ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್

ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್

ದೇವರಕೊಂಡ ಜಸ್ಟ್​ ಫ್ರೆಂಡ್​: ದಳಪತಿಯನ್ನೇ ಮದ್ವೆಯಾಗೋದು ಎಂದು ದೃಷ್ಟಿ ತೆಗೆದ Rashmika Mandanna! ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿಯ ನಡುವೆ, ದಳಪತಿ ವಿಜಯ್ ವಿಚ್ಛೇದನದ ವದಂತಿ ಹಬ್ಬಿದೆ. ಈ ಸಮಯದಲ್ಲಿ, ರಶ್ಮಿಕಾ ತಾನು ದಳಪತಿ ವಿಜಯ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದ ಹಳೆಯ ವಿಡಿಯೋವೊಂದು ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ (Rashmika Mandanna and Vijaya Devarakonda) ಅವರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಹಲವಾರು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿರುವ ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.

ಇವರ ಮದುವೆಯ ದಿನವೇ ಇನ್ನೊಂದು ಸುದ್ದಿ ಸದ್ದು ಮಾಡಿತ್ತು. ಅದು ದಳಪತಿ ವಿಜಯ್​ ಮತ್ತು ಸಂಗೀತಾ (Thalapathy Vijay and Sangeeta) ಅವರು ತಮ್ಮ 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ ಎನ್ನುವ ವಿಷಯ. ಇದು ಕೂಡ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದರ ನಡುವೆಯೇ, ರಶ್ಮಿಕಾ ಮಂದಣ್ಣ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ನಟಿ, ನಾನು ಮದುವೆಯಾಗುವುದು ದಳಪತಿ ವಿಜಯ್​ ಅವರನ್ನೇ ಎಂದು ಹೇಳಿ ಅವರ ದೃಷ್ಟಿ ತೆಗೆದಿದ್ದರು!

siyota__boy ಎನ್ನುವ ಇನ್​ಸ್ಟಾಗ್ರಾಮ್​ ಪುಟದಲ್ಲಿ ಇದನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಆ್ಯಂಕರ್​ ನಿಮ್ಮ ಫ್ರೆಂಡ್​, ಲವ್​ ಮತ್ತು ಮದುವೆಯ ಬಗ್ಗೆ ಮಾತನಾಡುವಂತೆ ರಶ್ಮಿಕಾ ಅವರನ್ನು ಕೇಳಿದ್ದಾರೆ.

ಆಗ ರಶ್ಮಿಕಾ ಅವರು, ವಿಜಯ್​ ದೇವರಕೊಂಡ ಜಸ್ಟ್​ ನನ್ನ ಫ್ರೆಂಡ್​ ಅಷ್ಟೇ, ವಿಜಯ್​ ಸೇತುಪತಿ ನನ್ನ ಲವ್​, ಆದ್ರೆ ಮದುವೆಯಾಗೋದು ಮಾತ್ರ ವಿಜಯ್​ ದಳಪತಿ ಅವರನ್ನು ಎಂದು ಅಲ್ಲಿಯೇ ಇದ್ದ ದಳಪತಿ ಅವರಿಗೆ ದೃಷ್ಟಿ ತೆಗೆದಿದ್ದಾರೆ. ನಟಿಯ ಮಾತು ಕೇಳಿ ದಳಪತಿ ತುಂಟನಗು ಬೀರಿದ್ದಾರೆ.

ಇದೀಗ ರಶ್ಮಿಕಾ ಮದುವೆ ಹಾಗೂ ದಳಪತಿ ಡಿವೋರ್ಸ್​ ಎರಡೂ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಡಿಯೋಗೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ದಳಪತಿ ಮತ್ತು ನಟಿ ತ್ರಿಷಾ ನಡುವೆ ಏನೋ ಸಂಬಂಧವಿದೆ ಎಂದು ಹೇಳುವ ಹೊತ್ತಿನಲ್ಲಿಯೇ ರಶ್ಮಿಕಾ ಅವರು ಈ ಮಾತನ್ನು ತಮಾಷೆಗೆ ಹೇಳಿದ್ದರೂ ಭಾರಿ ಚರ್ಚೆಗೆ ಗ್ರಾಸವಾಗಿದೆ.

Source link

Leave a Reply

Your email address will not be published. Required fields are marked *