
ದಕ್ಷಿಣದಲ್ಲಿ ಹಿಂದಿನಿಂದಲೂ ಬಾಲಿವುಡ್ ನಟಿಯರದ್ದೇ ಹವಾ. ಮುಂಬೈನಿಂದಲೇ ಹೆಚ್ಚು ನಟಿಯರು ಸೌತ್‌ಗೆ ಬರುತ್ತಿದ್ದರು. ದಕ್ಷಿಣದಲ್ಲಿ ಎರಡು ಮೂರು ಸಿನಿಮಾ ಮಾಡಿ, ನಂತರ ಬಾಲಿವುಡ್‌ಗೆ ಹೋದವರು ಹಲವರಿದ್ದಾರೆ. ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಅವರಂತಹವರು ಮೊದಲು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿದ ನಂತರವೇ ಬಾಲಿವುಡ್ ಆಳಿದರು. ಇನ್ನು ಟಾಲಿವುಡ್‌ನಲ್ಲಿ ಕೆಲವು ಸಿನಿಮಾ ಮಾಡಿ ಬಾಲಿವುಡ್‌ಗೆ ಹೋದ ನಟಿಯೊಬ್ಬರು, ಬಹಳ ಕಾಲದ ನಂತರ ಮತ್ತೆ ತೆಲುಗು ತೆರೆಗೆ ಕಾಲಿಡುತ್ತಿದ್ದಾರೆ. ಆ ನಟಿ ಬೇರಾರೂ ಅಲ್ಲ, ರವೀನಾ ಟಂಡನ್.