
ರಶ್ಮಿಕಾ ಮಂದಣ್ಣ ಅವರೂ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನಾನು ನಿಮ್ಮೊಂದಿಗೆ ಸಾಮಿ ಸಾಮಿ (Sami Sami) ಹಾಡಿಗೆ ಹೆಜ್ಜೆ ಹಾಕಬೇಕು ಎಂದಿದ್ದರು. ಅದಕ್ಕೆ ರಶ್ಮಿಕಾ, ಅದು ಸಾಧ್ಯವೇ ಇಲ್ಲ, ನಾನು ಇನ್ನುಮುಂದೆ ಈ ನೃತ್ಯ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ನೀಡಿರುವ ಅವರು, ‘ನಾನು ಈಗಾಗಲೇ ಈ ಹಾಡಿಗೆ ಹಲವಾರು ಬಾರಿ ನೃತ್ಯ ಮಾಡಿಯಾಗಿದೆ, ಅಲ್ಲದೆ ಈ ಹಾಡಿಗೆ ನಾನು ಎಷ್ಟು ನೃತ್ಯ ಬಾರಿ ಮಾಡಿದ್ದೇನೆ ಎಂದರೆ ಈಗಲೇ ಸೊಂಟ ಬಿದ್ದು ಹೋಗಿದೆ. ವಯಸ್ಸಾದ ಮೇಲೆ ನನಗೆ ಬೆನ್ನು ನೋವು ಕಾಣಿಸಬಹುದು, ಅಷ್ಟು ಕುಣಿದಿದ್ದೇನೆ. ಅದಕ್ಕೆ ಇನ್ಮುಂದೆ ಜಪ್ಪಯ್ಯ ಎಂದರೂ ಇದಕ್ಕೆ ಡಾನ್ಸ್ ಮಾಡಲ್ಲ’ ಎಂದು ಚಟಾಕಿ ಹಾರಿಸಿದ್ದರು.