Headlines

ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ‘ಥಮ’ ಬಿಡುಗಡೆ: ಸಿನಿಮಾ ಹೇಗಿದೆ?

ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ‘ಥಮ’ ಬಿಡುಗಡೆ: ಸಿನಿಮಾ ಹೇಗಿದೆ?


ನಟಿ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ನಟನೆಯ ಹೊಸ ಹಿಂದಿ ಸಿನಿಮಾ ಇಂದು (ಅಕ್ಟೋಬರ್ 21) ಬಿಡುಗಡೆಯಾಗಿದೆ. ರಶ್ಮಿಕಾ ಮಂದಣ್ಣ ನಟನೆಯ ‘ಥಮ’ ಸಿನಿಮಾ ಬಿಡುಗಡೆ ಆಗಿದ್ದು, ಇದು ಅವರ ನಟನೆಯ ಮೊದಲ ಹಾರರ್ ಸಿನಿಮಾ ಆಗಿದೆ. ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ನಾಯಕ. ಸಿನಿಮಾ ನೋಡಿದ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಹೇಗಿದೆ ಈ ಸಿನಿಮಾ, ಸಿನಿಮಾ ಹಿಟ್ ಆಗುತ್ತಾ ಇಲ್ಲವಾ? ಇಲ್ಲಿದೆ ಸಿನಿಮಾದ ಟ್ವಿಟರ್ ವಿಮರ್ಶೆ…

ಹರ್ಷವರ್ಧನ್ ರಾಮ್ ಎಂಬವರು ಟ್ವೀಟ್ ಮಾಡಿ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಥಮ’ ಸಿನಿಮಾ ಒಳ್ಳೆಯ ಕಾಮಿಡಿ-ಹಾರರ್ ಎಂಟರ್ಟೈನರ್ ಆಗಿದೆ. ಸಿನಿಮಾದಲ್ಲಿ ಒಳ್ಳೆಯ ಹಾಸ್ಯ, ಥ್ರಿಲ್ಲಿಂಗ್ ಅಂಶಗಳು ಮತ್ತು ಒಳ್ಳೆಯ ರೊಮ್ಯಾನ್ಸ್ ಕೂಡ ಇದೆ. ಇದು ನಿಜಕ್ಕೂ ಒಳ್ಳೆಯ ದೀಪಾವಳಿ ಸಿನಿಮಾ.

ವಸೀಮ್ ರೆಜಾ ಎಂಬವರು ಟ್ವೀಟ್ ಮಾಡಿ, ಸಿನಿಮಾಕ್ಕೆ ಐದರಲ್ಲಿ ನಾಲ್ಕು ಸ್ಟಾರ್ ಗಳನ್ನು ನೀಡಿದ್ದಾರೆ. ‘ಥಮ’ ಖಂಡಿತ ನೋಡಲೇ ಬೇಕಾದ ಸಿನಿಮಾ. ಅದ್ಭುತವಾದ ಆಕ್ಷನ್ ಇರುವ ಆಳವಾದ ಭಾವನಾತ್ಮಕ ದೃಶ್ಯಗಳನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬರುವ ಬೇತಾಳ ಮತ್ತು ತೋಳದ ನಡುವಿನ ಫೈಟ್ ಅದ್ಭುತವಾಗಿದೆ. ಒಟ್ಟಾರೆಯಾಗಿ ಇದೊಂದು ಒಳ್ಳೆಯ ಸಿನಿಮಾ.

ಇಟ್ಸ್ ಸಿನಿಮಾ ಹೆಸರಿನ ಟ್ವಿಟರ್ ಖಾತೆಯಲ್ಲಂತೂ ಐದಕ್ಕೆ ನಾಲ್ಕೂವರೆ ಸ್ಟಾರ್ ಗಳನ್ನು ನೀಡಲಾಗುತ್ತದೆ. ಮ್ಯಾಡ್ಲಾಕ್ ಸಂಸ್ಥೆ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟಿದೆ. ಹಾಸ್ಯ-ಹಾರರ್-ರೊಮ್ಯಾನ್ಸ್ ನ ಒಂದು ಒಳ್ಳೆಯ ಮಿಶ್ರಣ ಈ ಸಿನಿಮಾ. ಪಯಣಕ್ಕೆ ಈ ಸಿನಿಮಾ ಚೆನ್ನಾಗಿ ಬರುತ್ತದೆ. ಸಿನಿಮಾ ನೋಡುವಾಗ ನಿರೀಕ್ಷೆ ಮಾಡದೇ ಇರುವ ತಿರುವುಗಳು ಬರುತ್ತವೆ’.

ಫಿಲ್ಮಿ ಗೌತಮ್ ಎಂಬವರು ಟ್ವೀಟ್ ಮಾಡಿ, ಸಿನಿಮಾದ ಕೆಲವು ಭಾಗಗಳು ಬಹಳ ಚೆನ್ನಾಗಿದೆ. ಆದರೆ ಇಡೀ ಸಿನಿಮಾ ಆಗಿ ಪ್ರೇಕ್ಷಕನ ಮೇಲೆ ದೊಡ್ಡ ಪರಿಣಾಮವಾಗಲಿ, ಪ್ರಭಾವ ಆಗಲಿ ಬೀರುವುದಿಲ್ಲ. ಸಿನಿಮಾದ ಕೆಲವೆಡೆ ಒಳ್ಳೆಯ ನಗು ತರಿಸುವ ದೃಶ್ಯಗಳಿವೆ ಆದರೆ ಅವು ಕಡಿಮೆ ಇವೆ. ಈ ಸಿನಿಮಾ ‘ಬೇಡಿಯಾ 2’, ‘ಸ್ಟ್ರೀ 3’ ಮತ್ತು ‘ಶಕ್ತಿ ಶಾಲಿನಿ’ ಸಿನಿಮಾಗಳಿಗೆ ವೇದಿಕೆ ನಿರ್ಮಿಸಿದೆ ಆದರೆ ನಾವು ಈಗ ನೋಡಲು ಬಂದಿರುವ ‘ಥಮ’ ಸಿನಿಮಾವನ್ನು ಸಪ್ಪೆ ಮಾಡಿದೆ. ಮ್ಯಾಡ್ಲಾಕ್ ಹಾರರ್ ಸಿನಿಮಾ ಯೂನಿವರ್ಸ್ ನ ಕಳಪೆ ಸಿನಿಮಾ ಇದು’

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:35 pm, ಮಂಗಳವಾರ, 21 ಅಕ್ಟೋಬರ್ 25





Source link

Leave a Reply

Your email address will not be published. Required fields are marked *