿಕಾ ಮಂದಣ್ಣ! ನಟಿ ಈಗ ಏಷ್ಯಾದ…?

ವಿರೋಶ್ ಮದುವೆ: ವಿರಾಟ್‌ ಕೊಹ್ಲಿ ಅಪರೂಪದ ದಾಖಲೆ ಮುರಿದ ರಶ್ಮಿಕಾ ಮಂದಣ್ಣ! ನಟಿ ಈಗ ಏಷ್ಯಾದ…?

ವಿರೋಶ್ ಮದುವೆ: ವಿರಾಟ್‌ ಕೊಹ್ಲಿ ಅಪರೂಪದ ದಾಖಲೆ ಮುರಿದ ರಶ್ಮಿಕಾ ಮಂದಣ್ಣ! ನಟಿ ಈಗ ಏಷ್ಯಾದ…?

ಬೆಂಗಳೂರು: ಸೆಲಿಬ್ರಿಟಿ ಜೋಡಿಯಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಇದೀಗ ಹೊಸದೊಂದು ಮೈಲಿಗಲ್ಲು ನೆಟ್ಟಿದೆ. ವಿರಾಟ್ ಕೊಹ್ಲಿಯ ಹೆಸರಲ್ಲಿದ್ದ ದಾಖಲೆಯೊಂದನ್ನು ರಶ್ಮಿಕಾ ಮಂದಣ್ಣ ಮುರಿದಿದ್ದಾರೆ. ಏನದು ದಾಖಲೆ? ನೋಡೋಣ ಬನ್ನಿ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಹಲವು ಗಾಸಿಪ್‌ಗಳಿಗೆ ಈ ಜೋಡಿ ಪೂರ್ಣ ವಿರಾಮ ಹಾಕಿದೆ.

ಇನ್ನು ಈ ವಿರೋಶ್ ಜೋಡಿಯ ಮದುವೆಯೂ ಡಿಜಿಟಲ್ ಫ್ಲಾಟ್‌ಫಾರಂನಲ್ಲಿ ಹೊಸದೊಂದು ಮೈಲಿಗಲ್ಲನ್ನೇ ಸೃಷ್ಟಿಸಿದ್ದು, ಇಲ್ಲಿಯವರೆಗೆ ರಶ್ಮಿಕಾ-ವಿಜಯ್ ಅವರ ಮದುವೆಯ ಫೋಟೋಕ್ಕೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ 23 ಮಿಲಿಯನ್ ಲೈಕ್ಸ್ ಬಂದಿದೆ.

ರಶ್ಮಿಕಾ ಮಂದಣ್ಣ ತಮ್ಮ ಇನಿಯ ಮದುವೆಯ ಸುಂದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಫೆಬ್ರವರಿ 28ರ ಬೆಳಗ್ಗೆ 9 ಗಂಟೆಯ ಸುಮಾರಿಗೆ 23 ಮಿಲಿಯನ್ ಲೈಕ್ಸ್ ಬಂದಿದೆ. ಈ ಮೂಲಕ ಏಷ್ಯಾದಲ್ಲೇ ಫೋಟೋವೊಂದಕ್ಕೆ ಅತಿಹೆಚ್ಚು ಲೈಕ್ ಪಡೆದ ಸೆಲಿಬ್ರಿಟಿ ಎನ್ನುವ ಹಿರಿಮೆಗೆ ರಶ್ಮಿಕಾ ಮಂದಣ್ಣ ಪಾತ್ರರಾಗಿದ್ದಾರೆ.

ಇನ್ನು ಇದಕ್ಕೂ ಮೊದಲು 2024ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ವಿರಾಟ್ ಕೊಹ್ಲಿ ಟ್ರೋಫಿಗೆ ಮುತ್ತಿಕ್ಕುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ 22.8 ಮಿಲಿಯನ್ ಮಂದಿ ಲೈಕ್ ಮಾಡಿದ್ದರು. ಇದು ಏಷ್ಯಾದಲ್ಲೇ ಕಳೆದೆರಡು ವರ್ಷಗಳಲ್ಲಿ ಅತಿಹೆಚ್ಚು ಲೈಕ್ ಪಡೆದ ಸಾರ್ವಜನಿಕ ಪೋಸ್ಟ್ ಎನಿಸಿಕೊಂಡಿತ್ತು.

ಇದೀಗ ಭಾರತದ ಕ್ರಶ್ ಎಂದೇ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಬ್ರೇಕ್ ಮಾಡುವ ಮೂಲಕ ಏಷ್ಯಾದ ಕ್ವೀನ್ ಆಫ್ ಇನ್‌ಸ್ಟಾಗ್ರಾಮ್ ಎನಿಸಿಕೊಂಡಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಅವರ ಕೈ ಹಿಡಿದ ವಿಜಯ್ ದೇವರಕೊಂಡ ಅವರು ಹಂಚಿಕೊಂಡಿರುವ ಮದುವೆ ಫೋಟೋಗೆ 18 ಮಿಲಿಯನ್‌ಗೂ ಅಧಿಕ ಮಂದಿ ಲೈಕ್ ಒತ್ತಿದ್ದಾರೆ.

Source link

Leave a Reply

Your email address will not be published. Required fields are marked *