ಕೊನೆಗೂ ಮದುವೆ ವಿಷಯ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ

ಕೊನೆಗೂ ಮದುವೆ ವಿಷಯ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ


ವಿಜಯ್ ದೇವರಕೊಂಡ ಜೊತೆ ರಶ್ಮಿಕಾ (ರಶ್ಮಿಕಾ ಮಂದಣ್ಣ) ಮಂದಣ್ಣ ಅವರು ಇನ್ನು ಕೆಲವೇ ದಿನಗಳಲ್ಲಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಫೆಬ್ರವರಿ 26 ರಂದು ಇವರ ಮದುವೆ ನಡೆಯುತ್ತಿದೆ. ಈ ವಿವಾಹ ಅವರಿಗೆ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ. ಈಗ ರಶ್ಮಿಕಾ ಮಂದಣ್ಣ ಅವರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಕಳುಹಿಸಿದ ಸಂದೇಶಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿ, ಮದುವೆ ಒಪ್ಪಿಕೊಂಡಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ತೆರೆಮೇಲೆ ಒಟ್ಟಿಗೆ ನಟಿಸಿದವರು. ಬಣ್ಣ ಹಚ್ಚುತ್ತಲೇ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಇವರ ಪ್ರೀತಿ ಆರಂಭ ಆಗಿದ್ದು ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಗುಟ್ಟಾಗಿ ಇವರ ನಿಶ್ಚಿತಾರ್ಥ ನಡೆದಿತ್ತು. ಈಗ ವಿವಾಹ ಆಗುವ ಮೂಲಕ ಅವರ ಸಂಬಂಧಕ್ಕೆ ಹೊಸ ಅರ್ಥ ಸಿಗುತ್ತಿದೆ.

ಬಾಲಿವುಡ್ ಹಂಗಾಮ್ ತಂಡದವರು ರಶ್ಮಿಕಾ ಮಂದಣ್ಣಗೆ ‘ಅಭಿನಂದನೆಗಳು’ ಎಂಬ ಸಂದೇಶ ಕಳುಹಿಸಿದಂತೆ. ಸಾಮಾನ್ಯವಾಗಿ ಗಾಸಿಪ್ ಆದರೆ, ಈ ವಿಷಯದಲ್ಲಿ ಸೈಲೆಂಟ್ ಆಗುತ್ತಾರೆ. ಆದರೆ, ರಶ್ಮಿಕಾ ಹಾಗೆ ಮಾಡಿಲ್ಲ. ಅವರು ‘ಧನ್ಯವಾದಗಳು’ ಎಂದು ಉತ್ತರಿಸಿದ್ದಾರೆ. ಇದಕ್ಕೆ ನಗುವ ಎಮೋಜಿ ಕೂಡ ಹಾಕಿದ್ದಾರಂತೆ. ಈ ಮೂಲಕ ವಿವಾಹದ ವಿಷಯವನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ವಿದೇಶಿ ಸಂಸ್ಥೆಯ ಭದ್ರತೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರದಲ್ಲಿ ಮದುವೆ ಆಗುತ್ತಿದೆ. ಇದಕ್ಕೆ ಐಷಾರಾಮಿ ಹೋಟೆಲ್ ಬುಕ್ ಆಗಿದ್ದು, ಸಿದ್ಧತೆ ನಡೆಯುತ್ತಿದೆ. ಇತ್ತೀಚೆಗೆ ದಂಪತಿಯ ಆಮಂತ್ರಣಪತ್ರ ವೈರಲ್ ಆಗಿ ಗಮನ ಸೆಳೆಯಿತು. ವಿವಾಹದ ಬಳಿಕ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ಆಯೋಜನೆ ಮಾಡಲಾಗಿದೆ. ಮಾರ್ಚ್ 4 ರಂದು ಈ ಆರತಕ್ಷತೆ ನಿಗದಿಯಾಗಿದೆ. ಡೆಸ್ಟಿನೇಷನ್ ವೆಡ್ಡಿಂಗ್ ಗೆ ಉದಯಪುರ ಒಳ್ಳೆಯ ಜಾಗ. ಅನೇಕ ಸೆಲೆಬ್ರಿಟಿಗಳು ಇಲ್ಲಿ ವಿವಾಹ ಆಗಿದ್ದಾರೆ. ಈ ಸಾಲಿಗೆ ರಶ್ಮಿಕಾ ಕೂಡ ಸೇರುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ‘ಗೀತ ಗೋವಿಂದಂ’ ಧಾರಾವಾಹಿಯಲ್ಲಿ. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *