ಛತ್ತೀಸ್‌ಗಢದ ಗೋದಾಮುಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 7 ಕೋಟಿ ರೂಪಾಯಿ ಮೌಲ್ಯದ 26,000 ಕ್ವಿಂಟಾಲ್ ಭತ್ತ ನಾಶವಾಗಿದೆ. ಇದಕ್ಕೆ ಅಧಿಕಾರಿಗಳು ಇಲಿಗಳನ್ನು ದೂಷಿಸಿದ್ದು, ಇದು ಭ್ರಷ್ಟಾಚಾರ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂದು ವಿಪಕ್ಷಗಳು ಆರೋಪಿಸಿ ಪ್ರತಿಭಟನೆ ಆರಂಭಿಸಿವೆ.
ರಾಯ್ಪುರ: ದಾಸ್ತಾನು ಕೇಂದ್ರಗಳಲ್ಲಿರಿಸಿದ್ದ ಸುಮಾರು 7 ಕೋಟಿ ರು. ಮೌಲ್ಯದ 26000 ಟನ್ ಭತ್ತ ನಾಶವಾಗಿದ್ದಕ್ಕೆ ಛತ್ತೀಸ್‌ಗಢ ಸರ್ಕಾರ ಇಲಿಗಳನ್ನು ದೂಷಿಸಿ, ಕೈತೊಳೆದುಕೊಳ್ಳುವ ಯತ್ನ ಮಾಡಿದೆ. ಇದು ವಿಪಕ್ಷಗಳನ್ನು ಕೆರಳಿಸಿದ್ದು, ‘ವಾಂಟೆಡ್ ರ್‍ಯಾಟ್ಸ್’ ಎಂಬ ಅಭಿಯಾನ ಆರಂಭಿಸಿವೆ.

ಕಬೀರಧಾಮ ಜಿಲ್ಲೆಯ 2 ಗೋದಾಮುಗಳಲ್ಲಿ ಇರಿಸಲಾಗಿದ್ದ 26,000 ಕ್ವಿಂಟಾಲ್ ಭತ್ತದಲ್ಲಿ ಒಂದಿಷ್ಟು ಭಾಗ ಕಾಣೆಯಾಗಿದ್ದರೆ, ಉಳಿದದ್ದು ಹಾಳಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳು ಇಂತಹ ಉತ್ತರವನ್ನು ನೀಡಿದ್ದಾರೆ.

‘ಇಲಿ ಅಥವಾ ಗೆದ್ದಲು ತಿಂದಿರಬಹುದು. ಇಲ್ಲವೇ ತೇವಾಂಶ ನಷ್ಟದಿಂದಾಗಿ ತೂಕ ಕ್ಷೀಣಿಸಿರಬಹುದು’ ಎನ್ನುವ ಮೂಲಕ ಭ್ರಷ್ಟಾಚಾರದ ಆರೋಪದಿಂದ ಅಧಿಕಾರಿಗಳು ಜಾರಿಕೊಂಡಿದ್ದರು.

ಇದನ್ನೂ ಓದಿ : 25 ವರ್ಷದಲ್ಲಿ ಕೇವಲ 1 ಕಿ.ಮೀ ರಸ್ತೆ ನಿರ್ಮಾಣ: ನೈಸ್ ರಸ್ತೆಯ ಕಥೆ ಅಂತ್ಯ? ಹೈಕೋರ್ಟ್‌ನಿಂದ ಮಹತ್ವದ ಆದೇಶ

ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕರು, ‘ಅವು 4 ಕಾಲಿನ ಮೂಷಿಕಗಳೇ ಅಥವಾ 2 ಕಾಲಿನವುಗಳೇ’ ಎಂದು ಪ್ರಶ್ನಿಸಿದ್ದು, ‘30 ಕೋಟಿ ರು. ಭತ್ತದ ಹಗರಣವನ್ನು ಮುಚ್ಚಿಹಾಕಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. ಜತೆಗೆ, ಬಿಜೆಪಿ ನಾಯಕರ ತಲೆ ಮೇಲೆ ಇಲಿಗಳ ಚಿತ್ರವಿರುವ ಪೋಸ್ಟರ್ ಪ್ರದರ್ಶಿಸಿ ‘ಇಲಿಗಳು ಬೇಕಾಗಿದ್ದಾವೆ’ ಎಂದು ಪ್ರತಿಭಟಿಸಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್‌ನ 250 ಕೋಟಿಯ 53 ಎಕರೆ ಅಕ್ರಮ ರಿಜಿಸ್ಟರ್ ಕೇಸ್‌ನಲ್ಲಿ ರೋಚಕ ತಿರುವು

Source link
ಇಲಿಗಳು 7 ಕೋಟಿ ರು. ಮೌಲ್ಯದ 26000 ಟನ್ ಭತ್ತ ತಿಂದು ತೇಗಿದವಂತೆ! ಅಕ್ಕಿ ನಾಪತ್ತೆಗೆ ಸರ್ಕಾರದ ಉತ್ತರ