ಮುಂದಿನ ತಿಂಗಳು ಮದ್ವೆ ನಿಜನಾ: ಫ್ಯಾನ್ಸ್​ ಕೇಳಿದ ಪ್ರಶ್ನೆಗೆ Rashmika Mandanna ಏನ್​ ಹೇಳಿದ್ರು ನೋಡಿ

ಮುಂದಿನ ತಿಂಗಳು ಮದ್ವೆ ನಿಜನಾ:  ಫ್ಯಾನ್ಸ್​ ಕೇಳಿದ ಪ್ರಶ್ನೆಗೆ Rashmika Mandanna  ಏನ್​ ಹೇಳಿದ್ರು ನೋಡಿ

ಮುಂದಿನ ತಿಂಗಳು ಮದ್ವೆ ನಿಜನಾ:  ಫ್ಯಾನ್ಸ್​ ಕೇಳಿದ ಪ್ರಶ್ನೆಗೆ Rashmika Mandanna  ಏನ್​ ಹೇಳಿದ್ರು ನೋಡಿ

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಪಾಪರಾಜಿಗಳು ಮದುವೆಯ ಬಗ್ಗೆ ಪ್ರಶ್ನಿಸಿದಾಗ, ರಶ್ಮಿಕಾ ಜಾಣ್ಮೆಯಿಂದ ಉತ್ತರಿಸದೆ ನುಣುಚಿಕೊಂಡಿದ್ದಾರೆ. ಈ ನಡುವೆ, ಅವರ ಎಐ ಮದುವೆ ಫೋಟೋಗಳು  ಸಹ ವೈರಲ್ ಆಗುತ್ತಿವೆ.

ನ್ಯಾಷನಲ್​ ಕ್ರಷ್​, ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇನ್ನು ಕೆಲವೇ ದಿನಗಳಲ್ಲಿ ನಟ ವಿಜಯ ದೇವರಕೊಂಡ ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದು ಭಾರಿ ಸದ್ದು ಮಾಡುತ್ತಿದೆ. ಬರುವ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಇವರ ಮದುವೆ ಎಂದು ಹೇಳಲಾಗುತ್ತಿದೆ. (Vijay Deverakonda-Rashmika Mandanna marriage).

ಇದಾಗಲೇ ಹಲವು ಸೆಲೆಬ್ರಿಟಿಗಳು ಇಲ್ಲಿಯೇ ಮದುವೆ ಮಾಡಿಕೊಂಡಿದ್ದಾರೆ. ರಾಜಸ್ಥಾನವು ಮ್ಯಾರೇಜ್​ ಡೆಸ್ಟಿನೇಷನ್​ ಆಗಿದೆ. ಅಷ್ಟಕ್ಕೂ ರಶ್ಮಿಕಾ ಅವರು, ಈಚೆಗೆ ತಮ್ಮ ಮದುವೆಗೆ ಬೆಂಗಳೂರಿನ ಹೂ ಬೇಕು ಎಂದು ಹೇಳಿದ್ದರು ಎನ್ನುವ ಸುದ್ದಿ ಕೂಡ ಸದ್ದು ಮಾಡಿತ್ತು. ಕರ್ನಾಟಕದ ಬಗ್ಗೆ ದನಿ ಎತ್ತದ ಈ ನಟಿಗೆ ಕರುನಾಡಿನದ್ದೇ ಹೂವು ಬೇಕು ಎನ್ನುವ ಬಗ್ಗೆ ಸಾಕಷ್ಟು ಮಂದಿ ಟೀಕೆ ಕೂಡ ಮಾಡುತ್ತಿದ್ದಾರೆ. ಮದುವೆ ನಡೆಯೋದು ರಾಜಸ್ತಾನ ಪ್ಯಾಲೇಸ್​ನಲ್ಲಿ. ಮದುವೆಯ ಅಲಂಕಾರಕ್ಕೆ ಬೆಂಗಳೂರಿನಿಂದ ಹೂಗಳು ಹೋಗಲಿವೆ ಎನ್ನುವುದು ತಿಳಿದುಬಂದಿತ್ತು. ಮದುವೆ ಮನೆಯಲ್ಲಿ ಬೆಂಗಳೂರಿನ ಹೂಗಳು ನಳನಳಿಸಲಿವೆ ಎಂದು ವರದಿಯಾಗಿತ್ತು.

ಆದರೆ ಮದುವೆಯ ಬಗ್ಗೆ ಇನ್ನು ಕೂಡ ರಶ್ಮಿಕಾ ಮಂದಣ್ಣ ಎಲ್ಲಿಯೂ ಸಾರ್ವಜನಿಕವಾಗಿ ಬಾಯಿ ಬಿಡುತ್ತಿಲ್ಲ. ಇದೀಗ ಅವರು ಹೋಗುವಾಗ ಪಾಪರಾಜಿಗಳು ಮುಂದಿನ ತಿಂಗಳು ನಮ್ಮನ್ನು ಕರೆಯೋದಿಲ್ವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟಿ ಮುಂದಿನ ತಿಂಗಳು ಏನಿದೆ ಎಂದು ಪ್ರಶ್ನಿಸಿದ್ದಾರೆ. ಆಗ ಒಬ್ಬರು ಮದುವೆ ಎಂದು ಹೇಳಿದ್ದಾರೆ.

ಅದನ್ನು ಕೇಳಿಸಿಕೊಳ್ಳದವರ ಹಾಗೆ ನಟಿಸಿದ ರಶ್ಮಿಕಾ ಮಂದಣ್ಣ, ಒಹೊ ಸಿನಿಮಾನಾ? ಸದ್ಯ ಮುಂದಿನ ತಿಂಗಳು ಯಾವುದೇ ಸಿನಿಮಾ ರಿಲೀಸ್​ ಇಲ್ಲ. ಇದ್ದರೆ ಹೇಳುತ್ತೇನೆ ಎಂದು ಅಲ್ಲಿಂದು ನುಣುಚಿಕೊಂಡಿದ್ದಾರೆ. ಮತ್ತೊಂದು ಪ್ರಶ್ನೆ ಕೇಳಲು ಬಿಟ್ಟಿಲ್ಲ. ಈ ಮೂಲಕ ಇದುವರೆಗೂ ನಟಿ ಮದುವೆ ಬಗ್ಗೆ ಬಾಯಿ ಬಿಡದೇ ಜಾಣ್ಮೆಯಿಂದ ನುಣುಚಿಕೊಳ್ತಿದ್ದಾರೆ.

ಮೊನ್ನೆಯಷ್ಟೇ ಇವರ ಮದುವೆ ಫೋಟೋ ವೈರಲ್​ ಆಗಿದ್ದವು. ಹೇಳಿ ಕೇಳಿ ಇರುವ ಕೃತಕ ಬುದ್ಧಿಮತ್ತೆ (AI) ಯುಗ. ಮದುವೆಯಾಕೆ, ಎಐ ಮೂಲಕವೇ ಮಕ್ಕಳನ್ನೂ ಮಾಡಿಬಿಡ್ತಾರೆ. ಒಟ್ಟಿನಲ್ಲಿ ಲೈಕ್ಸ್​, ಶೇರ್​ ಎಲ್ಲಾ ಬೇಕು ಕಂಟೆಂಟ್​ ಕ್ರಿಯೇಟರ್ಸ್​ಗೆ. ಇದೇ ಕಾರಣಕ್ಕೆ, ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಯ ಎಐ ಫೋಟೋ ಕ್ರಿಯೇಟ್​ ಮಾಡಿ ಶೇರ್​ ಮಾಡಲಾಗಿತ್ತು.. ಇದರಲ್ಲಿ ಸಿನಿಮಾ ಚಿತ್ರರಂಗದ ಕೆಲವು ದಿಗ್ಗಜರು ಕೂಡ ಪಾಲ್ಗೊಂಡಿರುವಂತೆ ಚಿತ್ರಿಸಲಾಗಿದೆ!

ಅಷ್ಟಕ್ಕೂ, 30 ವರ್ಷದ ಈ ಚೆಲುವೆ ಡೇಟಿಂಗ್​, ಮದ್ವೆ ವಿಷಯದಲ್ಲಿಯೂ ಸದಾ ಸುದ್ದಿಯಲ್ಲಿರುತ್ತಾರೆ. ಫೆಬ್ರುವರಿಯಲ್ಲಿ ವಿಜಯ ದೇವರಕೊಂಡ ಅವರ ಜೊತೆ ಮದುವೆ ಎನ್ನುವ ಸುದ್ದಿ ಸದ್ದು ಮಾಡ್ತಿದ್ದಂತೆಯೇ, ಕನ್ನಡದ ನಟಿ ರಕ್ಷಿತ್​ ಶೆಟ್ಟಿಜೊತೆ ರಶ್ಮಿಕಾ ಮಂದಣ್ಣ ಎಂಗೇಜ್​ಮೆಂಟ್​ ಆಗಿರುವ ಫೋಟೋಗಳು ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹುತೇಕರಿಗೆ ತಿಳಿದಿರುವಂತೆ ಇವರಿಬ್ಬರೂ ಮದುವೆಯಾಗುವ ಸಿದ್ಧತೆ ನಡೆಸಿದ್ದರು. ಆದರೆ ಅದು ಮುರಿದು ಬಿದ್ದಿತ್ತು.

ಈಗಲೂ ಇಬ್ಬರೂ ಸಿಂಗಲ್​ ಆಗಿದ್ದಾರೆ.’ಕಿರಿಟ್ ಪಾರ್ಟಿ’ ಸಿನಿಮಾ ವೇಳೆ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ರಶ್ಮಿಕಾ ಮಂದಣ್ಣ ಎಂಗೇಜ್ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸಂಬಂಧ ಅಲ್ಲಿಗೇ ಮುಗಿಯಿತು. ಅವರಿವರ ಜೊತೆ ಆಗಾಗ್ಗೆ ಹೆಸರು ಕೇಳಿಬರುತ್ತಿದ್ದರೂ ಈ ವಿಷಯದಲ್ಲಿ ರಶ್ಮಿಕಾ ಹೆಸರು ಹೆಚ್ಚಾಗಿ ಥಳಕು ಹಾಕಿಕೊಂಡಿದ್ದು ವಿಜಯ್ ದೇವರಕೊಂಡ ಜೊತೆ. ಇದಾದ ಬಳಿಕ ಇವರ ಮದುವೆಯ ಕುರಿತು ಹೋದಲ್ಲೆಲ್ಲಾ ಪ್ರಶ್ನೆಗಳು ಎದುರಾಗುತ್ತಿರುತ್ತವೆ.

Source link

Leave a Reply

Your email address will not be published. Required fields are marked *