Headlines

ರಶ್ಮಿಕಾ ಬಹು ನಿರೀಕ್ಷೆ ಇಟ್ಟಿದ್ದ ‘ದಿ ಗರ್ಲ್​​ಫ್ರೆಂಡ್’ ಕತೆ ಏನಾಯ್ತು? ಒಟಿಟಿಗೆ ಯಾವಾಗ?

ರಶ್ಮಿಕಾ ಬಹು ನಿರೀಕ್ಷೆ ಇಟ್ಟಿದ್ದ ‘ದಿ ಗರ್ಲ್​​ಫ್ರೆಂಡ್’ ಕತೆ ಏನಾಯ್ತು? ಒಟಿಟಿಗೆ ಯಾವಾಗ?


ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಂದರ ಹಿಂದೊಂದರಂತೆ ಸತತ ಮೂರು 1000 ಕೋಟಿ ಗಳಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ರಶ್ಮಿಕಾಗೆ ಈವರೆಗೆ ಕೇವಲ ಮರ ಸುತ್ತುವ ಪಾತ್ರಗಳೇ ದೊರಕಿದ್ದು ಹೆಚ್ಚು. ನಾಯಕ ಪ್ರಧಾನ ಸಿನಿಮಾಗಳಲ್ಲಿಯೇ ರಶ್ಮಿಕಾ ನಟಿಸಿದ್ದು ಹೆಚ್ಚು. ಆದರೆ ಮೊದಲ ಬಾರಿಗೆ ಮಹಿಳಾ ಪ್ರಧಾನ ನಟನೆಗೆ ಹೆಚ್ಚು ಅವಕಾಶ ಇದ್ದ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದರು, ಅದುವೇ ‘ದಿ ಗರ್ಲ್ ಫ್ರೆಂಡ್’. ಈ ಸಿನಿಮಾ ಮೇಲೆ ರಶ್ಮಿಕಾಗೆ ಭಾರಿ ನಿರೀಕ್ಷೆ ಇತ್ತು, ಸಿನಿಮಾಕ್ಕೆ ಭರ್ಜರಿ ಪ್ರಚಾರವನ್ನೂ ಸಹ ತಾವೇ ಮುಂದೆ ನಿಂತು ಮಾಡಿದರು. ಕೊನೆಗೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾದ ಕತೆ ಏನಾಯ್ತು?

‘ದಿ ಗರ್ಲ್‌ಫ್ರೆಂಡ್’ ಸಿನಿಮಾ ನವೆಂಬರ್ 7 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಈ ವರೆಗೆ 30 ಕೋಟಿ ರೂಪಾಯಿಗಳಿಗೆ ಬಂದಿದೆ. ಆ ಮೂಲಕ ಸಿನಿಮಾ ದೊಡ್ಡ ಹಿಟ್ ಆಗಿಲ್ಲದಿದ್ದರೂ ಕೆಲವು ಜನರನ್ನಾದರೂ ತಲುಪಿದೆ ಎಂದು ಹೇಳಲು ಅಡ್ಡಿಯಿಲ್ಲ. ಮಹಿಳಾ ಪ್ರಧಾನ ಸಿನಿಮಾಗಳು ಎಲ್ಲ ಮಹಿಳಾಪರ ಸಂದೇಶಗಳನ್ನು ಹೊಂದಿರುವ ಸಿನಿಮಾಗಳು ಗೆದ್ದಿದ್ದು ವಿರಳ. ಆದರೆ ‘ದಿ ಗರ್ಲ್‌ಫ್ರೆಂಡ್’ 30 ಕೋಟಿ ಗಳಿಸಿದೆ. ದೊಡ್ಡ ಗೆಲುವಲ್ಲದಿದ್ದರೂ ಸೋಲಂತೂ ಅಲ್ಲ ಅನ್ನಬಹುದಾದ ಸ್ಥಿತಿಯಲ್ಲಿದೆ ಸಿನಿಮಾ.

‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಅಂದರೆ ಧೀರಜ್ ಮತ್ತು ವಿದ್ಯಾ ಅವರ ನಿರ್ಮಾಣ ಮಾಡಿದ್ದು, ಸಿನಿಮಾಕ್ಕೆ ಸುಮಾರು 30 ಕೋಟಿ ಬಜೆಟ್ ಹಾಕಿದ್ದರು. ಇದೀಗ ಸಿನಿಮಾದ ಚಿತ್ರಮಂದಿರದ ಕಲೆಕ್ಷನ್ 30 ಕೋಟಿ ಆಗಿದ್ದು, ನಿರ್ಮಾಪಕರಿಗೆ ಸುಮಾರು 50% ಹಣ ಸಿಕ್ಕಿದೆ ಎನ್ನಲಾಗುತ್ತಿದೆ. ಇನ್ನು ಸಿನಿಮಾದ ಒಟಿಟಿ ಹಕ್ಕುಗಳು, ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ಸಾಕಷ್ಟು ಒಳ್ಳೆಯ ಮೊತ್ತವೇ ನಿರ್ಮಾಪಕರಿಗೆ ತಲುಪಿದೆಯಂತೆ.

ಇದನ್ನೂ ಓದಿ:ಗೆಳತಿಯೊಟ್ಟಿಗೆ ಕೈ-ಕೈ ಹಿಡಿದು ಸುತ್ತಾಡಿದ ರಶ್ಮಿಕಾ ಮಂದಣ್ಣ

‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಡಿಸೆಂಬರ್ 11 ರಂದು ಒಟಿಟಿಗೆ ಬರಲಿದೆ. ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಚರ್ಚೆ ಇದ್ದ ಕಾರಣ, ಸಿನಿಮಾದ ಡಿಜಿಟಲ್ ಹಕ್ಕುಗಳ ಮೊತ್ತಕ್ಕೆ ಮಾರಾಟವಾಗಿದೆ. ಸಿನಿಮಾದ ಒಟಿಟಿ ಹಕ್ಕುಗಳಿಗೆ 15 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಟಿವಿ ಹಕ್ಕುಗಳಿಗೆ ಸಹ ಒಳ್ಳೆಯ ಮೊತ್ತವೇ ದೊರೆತಿದೆ. ಒಟ್ಟಿನಲ್ಲಿ ರಶ್ಮಿಕಾ ಮೊದಲ ಬಾರಿಗೆ ಪ್ರಯೋಗ ಮಾಡಿದರು, ಅದರಲ್ಲಿ ಸಣ್ಣ ಯಶಸ್ಸನ್ನಂತೂ ಗಳಿಸಿದ್ದಾರೆ.

ಇದೀಗ ರಶ್ಮಿಕಾ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’, ಕಾರ್ತಿಕ್ ಆರ್ಯನ್-ಕೃತಿ ಸೆನನ್ ನಟಿಸುತ್ತಿರುವ ‘ಕಾಕ್ಟೇಲ್ 2’, ಟೈಗರ್ ಶ್ರಾಫ್ ಜೊತೆಗೆ ಹೊಸ ಸಿನಿಮಾ, ‘ಮೈಸಾ’ ಹೆಸರಿನ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ. ‘ಹಾಂಟೆಡ್, ವುಂಡೆಡ್, ಬ್ರೋಕನ್’ ಹೆಸರಿನ ಆಕ್ಷನ್ ಸಿನಿಮಾ. ತಮಿಳಿನಲ್ಲಿ ಅಜಿತ್ ಅವರ ಜೊತೆಗೆ ಸಿನಿಮಾ, ‘ಪುಷ್ಪ 3’ ಇನ್ನೂ ಕೆಲ ಸಿನಿಮಾಗಳು ಅವರ ಕೈಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *