ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ, ವಿಜಯ್ ಕಾಲೆಳೆದಿದ್ದಕ್ಕೆ ಗರಂ ಆದ ರಶ್ಮಿಕಾ, ‘ಇನ್ನು ಮುಂದೆ ನಿನ್ನ ಜೊತೆ ಯಾವುದೇ ಸಿನಿಮಾ ಮಾಡುವುದಿಲ್ಲ’ ಎಂದು ಹುಸಿ ಮುನಿಸು ತೋರಿಸಿದ್ದರು.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಮದುವೆಯಾದಾಗಿನಿಂದಲೂ ಅವರಿಬ್ಬರ ಕುರಿತಾದ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇವೆ.

ಅಷ್ಟಕ್ಕೂ ಇವರಿಬ್ಬರದ್ದು ತುಂಬಾ ಹಳೆಯ ಸ್ನೇಹ, ಪ್ರೀತಿಯಾಗಿದ್ದರೂ ಅದನ್ನು ಬಿಟ್ಟುಕೊಟ್ಟವರಲ್ಲ. ಬೇರೆ ಬೇರೆ ದೇಶ ಸುತ್ತಿ ಬಂದರೂ ತಾವು ಮದುವೆಯಾಗುವ ವಿಷ್ಯ ಮಾತ್ರ ಗುಟ್ಟಾಗಿಯೇ ಇಟ್ಟಿದ್ದರು.

ಇದೀಗ ಹಳೆಯ ವಿಡಿಯೋ ಒಂದರಲ್ಲಿ ರಶ್ಮಿಕಾ, ನಾನು ನಿನ್ನ ಜೊತೆ ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವುದಿಲ್ಲ. ಆಗ ನಿನಗೆ ಗೊತ್ತಾಗತ್ತೆ, ನನ್ನ ಮಹತ್ವ ಎಂದು ಹೇಳಿದ್ದರು.

ಯಾವುದೇ ಒಂದು ಸಂದರ್ಶನದಲ್ಲಿ ವಿಜಯ ದೇವರಕೊಂಡ ರಶ್ಮಿಕಾ ಕಾಲೆಳೆದಿದ್ದರು. ಆಗ ಸ್ವಲ್ಪ ಗರಂ ಆಗಿದ್ದ ರಶ್ಮಿಕಾ, ನಾನು ನಿನ್ನ ಜೊತೆ ಯಾವುದೇ ಸಿನಿಮಾದಲ್ಲಿ ಪಾತ್ರ ಮಾಡುವುದಿಲ್ಲ. ನೀನೇ ಕಾಲ್ ಮಾಡಿ ಮಾಡಿ ರಿಕ್ವೆಸ್ಟ್ ಮಾಡಬೇಕು, ಹಾಗಾಗತ್ತೆ ನೋಡು ಎಂದಿದ್ದರು.

ಯಾರ ಜೊತೆಯಾದ್ರೂ ಸಿನಿಮಾ ಮಾಡ್ಕೋ, ಯಾರ ಜೊತೆಯಾದರೂ ಸಿನಿಮಾಕ್ಕೆ ಸಹಿ ಹಾಕಿಸಿಕೋ, ನಾನು ಯಾವುದೇ ಚಿತ್ರಕ್ಕೆ ನಿನ್ನ ಜೊತೆ ಸಹಿ ಹಾಕುವುದಿಲ್ಲ ಎಂದು ಹುಸಿ ಮುನಿಸು ತೋರಿಸಿದ್ದರು. ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ.

Source link
ಇನ್ಮುಂದೆ ನಿನ್ ಜೊತೆ ಸಿನಿಮಾ ಮಾಡಲ್ಲ: ವಿಜಯ್ ದೇವರಕೊಂಡಗೆ ರಶ್ಮಿಕಾ ಪ್ರತಿಜ್ಞೆ! ಆಗಿದ್ದೇನು?