
ಬಯೋಪಿಕ್ ಮತ್ತು ಪಿರಿಯಡ್ ಸಿನಿಮಾಗಳತ್ತ ಒಲವು:
ತಮ್ಮ ಮುಂದಿನ ಗುರಿಗಳ ಬಗ್ಗೆ ವಿವರಿಸುತ್ತಾ, ರಶ್ಮಿಕಾ ಮಂದಣ್ಣ ತಮಗೆ ಬಯೋಪಿಕ್ (ಜೀವನಾಧಾರಿತ ಚಿತ್ರಗಳು) ಮತ್ತು ಪಿರಿಯಡ್ ಫಿಲ್ಮ್‌ಗಳ ಮೇಲೆ ಹೆಚ್ಚಿನ ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ. “ನಾನು ನನ್ನನ್ನು ಒಂದು ಚೌಕಟ್ಟಿಗೆ ಸೀಮಿತಗೊಳಿಸಲು ಬಯಸುವುದಿಲ್ಲ. ನನಗೆ ಕಲೆಯ ಎಲ್ಲಾ ಆಯಾಮಗಳನ್ನು ಅನ್ವೇಷಿಸುವ ಆಸೆ ಇದೆ. ನಾನು ಈಗಷ್ಟೇ ವಿಭಿನ್ನ ಶೈಲಿಯ ಸಿನಿಮಾಗಳನ್ನು ಅನ್ವೇಷಿಸಲು ಆರಂಭಿಸಿದ್ದೇನೆ, ನಟಿಯಾಗಿ ಕಲಿಯುವುದು ಇನ್ನೂ ಬಹಳಷ್ಟಿದೆ,” ಎಂದು ಅತ್ಯಂತ ವಿನಮ್ರವಾಗಿ ಹೇಳಿದ್ದಾರೆ.