Headlines

ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ

ಅವರು ರಶೀ, ಇವರು ವಿಜು: ರಶ್ಮಿಕಾ, ವಿಜಯ್ ದೇವರಕೊಂಡ ಪರಸ್ಪರ ಕರೆಯೋದು ಹೀಗೆ


ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ (ವಿಜಯ್ ದೇವರಕೊಂಡ) ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಉದಯಪುರದಲ್ಲಿ ಫೆಬ್ರವರಿ 26 ರಂದು ಈ ಸೆಲೆಬ್ರಿಟಿ ಜೋಡಿಯ ಮದುವೆ. ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ರಶ್ಮಿಕಾ (ರಶ್ಮಿಕಾ ಮಂದಣ್ಣ) ಮತ್ತು ವಿಜಯ್ ದೇವರಕೊಂಡ ಅವರು ಈ ಮೊದಲೇ ಹಲವು ಬಾರಿ ಸೂಚನೆ ನೀಡಿದ್ದರು. ನೇರವಾಗಿ ಪ್ರೀತಿಯನ್ನು ಒಪ್ಪಿಕೊಳ್ಳದೇ ಇದ್ದರೂ ಕೂಡ ಅವರ ವರ್ತನೆಯಲ್ಲಿ ಎಲ್ಲವೂ ಗೋಚರವಾಗುತ್ತಿತ್ತು. ಪರಸ್ಪರ ಪ್ರೀತಿಯಿಂದ ಅಡ್ಡಹೆಸರು (ಅಡ್ಡಹೆಸರು) ಕರೆಯುತ್ತಿದ್ದೇ ಈ ಮಾತಿಗೆ ಸಾಕ್ಷಿ.

ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರನ್ನು ವಿಜು ಎಂದು ಕರೆಯುತ್ತಾರೆ. ಅದೇ ರೀತಿ, ರಶ್ಮಿಕಾ ಮಂದಣ್ಣ ಅವರನ್ನು ವಿಜಯ್ ದೇವರಕೊಂಡ ಅವರು ರಶೀ ಎಂದು ಕರೆಯುತ್ತಿದ್ದರು. ಇದೆಲ್ಲ ಗುಟ್ಟಾಗಿ ನಡೆದಿದ್ದಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕಾ ಮಂದಣ್ಣ ಅವರು ಪ್ರೀತಿಯಿಂದ ವಿಜು ಎಂದು ಕರೆದಿದ್ದರು. ಆಗಲೇ ಅಭಿಮಾನಿಗಳಿಗೆ ಎಲ್ಲವೂ ಖಚಿತ.

ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ ಬಳಿಕ ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರರಂಗಕ್ಕೆ ಹಾರಿದರು. ಅಲ್ಲಿ ಅವರಿಗೆ ವಿಜಯ್ ದೇವರಕೊಂಡ ಜೊತೆ ಆಪ್ತತೆ ಬೆಳೆಯಿತು. ಇಬ್ಬರು ಜೊತೆಯಾಗಿ ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳನ್ನು ಮಾಡಿದರು. ಆ ನಂತರ ಅವರ ಇನ್ನಷ್ಟು ಕ್ಲೋಸ್ ಆದರು. ಅವರಿಬ್ಬರ ನಡುವೆ ಪ್ರೀತಿ ಚಿಗುರಿತು.

2025 ಅಕ್ಟೋಬರ್ ತಿಂಗಳಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಒಂದೇ ಒಂದು ಫೋಟೋ ಕೂಡ ಹೊರಬರಲಿಲ್ಲ. ಆ ನಂತರ ‘ದಿ ಗರ್ಲ್‌ಫ್ರೆಂಡ್’ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ರಶ್ಮಿಕಾ ಕೈಗೆ ವಿಜಯ್ ದೇವರಕೊಂಡ ಕಿಸ್ ಮಾಡಿದರು. ಆ ಮೂಲಕ ಅವರು ಪರೋಕ್ಷವಾಗಿ ತಮ್ಮ ಎಂಗೇಜ್ಮೆಂಟ್ ವಿಷಯವನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆಗೂ ಮುನ್ನ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಗಡಿಬಿಡಿ; ವಿಡಿಯೋ ವೈರಲ್

ಬಣ್ಣದ ಲೋಕದಲ್ಲಿ ಇಬ್ಬರಿಗೂ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಒಟ್ಟಿಗೆ ನಟಿಸಿದ್ದಾರೆ. ಸದ್ಯಕ್ಕೆ ಮದುವೆಗೆ ಅವಕಾಶ ಕಲ್ಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *