ವಿಜಯ್ ದೇವರಕೊಂಡ-ರಶ್ಮಿಕಾರಲ್ಲಿ ಮೊದಲು ಲವ್ ಪ್ರಪೋಸ್ ಮಾಡಿದ್ಯಾರು?: ನಿಮ್ಮ ಗೆಸ್ ಸುಳ್ಳಾಯ್ತು ನೋಡಿ

ವಿಜಯ್ ದೇವರಕೊಂಡ-ರಶ್ಮಿಕಾರಲ್ಲಿ ಮೊದಲು ಲವ್ ಪ್ರಪೋಸ್ ಮಾಡಿದ್ಯಾರು?: ನಿಮ್ಮ ಗೆಸ್ ಸುಳ್ಳಾಯ್ತು ನೋಡಿ

ವಿಜಯ್ ದೇವರಕೊಂಡ-ರಶ್ಮಿಕಾರಲ್ಲಿ ಮೊದಲು ಲವ್ ಪ್ರಪೋಸ್ ಮಾಡಿದ್ಯಾರು?: ನಿಮ್ಮ ಗೆಸ್ ಸುಳ್ಳಾಯ್ತು ನೋಡಿ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಿದೆ. ಇಷ್ಟು ದಿನ ಸಣ್ಣಪುಟ್ಟ ಸುಳಿವು ಸಿಕ್ಕಿದ್ರೂ ಜೋಡಿ ತಮ್ಮ ಪ್ರೀತಿ ಗುಟ್ಟು ಬಿಟ್ಟಿರಲಿಲ್ಲ. ಈಗ ಇಬ್ಬರ ಪ್ರೇಮ ಪಯಣದ ಒಂದೊಂದೇ ಕಥೆ ಹೊರಗೆ ಬರ್ತಿದೆ. ಯಾರು ಮೊದಲು ಪ್ರಪೋಸ್ ಮಾಡಿದ್ದು ಎಂಬ ವಿಷ್ಯ ಬಹಿರಂಗವಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸಿನಿಮಾ ಮಾಡ್ತಾ ಮಾಡ್ತಾ ಇಬ್ಬರ ಮಧ್ಯೆ ಸ್ನೇಹ ಚಿಗುರಿತ್ತು. ಆದ್ರೆ ರಶ್ಮಿಕಾ ಮನಸ್ಸಲ್ಲಿ ವಿಜಯ್ ವಿಜ್ಜು ಆಗಿದ್ದು ಆಗ್ಲೇ. ವಿಜಯ್ ದೇವರಕೊಂಡ ಪ್ರೀತಿಗೆ ಬಿದ್ದಿದ್ದ ರಶ್ಮಿಕಾ ಒಂದು ಹೆಜ್ಜೆ ಮುಂದೆ ಹೋದ್ರು.

ಹುಡುಗ್ರೇ ಹುಡುಗಿಯರಿಗೆ ಪ್ರಪೋಸ್ ಮಾಡ್ತಾರೆ ಎನ್ನುವ ಅಲಿಖಿತ ರೂಲ್ಸ್ ನಮ್ಮಲ್ಲಿದೆ. ಹುಡುಗಿಯರು ಕೂಡ ಪ್ರಪೋಸ್ ಮಾಡೋಕೆ ಸ್ವಲ್ಪ ಹಿಂದೇಟು ಹಾಕ್ತಾರೆ. ಆದ್ರೆ ರಶ್ಮಿಕಾ ಈ ವಿಷ್ಯದಲ್ಲಿ ಸ್ವಲ್ಪ ಡಿಫರೆಂಟ್. ರಶ್ಮಿಕಾಗೆ ವಿಜಯ್ ಮೇಲೆ ನಿಜವಾದ ಪ್ರೀತಿ ಚಿಗುರಿತ್ತು. ಸ್ನೇಹ ಅಂತ ಅದನ್ನು ಮುಚ್ಚಿಡಲು ಮನಸ್ಸಿರಲಿಲ್ಲ. ಹಾಗಾಗಿ ವಿಜಯ್ ದೇವರಕೊಂಡ ಮುಂದೆ ಪ್ರೀತಿ ನಿವೇದನೆ ಮಾಡಿದ್ರು ರಶ್ಮಿಕಾ ಮಂದಣ್ಣ.

ನ್ಯಾಷನಲ್ ಕ್ರಶ್ ರಶ್ಮಿಕಾ ಕಣ್ಣೇ ಎಲ್ಲವನ್ನು ಹೇಳುತ್ತೆ. ರಶ್ಮಿಕಾ, ವಿಜಯ್ ಅವ್ರನ್ನು ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದನ್ನು ಅವರ ನೋಟದಲ್ಲೇ ಪತ್ತೆ ಮಾಡ್ಬಹುದು. ಇನ್ನು ಈ ಪ್ರೀತಿ ವಿಜಯ್ ಗೆ ಗೊತ್ತಾಗ್ದೆ ಇರಲು ಸಾಧ್ಯವೇ ಇಲ್ಲ. ರಶ್ಮಿಕಾ ಜೊತೆ ಎರಡು ಸಿನಿಮಾ ಮಾಡಿದ್ದ, ಒಂದಿಷ್ಟು ಸುಂದರ ಕ್ಷಣಗಳನ್ನು ಕಳೆದಿದ್ದ ವಿಜಯ್ ದೇವರಕೊಂಡ, ರಶ್ಮಿಕಾ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ದರು.

ಫ್ಯಾನ್ಸ್ ಮುಂದೆ ವಿಜಯ್ ದೇವರಕೊಂಡ ಪ್ರೀತಿ ವಿಷ್ಯವನ್ನು ಬಿಚ್ಚಿಟ್ಟಿದ್ದಾರೆ. ಯಾರು ಮೊದಲು ಪ್ರಪೋಸ್ ಮಾಡಿದ್ದು ಎನ್ನುವ ಪ್ರಶ್ನೆಗೆ ರಶ್ಮಿಕಾ ಹೆಸರನ್ನು ಹೇಳಿದ್ದಾರೆ. ರಶ್ಮಿಕಾ ಒಂದು ಹೆಜ್ಜೆ ಮುಂದೆ ಹೋದ್ರು ಅಂತ ವಿಜಯ್ ದೇವರಕೊಂಡ ತಿಳಿಸಿದ್ದಾರೆ.

2018ರಲ್ಲಿ ರಶ್ಮಿಕಾ ಹಾಗೂ ವಿಜಯ್, ಗೀತ ಗೋವಿಂದಂ ಸಿನಿಮಾದಲ್ಲಿ ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದ್ರ ನಂತ್ರ 2019ರಲ್ಲಿ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ಎಲ್ಲೂ ತಮ್ಮ ಪ್ರೀತಿಯನ್ನು ಮಾಧ್ಯಮದ ಮುಂದೆ ಹೇಳಿರಲಿಲ್ಲ. ರಶ್ಮಿಕಾ ಹಾಗೂ ವಿಜಯ್ ಕೆಲ ಫೋಟೋಗಳನ್ನು ಸಿಂಕ್ ಮಾಡಿದ್ದ ಫ್ಯಾನ್ಸ್ ಪ್ರೀತಿ ಮಾಡ್ತಿದ್ದಾರೆ ಅಂತ ಗುಲ್ಲೆಬ್ಬಿಸಿದ್ದರು. ಕೆಲ ಕಾರ್ಯಕ್ರಮಗಳಲ್ಲಿ ರಶ್ಮಿಕಾಗೆ ನೇರವಾಗಿ ಪ್ರಶ್ನೆ ಕೇಳಿದ್ರೂ ರಶ್ಮಿಕಾ ಉತ್ತರ ನೀಡಿರಲಿಲ್ಲ. ಆದ್ರೆ ಯಾವ ಆಕ್ಟರ್ ಮದುವೆ ಆಗೋಕೆ ಇಷ್ಟ ಪಡ್ತೀರಿ ಎನ್ನುವ ಪ್ರಶ್ನೆ ಕೇಳಿದಾಗ ಮಾತ್ರ ರಶ್ಮಿಕಾ, ವಿಜಯ್ ಹೆಸರು ಹೇಳಿದ್ದರು.

ರಶ್ಮಿಕಾ ಹಾಗೂ ವಿಜಯ್ ಮದುವೆ, ಸಂಗೀತ ಕಾರ್ಯಕ್ರಮ ಸೇರಿದಂತೆ ಮದುವೆ ನಂತ್ರದ ಕಾರ್ಯಕ್ರಮಗಳ ವಿಡಿಯೋ, ಫೋಟೋಗಳು ವೈರಲ್ ಆಗ್ತಾನೆ ಇದೆ. ನಿನ್ನೆ ರಶ್ಮಿಕಾ ಹಾಗೂ ವಿಜಯ್ ಅಭಿಮಾನಿಗಳಿಗೆ ಮದುವೆ ಊಟ ಹಾಕಿಸಿದ್ದಾರೆ. ಅಲ್ಲಿ ರಶ್ಮಿಕಾ ಪ್ರೀತಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ಫ್ಯಾನ್ಸ್ ಗೆ ಊಟ ಬಡಿಸಿ, ಅವರ ಜೊತೆ ಮಾತನಾಡಿದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತಮ್ಮ ಸ್ವಭಾವದ ಮೂಲಕ ಸೂಪರ್ ಜೋಡಿ ಪಟ್ಟಕ್ಕೇರಿದ್ದಾರೆ.

Source link

Leave a Reply

Your email address will not be published. Required fields are marked *