'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?

'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?

'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?

"ನನ್ನ ಬಗ್ಗೆ ಬರೆದಿರುವ ಇಷ್ಟು ಸುಂದರವಾದ ಬರಹವನ್ನು ಓದಿ ನಾನು ತುಂಬಾ ಭಾವುಕಳಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಕಾಡುವ ಬರಹವನ್ನು ನಾನು ಓದಿರಲಿಲ್ಲ. ನನಗೆ ಹೇಳಲು ತುಂಬಾ ವಿಷಯಗಳಿವೆ, ಆದರೆ ಪದಗಳು ಸಾಲುತ್ತಿಲ್ಲ." ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಸ್ಯಾಂಡಲ್‌ವುಡ್‌ನಿಂದ ಸಿನಿಮಾ ಮೂಲಕ ನಟಿಯಾಗಿ ಆ ಬಳಿಕ ಬಾಲಿವುಡ್‌ ಸಿನಿಮಾಗಳಲ್ಲೂ ಅಭಿನಯಿಸಿ ‘ನ್ಯಾಷನಲ್ ಕ್ರಶ್’ ಪಟ್ಟ ಪಡೆದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಟಾಲಿವುಡ್‌ನ ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ (Vijay Deverakonda) ನಡುವಿನ ಕೆಮಿಸ್ಟ್ರಿ ಬಗ್ಗೆ ಜಗತ್ತಿಗೇ ಗೊತ್ತು. ತೆರೆಯ ಮೇಲೆ ‘ಗೀತಾ ಗೋವಿಂದಂ’ ಆಗಿ ಮಿಂಚಿದ ಈ ಜೋಡಿ, ತೆರೆಯ ಹಿಂದೆ ಕೂಡ ಸಖತ್ ಆಪ್ತವಾಗಿದ್ದಾರೆ ಎಂಬ ಮಾತುಗಳು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇವೆ. ಆದರೆ, ಇದೇ ಮೊದಲ ಬಾರಿಗೆ ತಮ್ಮ ಮತ್ತು ವಿಜಯ್ ನಡುವಿನ ಆ ಸುಂದರ ಬಂಧದ ಬಗ್ಗೆ ರಶ್ಮಿಕಾ ಮಂದಣ್ಣ ಅತ್ಯಂತ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ!

ಅಷ್ಟಕ್ಕೂ ನಡೆದಿದ್ದೇನು?

ಎಲ್ಲದಕ್ಕೂ ಕಾರಣವಾಗಿದ್ದು ‘ದಾಮಿನಿ’ ಎಂಬುವವರು ‘ಟೇಲ್ಸ್ ವಿತ್ ತಾರಾ’ (Tales with Tara) ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಒಂದು ಮನಮಿಡಿಯುವ ಬರಹಕ್ಕೆ ಸಂಬಂಧಿಸಿ ಬರೆದ ಬರಹ. ಈ ಬರಹದಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ನಿಗೂಢ ಹಾಗೂ ಸುಂದರವಾದ ಸಂಬಂಧವನ್ನು ಅತ್ಯಂತ ಕಾವ್ಯಾತ್ಮಕವಾಗಿ ವಿವರಿಸಲಾಗಿತ್ತು.

ಲೇಖಕಿ ತಾರಾ ಅವರು ರಶ್ಮಿಕಾ ಅವರ ಭಾವನೆಗಳನ್ನು ಹೀಗೆ ಬಣ್ಣಿಸಿದ್ದರು: "ವರ್ಷಗಳಿಂದ ನಾನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವಿನ ಆ ಮರ್ಮದ ಬಂಧವನ್ನು ಗಮನಿಸುತ್ತಿದ್ದೇನೆ. ನಾನು ಅದನ್ನು ದೂರದಿಂದಲೇ ನೋಡಿ ಆನಂದಿಸುತ್ತಿದ್ದೆ. ರಶ್ಮಿಕಾ ಅವರು ವಿಜಯ್ ಅವರನ್ನು ನೋಡುವ ಆ ರೀತಿಗೆ ಒಂದು ವಿಶೇಷವಾದ ಅರ್ಥವಿದೆ. ಯಾರು ಪ್ರೀತಿಯನ್ನು ಅಥವಾ ಅಭಿಮಾನವನ್ನು ಆಳವಾಗಿ ಅನುಭವಿಸಿರುತ್ತಾರೋ, ಅವರಿಗೆ ಮಾತ್ರ ಆ ನೋಟದ ಬೆಲೆ ತಿಳಿಯುತ್ತದೆ. ರಶ್ಮಿಕಾ ಅವರ ಕಣ್ಣುಗಳಲ್ಲಿ ವಿಜಯ್ ಬಗ್ಗೆ ಇರುವ ಆ ಪ್ರೀತಿ, ಕಾಳಜಿ ಮತ್ತು ಅಪಾರವಾದ ಅಭಿಮಾನ ಯಾವುದೇ ಭಾಷೆಗೂ ನಿಲುಕದ್ದು. ಅದು ಕೇವಲ ಒಬ್ಬ ವ್ಯಕ್ತಿಯನ್ನು ನೋಡುವ ದೃಷ್ಟಿಯಲ್ಲ, ಅದು ಅವರ ಸಂಪೂರ್ಣ ಅಸ್ತಿತ್ವವನ್ನು ಪ್ರೀತಿಸುವ ಪರಿ."

ರಶ್ಮಿಕಾ ಮಂದಣ್ಣ ಭಾವುಕ ಪ್ರತಿಕ್ರಿಯೆ:

ತನ್ನ ಬಗ್ಗೆ ಮತ್ತು ತನ್ನ ಜೀವನದ ಅತ್ಯಂತ ಆಪ್ತ ವ್ಯಕ್ತಿಯ ಬಗ್ಗೆ ಇಷ್ಟು ಸುಂದರವಾಗಿ ಬರೆದಿದ್ದನ್ನು ನೋಡಿ ರಶ್ಮಿಕಾ ಮಂದಣ್ಣ ಕಣ್ಣೀರು ಹಾಕಿದ್ದಾರೆ ಎನ್ನಬಹುದು. ಅವರು ಈ ಪೋಸ್ಟ್ ಅನ್ನು ಮರು ಹಂಚಿಕೊಂಡು ಅತ್ಯಂತ ಭಾವುಕರಾಗಿ ಹೀಗೆ ಬರೆದಿದ್ದಾರೆ: "ನನ್ನ ಬಗ್ಗೆ ಬರೆದಿರುವ ಇಷ್ಟು ಸುಂದರವಾದ ಬರಹವನ್ನು ಓದಿ ನಾನು ತುಂಬಾ ಭಾವುಕಳಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಷ್ಟು ಕಾಡುವ ಬರಹವನ್ನು ನಾನು ಓದಿರಲಿಲ್ಲ. ನನಗೆ ಹೇಳಲು ತುಂಬಾ ವಿಷಯಗಳಿವೆ, ಆದರೆ ಪದಗಳು ಸಾಲುತ್ತಿಲ್ಲ."

ಮುಂದುವರಿದು ಅವರು ತಮ್ಮ ಜೀವನದ ಪಯಣದ ಬಗ್ಗೆ ಮಾತನಾಡುತ್ತಾ, "ನನ್ನದೇ ಆದ ಒಂದು ಸ್ಥಾನವನ್ನು ನಾನು ಕಂಡುಕೊಳ್ಳುತ್ತಿದ್ದೇನೆ ಮತ್ತು ಆ ಪಯಣಕ್ಕಾಗಿ ನಾನು ಸದಾ ಕೃತಜ್ಞಳು. ನನ್ನ ಒಳಗಿನ ಭಾವನೆಗಳನ್ನು ಗುರುತಿಸಿ, ಅದನ್ನು ಇಷ್ಟು ಸುಂದರವಾಗಿ ಪದಗಳಲ್ಲಿ ಹಿಡಿದಿಟ್ಟಿದ್ದಕ್ಕೆ ಧನ್ಯವಾದಗಳು" ಎಂದು ಹೃದಯದ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ.

ಪ್ರೀತಿಯ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಸಿನಿಮಾ ಅಭಿಮಾನಿಗಳ ನಿದ್ದೆ ಗೆಡಿಸಿರುವ ವಿಷಯವೆಂದರೆ ರಶ್ಮಿಕಾ ಅವರು ಪ್ರೀತಿಯ ಬಗ್ಗೆ ನೀಡಿರುವ ಆ ಒಂದು ಸಾಲಿನ ಸಂದೇಶ. "ನಿಮಗೆ ಬಿಡುಗಡೆ ನೀಡುವಂತಹ ಪ್ರೀತಿಯನ್ನು ಕಂಡುಕೊಳ್ಳಿ" (Find a love that liberates you) ಎಂದು ರಶ್ಮಿಕಾ ಬರೆದಿದ್ದಾರೆ. ಈ ಮಾತು ಈಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಡುವಿನ ಪ್ರೀತಿ ಅಧಿಕೃತ ಎಂಬ ಮುದ್ರೆಯನ್ನು ಒತ್ತಿದಂತಿದೆ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಒಟ್ಟಿನಲ್ಲಿ, ಲೇಖಕಿ ದಾಮಿನಿ, ತಾರಾ ಅವರ ಬರಹ ಮತ್ತು ರಶ್ಮಿಕಾ ಅವರ ಈ ‘ಲವ್ ಕನ್ಫೆಷನ್’ ಶೈಲಿಯ ಪೋಸ್ಟ್ ಸದ್ಯ ಗಾಂಧಿನಗರದಿಂದ ಹೈದರಾಬಾದ್‌ವರೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ರಶ್ಮಿಕಾ ಅವರ ಈ ಹೊಸ ಅವತಾರ ಮತ್ತು ಅವರ ಮನದಾಳದ ಮಾತುಗಳು ಅವರ ಅಭಿಮಾನಿಗಳಿಗೆ ನಿಜಕ್ಕೂ ದೊಡ್ಡ ಸರ್ಪ್ರೈಸ್ ನೀಡಿದೆ. ರಶ್ಮಿಕಾ-ವಿಜಯ್ ಜೋಡಿಯ ಲವ್, ಮದುವೆ ಎಲ್ಲವೂ ಈಗ ದೇಶ ಹಾಗು ಜಗತ್ತಿನ ಗಮನ ಸೆಳೆದಿದ್ದು, ‘ಟಾಕ್ ಆಫ್ ದಿ ವರ್ಲ್ಡ್’ ಎಂಬಂತಾಗಿದೆ.

Source link

Leave a Reply

Your email address will not be published. Required fields are marked *