Headlines

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು

ಹೇಳಿದ್ದೇ ಒಂದು, ಅಲ್ಲಿ ಮಾಡಿದ ಕಥೆಯೇ ಇನ್ನೊಂದು; ಫ್ಲಾಪ್ ಚಿತ್ರದ ಬಗ್ಗೆ ರಶ್ಮಿಕಾ ಮಾತು


ಯಾವುದೇ ಸಿನಿಮಾ ಹಿಟ್ ಆದರೆ ಅದರ ಹುಳುಕುಗಳು ಏನಿವೆ ಎಂಬುದು ಚರ್ಚೆಗೆ ಬರೋದೇ ಇಲ್ಲ. ಎಲ್ಲಾ ಕಲಾವಿದರು ಪ್ರೀತಿಯಿಂದ ಮಾತನಾಡುತ್ತಾರೆ. ಒಬ್ಬರನ್ನೊಬ್ಬರು ಹೊಗಳುತ್ತಾರೆ. ನಿರ್ದೇಶಕರ ಶ್ರಮವನ್ನು ಮೆಚ್ಚುತ್ತಾರೆ. ಅದೇ ಸಿನಿಮಾ ಫ್ಲಾಪ್ ಆಯಿತು, ಆಗ ಶುರುವಾಗುತ್ತೆ ನೋಡಿ ಕಿತ್ತಾಟ. ‘ಸಿಕಂದರ್’ ಸಿನಿಮಾ ಹೀಗೇ ಆಯಿತು. ಸಲ್ಮಾನ್ ಸೆಟ್ ಗೆ ತಡವಾಗಿ ಬರುತ್ತಾರೆ ಎಂದು ನಿರ್ದೇಶಕ ಎಆರ್ ಮುರುಗದಾಸ್ ಆರೋಪಿಸಿದ್ದರು. ಇದಕ್ಕೆ ಸಲ್ಲು ಕೌಂಟರ್ ಕೂಡ ಕೊಟ್ಟಿದ್ದರು. ಈಗ ಈ ಫ್ಲಾಪ್ ಚಿತ್ರದ ಮತ್ತೊಂದು ಹುಳುಕನ್ನು ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಬಿಚ್ಚಿಟ್ಟಿದ್ದಾರೆ.

‘ಎಆರ್ ಮುರುಗದಾಸ್ ಅವರು ಸ್ಕ್ರಿಪ್ಟ್ ಹೇಳುವಾಗ ಆ ಕಥೆ ಬೇರೆ ರೀತಿಯೇ ಇತ್ತು. ಅದು ಸಿನಿಮಾ ಆದ ಕಥೆ ಸಂಪೂರ್ಣವಾಗಿ ಬದಲಾಯಿತು. ಸಿನಿಮಾಗಳಲ್ಲಿ ಅದು ಸಾಮಾನ್ಯ. ಸಿನಿಮಾ ಸಾಗಿದಂತೆ ಕಥೆ ಬದಲಾಗುತ್ತದೆ. ಸಿಕಂದರ್ ಚಿತ್ರವೂ ಹಾಗೆಯೇ ಆಯಿತು’ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಮಧ್ಯೆ ಯಾವುದೇ ಕೆಮಿಸ್ಟ್ರಿ ಇರಲಿಲ್ಲ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಕಥೆ ಚೆನ್ನಾಗಿದ್ದರೂ ಇವರ ಪರ್ಮೆನ್ಸ್ ಕಾರಣದಿಂದ ಸಿನಿಮಾ ಹಿಟ್ ಆಗುತ್ತಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆ ಮೊದಲಿಗಿಂತ ಸಾಕಷ್ಟು ಏಳ್ಗೆ ಕಂಡಿದೆ. ಆದರೆ, ಮರಸುವ ಪಾತ್ರಗಳು ಮಾತ್ರ ಅವರಿಗೆ ಹೊಂದಿಕೆಯಾಗುತ್ತವೆ ಎಂಬ ಅಭಿಪ್ರಾಯವೂ ಇದೆ. ‘ಸಿಕಂದರ್’ ಸಿನಿಮಾದ ಬಜೆಟ್ ದೊಡ್ಡ ಮಟ್ಟದಲ್ಲಿದೆ. ಆದರೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಿರ್ಮಾಪಕರಿಗೆ ನಷ್ಟವಾಗಬಹುದು.

ಇದನ್ನೂ ಓದಿ: ಮದುವೆಗೂ ಮುನ್ನ ವಿದೇಶದಲ್ಲಿ ಕಾಲ ಕಳೆದು ಬಂದ ರಶ್ಮಿಕಾ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಸದ್ಯದ ಮದುವೆ ಬಗ್ಗೆ ಸುದ್ದಿಯಲ್ಲಿದ್ದಾರೆ.ವಿಜಯ್ ದೇವರಕೊಂಡ ಜೊತೆ ಅವರ ಮದುವೆ ನಡೆಯುತ್ತಿದೆ. ಫೆಬ್ರವರಿ 26 ರಂದು ರಶ್ಮಿಕಾ ಅವರು ರಾಜಸ್ಥಾನದಲ್ಲಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯವನ್ನು ಅವರಿನ್ನೂ ಖಚಿತಪಡಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *