ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಫೆಬ್ರವರಿ 26 ರಂದು ಅದ್ದೂರಿಯಾಗಿ ಮದುವೆ ಆಗಿದ್ದರು. ನೋಡನೋಡುತ್ತಿದ್ದಂತೆಯೇ ಒಂದು ತಿಂಗಳು ಕಳೆದಿದೆ.
ಮದುವೆಯ ಫೋಟೋಗಳನ್ನು ಒಂದೊಂದಾಗಿಯೇ ಹಂಚಿಕೊಳ್ಳಲಾಗುತ್ತಿದೆ. ಭಾರಿ ಗ್ರ್ಯಾಂಡ್ ಆಗಿ ನಡೆದ ರಶ್ಮಿಕಾ ಮಂದಣ್ಣ-ವಿಜಯ್ ಮದುವೆಯ ಸುಂದರ ಕ್ಷಣಗಳು ಈ ಫೋಟೋಗಳಲ್ಲಿ ಸೆರೆಯಾಗಿವೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಬಟ್ಟೆಯನ್ನು ಸಖತ್ ರಾಯಲ್ ಆಗಿ ವಿನ್ಯಾಸಗೊಳಿಸಲಾಗಿದೆ. ನಂತರ ನಡೆದ ರಿಸೆಪ್ಷನ್ ಕೂಡ ತುಂಬಾ ಅದ್ದೂರಿಯಾಗಿ ಆಯೋಜನಗೊಂಡಿತ್ತು.
ಸಿನಿಮಾದಲ್ಲಿ ನಿಜಜೀವನದಲ್ಲೂ ರಶ್ಮಿಕಾ ಹಾಗೂ ವಿಜಯ್ ಜೋಡಿ ಆಗಿದ್ದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಮದುವೆಯ ಫೋಟೋಸ್ ನೋಡಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ‘ರಣಬಾಲಿ’ ಸಿನಿಮಾದಲ್ಲಿ ಕೂಡ ರಶ್ಮಿಕಾ ಹಾಗೂ ವಿಜಯ್ ಜೋಡಿಯಾಗುತ್ತಿದ್ದಾರೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.




