Headlines

ರಶ್ಮಿಕಾ ಹೊಸ ಚಿತ್ರದ ಮೊದಲ ದಿನದ ಕಲೆಕ್ಷನ್ 1 ಕೋಟಿ; ಮುಗ್ಗರಿಸಿದ ನಟಿ

ರಶ್ಮಿಕಾ ಹೊಸ ಚಿತ್ರದ ಮೊದಲ ದಿನದ ಕಲೆಕ್ಷನ್ 1 ಕೋಟಿ;  ಮುಗ್ಗರಿಸಿದ ನಟಿ


ನಟಿ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಅವರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಒಂದಷ್ಟು ಜನರ ಚಿತ್ರಮಂದಿರಕ್ಕೆ ನುಗ್ಗುತ್ತಾರೆ. ಒಂದಷ್ಟು ಒಳ್ಳೆಯ ಕಲೆಕ್ಷನ್ ಆಗುತ್ತದೆ ಎಂಬ ನಂಬಿಕೆ ನಿರ್ಮಾಪಕರದ್ದು. ಈಗ ಅವರ ನಟನೆಯ ‘ದಿ ಗರ್ಲ್ ಫ್ರೆಂಡ್’ ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಚಿತ್ರ ಅಂದುಕೊಂಡಂತೆ ಕಲೆಕ್ಷನ್ ಮಾಡಿಲ್ಲ. ಈ ಮೊದಲ ದಿನದ ಕಲೆಕ್ಷನ್ ಕೇವಲ 1 ಕೋಟಿ ರೂಪಾಯಿ ಅನ್ನೋದು ಬೇಸರದ ವಿಚಾರ ಚಿತ್ರ.

ರಶ್ಮಿಕಾ ಮಂದಣ್ಣ ಅವರು ಇಷ್ಟು ದಿನ ನಟಿಸಿದ ಸಿನಿಮಾಗಳೆಲ್ಲವೂ ಸ್ಟಾರ್ ಹೀರೋಗಳು ಇರುವಂತಹ ಸಿನಿಮಾಗಳೇ ಆಗಿವೆ. ಬಜೆಟ್ ಕೂಡ ಜೋರಾಗೇ ಇರುತ್ತಿತ್ತು. ಇನ್ನು, ರಿಲೀಸ್ ಗೂ ಮೊದಲು ಒಂದು ಅಬ್ಬರದ ಜೊತೆ ಚಿತ್ರ ಬಿಡುಗಡೆ ಆಗುತ್ತಿದೆ. ಆದರೆ, ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಮಾತ್ರ ಇದಕ್ಕೆ ಭಿನ್ನ. ಈ ಚಿತ್ರ ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆದ ಸಿನಿಮಾ ಮೊದಲ ದಿನ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ವಿಫಲವಾಗಿದೆ.

ರಶ್ಮಿಕಾ ನಟನೆಯ ‘ಅನಿಮಲ್’ (900 ಕೋಟಿ ರೂಪಾಯಿ), ‘ಪುಷ್ಪ 2’ (1742 ಕೋಟಿ ರೂಪಾಯಿ), ‘ಛಾವಾ’ (800 ಕೋಟಿ ರೂಪಾಯಿ), ‘ಥಾಮಾ’ (120 ಕೋಟಿ ರೂಪಾಯಿ) ಸಿನಿಮಾಗಳು ಒಳ್ಳೆಯ ಗಳಿಕೆ ಮಾಡಿದವು. ಈ ಎಲ್ಲಾ ಸಿನಿಮಾಗಳಿಗೆ ಭರ್ಜರಿ ಪ್ರಚಾರ ಕೊಡಲಾಗಿದೆ. ಆದರೆ, ‘ದಿ ಗರ್ಲ್ಫ್ರೆಂಡ್’ ಚಿತ್ರ ಹಾಗಲ್ಲ. ಈ ಚಿತ್ರದಲ್ಲಿ ಕನ್ನಡದ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೂಡ ನೀಡಿಲ್ಲ. ಜೊತೆಗೆ ಇದು ರೆಗ್ಯುಲರ್ ಸಿನಿಮಾ ಕೂಡ ಅಲ್ಲ. ಹೀಗಾಗಿ, ಇದು ಜನರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾ ಮೊದಲ ಬಾರಿಗೆ ಮುಗ್ಗರಿಸಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆ ಇದೆ’: ಕನ್ನಡಿಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಮಾತು

ಇನ್ನು, ‘ದಿ ಗರ್ಲ್ಫ್ರೆಂಡ್’ ಚಿತ್ರದ ಬಜೆಟ್ ಕೂಡ ಕಡಿಮೆಯೇ. ಹೀಗಾಗಿ, ನಿರ್ಮಾಪಕರಿಗೆ ದೊಡ್ಡ ನಷ್ಟ ಆಗೋದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ. ‘ದಿ ಗರ್ಲ್‌ಫ್ರೆಂಡ್’ ಸಿನಿಮಾದ ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. ಕಪಲ್ ಲವ್ಸ್ಟೋರಿನ ಇದು ಹೊಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:02 am, ಶನಿ, 8 ನವೆಂಬರ್ 25



Source link

Leave a Reply

Your email address will not be published. Required fields are marked *